ETV Bharat / state

ಕುಟುಂಬಸ್ಥರೊಂದಿಗೆ ಜೈಲುಹಕ್ಕಿಗಳ ಮಾತುಕತೆಗೆ ಪ್ರಿಸನ್​ ಕಾಲ್​ ಸಿಸ್ಟಂ ಜಾರಿ!! - Corona'a Latest News

ಜೈಲಿನಲ್ಲಿರುವ ಕೈದಿಗಳಿಗೂ ಕೊರೊನಾ ಭೀತಿ ಎದುರಾಗಿದ್ದ ಹಿನ್ನೆಲೆ ತೀವ್ರ ಕಟ್ಟೆಚ್ಚರ ವಹಿಸಲಾಗಿತ್ತು. ಇದೀಗ ಇಲ್ಲಿನ ಉಪಕಾರಾಗೃಹದಲ್ಲಿ ಪ್ರಿಸನ್ ಕಾಲ್​​ ಸಿಸ್ಟಂ ಜಾರಿಗೆ ತರುವ ಮೂಲಕ, ಅಪರಾಧಿಗಳ ಹಾಗೂ ವಿಚಾರಣಾಧೀನ ಕೈದಿಗಳ ಕುಟುಂಬಸ್ಥರೊಂದಿಗೆ ಸಂಪರ್ಕದಿಂದಿರಲು ಅನುಕೂಲ ಮಾಡಿಕೊಡಲು ಮುಂದಾಗಲಾಗಿದೆ..

Prison Call System Implementation of Prisoner to Conversations with Families
ಕುಟುಂಬಸ್ಥರೊಂದಿಗೆ ಜೈಲುಹಕ್ಕಿಗಳ ಮಾತುಕತೆಗೆ ಪ್ರಿಸನ್​ ಕಾಲ್​ ಸಿಸ್ಟಂ ಜಾರಿ
author img

By

Published : Jul 25, 2020, 5:56 PM IST

ಹುಬ್ಬಳ್ಳಿ : ರಾಜ್ಯದ ಹಲವು ಕಾರಾಗೃಹದಲ್ಲಿರುವ ಖೈದಿಗಳಿಗೂ ಕೊರೊನಾ ಭೀತಿ ಎದುರಾಗಿದೆ. ಈ ಹಿನ್ನೆಲೆ ಜೈಲು ಹಕ್ಕಿಗಳ ಕುಟುಂಬಸ್ಥರು ಆತಂಕಕ್ಕೊಳಗಾಗಿದ್ದಾರೆ. ಇದರಿಂದಾಗಿ ಹುಬ್ಬಳ್ಳಿಯ ಉಪ ಕಾರಾಗೃಹದಲ್ಲಿ ‘ಪ್ರಿಸನ್​ ಕಾಲ್​​​​ ಸಿಸ್ಟಂ’ ಜಾರಿ ಮಾಡಲಾಗಿದೆ.

ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಕಾರಾಗೃಹದಲ್ಲಿರುವ ವಿಚಾರಣಾಧೀನ ಖೈದಿಗಳ ಹಾಗೂ ಅಪರಾಧಿಗಳ ಕುಟುಂಬದ ಸದಸ್ಯರಲ್ಲಿರುವ ಆತಂಕವನ್ನು ದೂರ ಮಾಡಲು ಹಾಗೂ ಕುಟುಂಬದ ಸದಸ್ಯರು ಕಾರಾಗೃಹಕ್ಕೆ ಬರದೇ ಮನೆಯಲ್ಲಿಯೇ ಇದ್ದು ಯೋಗಕ್ಷೇಮ ವಿಚಾರಿಸಲು ಹುಬ್ಬಳ್ಳಿಯ ಉಪ ಕಾರಾಗೃಹದಲ್ಲಿ ವಿಶೇಷ ಸೇವೆಯನ್ನು ನೀಡಲಾಗಿದೆ.

ಕುಟುಂಬಸ್ಥರೊಂದಿಗೆ ಜೈಲುಹಕ್ಕಿಗಳ ಮಾತುಕತೆಗೆ ಪ್ರಿಸನ್​ ಕಾಲ್​ ಸಿಸ್ಟಂ ಜಾರಿ

ಇಲ್ಲಿಯ ವಿಶ್ವೇಶ್ವರ ನಗರದ ಉಪ ಕಾರಾಗೃಹದಲ್ಲಿ ‘ಪ್ರಿಸನ್ ಕಾಲ್ ಸಿಸ್ಟಂ’ ಅಳವಡಿಸುವ ಮೂಲಕ ಖೈದಿಗಳಿಗೆ (ವಿಚಾರಣಾಧೀನ ಅಥವಾ ಅಪರಾಧಿ) ಕುಟುಂಬ ಸದಸ್ಯರೊಂದಿಗೆ ಸಂಪರ್ಕದಲ್ಲಿರಲು ಅವಕಾಶ ಕಲ್ಪಿಸಲಾಗಿದೆ. ಖೈದಿಗಳು ನಿಯಮ ಉಲ್ಲಂಘಿಸದೆ ಕುಟುಂಬ ಸದಸ್ಯರೊಂದಿಗೆ ಮಾತನಾಡಲು ಅಥವಾ ಕೋರ್ಟ್ ವ್ಯವಹಾರಕ್ಕೆ ಸಂಬಂಧಿಸಿ ವಕೀಲರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಕಾರಾಗೃಹದಿಂದಲೇ ದೂರವಾಣಿ ಮೂಲಕ ಸೌಲಭ್ಯ ಕಲ್ಪಿಸಿಕೊಡುವ ವ್ಯವಸ್ಥೆ ಇದಾಗಿದೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಖೈದಿಗಳ ಯೋಗಕ್ಷೇಮವನ್ನು ಕುಟುಂಬಸ್ಥರಿಗೆ ನೀಡಲು ಇದೊಂದು ಸಂಪರ್ಕ ಕೊಂಡಿಯಾಗಿದೆ. ಕಾರಾಗೃಹದಿಂದ ದೂರವಾಣಿ ಬಾಕ್ಸ್‌ಗೆ ಬಿಎಸ್ಎನ್ಎಲ್‌ ಸಂಪರ್ಕ ಕಲ್ಪಿಸಲಾಗಿದ್ದು, ಬೆಂಗಳೂರಿನ ಕಿಯೋನಿಕ್ಸ್‌ ಸಂಸ್ಥೆ ಅದನ್ನು ಅಳವಡಿಸಿದೆ.

ಕಾರಾಗೃಹದಲ್ಲಿ ಸದ್ಯ ಒಂದು ದೂರವಾಣಿ ಬಾಕ್ಸ್‌ ಮಾತ್ರ ಅಳವಡಿಸಲಾಗಿದ್ದು, ಖೈದಿಗಳು ಹೆಸರನ್ನು ನೋಂದಾಯಿಸಿಕೊಂಡು, ಬೆರಳಚ್ಚು ನೀಡಬೇಕು. ಮಾತನಾಡಲು ಬಯಸುವ ಮೂವರು ವ್ಯಕ್ತಿಗಳ ಹೆಸರು ಮತ್ತು ದೂರವಾಣಿ ಸಂಖ್ಯೆ ನೀಡಬೇಕು. ಈ ಎಲ್ಲ ನಂಬರ್‌ಗಳನ್ನು ಅಧಿಕಾರಿಗಳು ದೃಢೀಕರಿಸಿ ‘ಪ್ರಿಸನ್ ಕಾಲ್ ಸಿಸ್ಟಂ’ಗೆ ಸೇರಿಸುತ್ತಾರೆ.

ನಂತರ ಖೈದಿಗಳು ವಾರದಲ್ಲಿ 12 ನಿಮಿಷ ಮಾತ್ರ ತಾವು ನೀಡಿದ ಯಾವುದೇ ನಂಬರ್​​​ಗೆ ಕರೆ ಮಾಡಿ ಮಾತನಾಡಬಹುದು. ಅವಧಿ ಮುಗಿದ ನಂತರ ಸ್ವಯಂಚಾಲಿತವಾಗಿ ಸಂಪರ್ಕ ಕಡಿತಗೊಳ್ಳುತ್ತದೆ. ಇನ್ನೂ ಪ್ರತಿಯೊಂದು ಪ್ರಿಸೆನ್ಸ್ ಕಾಲ್ ಮೇಲೆ ನಿಗಾ ಇಡಲಾಗಿದ್ದು, ಕರೆಯ ಹಣವನ್ನು ಖೈದಿಗಳ ಸಂಬಂಧಿಕರು ಎಂಒ ಮೂಲಕ ಪಾವತಿಸಬೇಕಿದೆ. ಅಲ್ಲದೇ ಎಲ್ಲ ಅಧುನಿಕ ತಂತ್ರಜ್ಞಾನ ಅಳವಡಿಸಲಾಗಿದ್ದು, ಯಾವುದೇ ರೀತಿಯ ಅವ್ಯವಸ್ಥೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.