ETV Bharat / state

ಹುಬ್ಬಳ್ಳಿಯಲ್ಲಿ ನಡೆದ ಸ್ಫೋಟ ರಾಷ್ಟ್ರೀಯ ಷಡ್ಯಂತ್ರ: ಮುತಾಲಿಕ್​​

ಹುಬ್ಬಳ್ಳಿ ನಗರದಲ್ಲಿ ನಡೆದ ಸ್ಫೋಟ ಪ್ರಕರಣ ರಾಷ್ಟ್ರೀಯ ಷಡ್ಯಂತ್ರವಾಗಿದೆ. ಶ್ರೀರಾಮ ಜನ್ಮ‌ ಭೂಮಿಯ ನಿರ್ಣಯದ ಹಿನ್ನೆಲೆಯಲ್ಲಿ ನಡೆದ ಕುತಂತ್ರ ಇದು ಎಂದು ಶ್ರೀರಾಮ‌ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗಂಭೀರವಾದ ಆರೋಪ ಮಾಡಿದ್ದಾರೆ.

ಪ್ರಮೋದ್ ಮುತಾಲಿಕ್
author img

By

Published : Oct 23, 2019, 8:28 PM IST

Updated : Oct 23, 2019, 9:14 PM IST

ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ನಡೆದ ಸ್ಫೋಟ ಪ್ರಕರಣ ರಾಷ್ಟ್ರೀಯ ಷಡ್ಯಂತ್ರವಾಗಿದೆ. ಶ್ರೀರಾಮ ಜನ್ಮ‌ ಭೂಮಿಯ ನಿರ್ಣಯದ ಹಿನ್ನೆಲೆಯಲ್ಲಿ ನಡೆದ ಕುತಂತ್ರ ಇದು ಎಂದು ಶ್ರೀರಾಮ‌ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗಂಭೀರವಾದ ಆರೋಪ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಹುಬ್ಬಳ್ಳಿ ಸ್ಫೋಟ ಪ್ರಕರಣವನ್ನು ಹಗುರವಾಗಿ ತೆಗೆದುಕೊಂಡಿವೆ. ಇದುವರೆಗೂ ಬೆಂಗಳೂರಿನಿಂದ‌ ಪರೀಕ್ಷೆಗಾಗಿ ಟೀಂ ಬಂದಿಲ್ಲ.‌ ಇದು ಸರ್ಕಾರಗಳ‌ ನಿರ್ಲಕ್ಷ್ಯ ಎತ್ತಿ ತೋರಿಸುತ್ತಿದೆ. ರೈಲು ನಿಲ್ದಾಣದಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಿಸಿಟಿವಿ ಕ್ಯಾಮರಾ ಹಾಕಲಾಗಿದೆ. ಆದ್ರು ಏನೂ ಪ್ರಯೋಜನವಾಗಿಲ್ಲ.‌‌ ಇದೊಂದು ರಾಷ್ಟ್ರೀಯ ಷಡ್ಯಂತ್ರವಾಗಿದೆ. ಶ್ರೀರಾಮ ಜನ್ಮ‌ ಭೂಮಿಯ ತೀರ್ಪಿನ ಹಿನ್ನೆಲೆಯಲ್ಲಿ ನಡೆದಿರುವ ಕುತಂತ್ರ ಇದು ಎಂದರು.

ಶ್ರೀರಾಮ‌ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್

ದೇಶದ ಹಲವು ರಾಜ್ಯಗಳಲ್ಲಿ ಹಿಂಸಾಚಾರ ನಡೆಯುತ್ತಿವೆ. ಇದನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಗುರವಾಗಿ ತೆಗೆದುಕೊಳ್ಳಬಾರದು. ಪಾಕಿಸ್ತಾನ, ಅಫ್ಘಾನಿಸ್ತಾನ ರಾಷ್ಟ್ರಗಳು ಹತಾಶವಾಗಿ ಅನಾಹುತ ನಡೆಸಲು ಸಂಚು ನಡೆಸಿವೆ. ಕಮಲೇಶ ತಿವಾರಿ ಕೊಲೆ ಆರೋಪಿ ಹುಬ್ಬಳ್ಳಿಯಲ್ಲಿ ಸಿಕ್ಕಿಬಿದ್ದಿದ್ದಾನೆ ಎಂದರೆ ಅದರ ಜಾಲ ಎಷ್ಟಿದೆ ಎಂಬುದು ತಿಳಿಯುತ್ತದೆ. ರಾಮ ಜನ್ಮ ಭೂಮಿ ನಿರ್ಣಯ ಮುಂದಿನ ತಿಂಗಳೊಳಗೆ ಬರುತ್ತಿರುವ ಹಿನ್ನೆಲೆಯಲ್ಲಿ ವ್ಯವಸ್ಥಿತವಾಗಿ ಈ‌ ಕೃತ್ಯ ನಡೆಸಲಾಗುತ್ತಿದೆ ಎಂಬ ಸಂಶಯ ಇದೆ ಎಂದು ಮುತಾಲಿಕ್​ ಹೇಳಿದರು.

Intro:ಹುಬ್ಬಳ್ಳಿ -05

ಹುಬ್ಬಳ್ಳಿ ಸ್ಫೋಟ ಪ್ರಕರಣದಲ್ಲಿ ರಾಷ್ಟ್ರೀಯ ಷಡ್ಯಂತ್ರವಿದೆ. ಶ್ರೀರಾಮ ಜನ್ಮ‌ಭೂಮಿಯ ತೀರ್ಪಿನ ಹಿನ್ನೆಲೆಯಲ್ಲಿ ನಡೆದ ಕುತಂತ್ರ ಎಂದು ಶ್ರೀರಾಮ‌ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಗಂಭೀರವಾದ ಆರೋಪ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,
ಕೇಂದ್ರ ಹಾಗೂ ರಾಜ್ಯ ಸರ್ಕಾರ ಹುಬ್ಬಳ್ಳಿ ಸ್ಫೋಟ ಪ್ರಕಣವನ್ನು ಹಗುರವಾಗಿ ತಗೆದುಕೊಂಡಿದೆ.
ಇನ್ನುವರೆಗೂ ಬೆಂಗಳೂರಿನಿಂದ‌ ಪರೀಕ್ಷೆಗಾಗಿ ಟೀಂ ಬಂದಿಲ್ಲ.‌ ಇದು ಸರ್ಕಾರಗಳ‌ ನಿರ್ಲಕ್ಷ್ಯ ಎತ್ತಿ ತೋರಿಸುತ್ತಿದೆ. ರೈಲು ನಿಲ್ದಾಣದಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಸಿಸಿ ಟಿವಿ ಕ್ಯಾಮರಾ ಹಾಕಲಾಗಿದೆ.ಆದ್ರು ಏನು ಪ್ರಯೋಜನವಾಗಿಲ್ಲ.‌‌ ಇದರ ಹಿಂದೆ ಇದೊಂದು ರಾಷ್ಟ್ರೀಯ ಷಡ್ಯಂತ್ರವಿದೆ. ಶ್ರೀರಾಮ ಜನ್ಮ‌ಭೂಮಿಯ ತೀರ್ಪಿನ ಹಿನ್ನೆಲೆಯಲ್ಲಿ ನಡೆಯುವ ಕುತಂತ್ರ. ಅದಕ್ಕೆ ಒಂದು ಝಲಕ್‌ ತೋರಿಸುತ್ತಿದ್ದಾರೆ.
ದೇಶದ ಹಲವು ರಾಜ್ಯಗಳ ಹಿಂಸಾಚಾರ ನಡೆಯುತ್ತಿವೆ. ಇದನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಗುರವಾಗಿ ತಗೆದುಕೊಳ್ಳಬಾರದು.
ಪಾಕಿಸ್ತಾನ, ಅಪಘಾನಿಸ್ತಾನ ಹತಾಶರಾಗಿ ಅನಾಹುತ ನಡೆಸಲು ಸಂಚು ನಡೆಸಿವೆ.
ಕಮಲೇಶ ತಿವಾರಿ ಆರೋಪಿ ಹುಬ್ನಳ್ಳಿಯಲ್ಲಿ ಸಿಕ್ಕಿದ್ದಾನೆ. ಅಂದ್ರೆ ಅದರ ಜಾಲ ಎಷ್ಟಿದೆ ಎಂಬುದು ತಿಳಿಯುತ್ತದೆ.
ವ್ಯವಸ್ಥಿತವಾಗಿ ಮುಂದೆ ಬರುವ ರಾಮ ಜನ್ಮ ನಿರ್ಣಯ ಹಿನ್ನೆಲೆಯಲ್ಲಿ ಈ‌ಕೃತ್ಯ ನಡೆದಿದೆ ಎಂಬ ಸಂಶಯ ಇದೆ. ಸುನ್ನಿ ಯವರು ದೇಶದಲ್ಲಿ ದೇಶದಲ್ಲಿ ಉಗ್ರ ಚಟುವಟಿಕೆ ನಡೆಸುತ್ತಿದೆ. ಇಲ್ಲಿ‌ ಬಂಧಿತನಾದವನು ಸುನ್ನಿ ಸಂಘಟನೆಯ ಕಾರ್ಯಕರ್ತ.
ಬಾಂಗ್ಲಾ ವಲಸಿಗರು ದೇಶದಲ್ಲಿ ವಾಸವಾಗಿದ್ದಾರೆ ಎಂದು ಕುಮಾರಸ್ವಾಮಿ ಸಿಡಿ ಬಿಡುಗಡೆ ಮಾಡಿದ್ದರು.‌ಆದರೆ ಇದುವರೆಗೂ ವಲಸಿಗರನ್ನು ಗಡಿಪಾರು‌ ಮಾಡುವ ಕೆಲಸ ನಡೆದಿಲ್ಲ. ಭಟ್ಕಳದ ಜಗನಾಥ ಶೆಟ್ಟಿ ಆಯೋಗವನ್ನು ಬಿಜೆಪಿ ಸರ್ಕಾರ ಮಂಡಿಸಬೇಕು.
ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಮದರಸಾಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿವೆ.
ಮದರಾಸಗಾಗಳನ್ನು ಬ್ಯಾನ್ ಮಾಡಬೇಕು. ಹುಬ್ಬಳ್ಳಿಯಲ್ಲಿ 100 ಕ್ಕೂ ಹೆಚ್ಚು ಮದರಾಸಗಳಿವೆ.‌ ಅವುಗಳನ್ನು ತಪಾಸಣೆ ಮಾಡಬೇಕು. ಸರ್ಕಾರ ಬಾಗ್ಲಾ ವಲಸಿಗರನ್ನು ಹುಡುಕದಿದರೆ ಶ್ರೀರಾಮ ಸೇನೆ ಹುಡುಕಿ ಒದ್ದು ಹೊರಹಾಕಲಿದೆ ಎಂದು ಎಚ್ಚರಿಕೆ ನೀಡಿದರು.
ಸಾವರ್ಕರ್ ಅವರಿಗೆ ಭಾರತ ರತ್ನ ಕೊಡುವದು ಸ್ವಾಗತವುದೆ. ಆದ್ರೆ ಇದನ್ನು ಕಾಂಗ್ರೆಸ್ ನವರು ವಿವಾದ ಮಾಡುತ್ತಿದ್ದಾರೆ ಎಂದರು.

ಬೈಟ್ - ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆ ಮುಖ್ಯಸ್ಥBody:H B GaddadConclusion:Etv hubli
Last Updated : Oct 23, 2019, 9:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.