ETV Bharat / state

ಪ್ರಿಯಾಂಕಾ ಗಾಂಧಿ ಟ್ವೀಟ್‌ ಮಹಿಳೆಯರನ್ನು ಅವಮಾನಿಸುವಂಥದ್ದು: ಪ್ರಮೋದ್ ಮುತಾಲಿಕ್ - Pramod Muthalik reaction about priyanka gandhi statement

ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿ ಮಹಿಳೆಯರಿಗೆ ಸ್ವತಂತ್ರ ಕೊಡಬೇಕು, ಹಕ್ಕು ಕೊಡಬೇಕು ಎಂದಿದ್ದಾರೆ. ಜಿನ್ಸ್ ಹಾಕೋಬಹುದು, ಬಿಕಿನಿ ಹಾಕಿಕೊಳ್ಳಬಹುದು ಎಂಬ ಉಲ್ಲೇಖ ಮಾಡಿದ್ದಾರೆ. ಪ್ರಿಯಾಂಕಾ ಗಾಂಧಿ ಅವರೇ ದೊಡ್ಡ ಸ್ಥಾನದಲ್ಲಿ ಇದ್ದೀರಾ, ನೀವು ಇವತ್ತು ಶಾಲಾ ಆವರಣದಲ್ಲಿ ಬಿಕಿನಿ ಹಾಕಿಕೊಳ್ಳಿ ಎಂದು ಸಂದೇಶ ಕೊಡ್ತೀರಲ್ಲಾ, ನಿಮಗೆ ನಾಚಿಕೆಯಾಗಬೇಕು ಎಂದು ಪ್ರಮೋದ್​ ಮುತಾಲಿಕ್​ ವಾಗ್ದಾಳಿ ನಡೆಸಿದ್ದಾರೆ.

ಪ್ರಮೋದ್ ಮುತಾಲಿಕ್
ಪ್ರಮೋದ್ ಮುತಾಲಿಕ್
author img

By

Published : Feb 9, 2022, 1:31 PM IST

Updated : Feb 9, 2022, 2:07 PM IST

ಧಾರವಾಡ: ಹಿಜಾಬ್ ಆರಂಭವಾಗಿದ್ದು ಉಡುಪಿಯ ಮುಸ್ಲಿಂ ವಿದ್ಯಾರ್ಥಿನಿಯರಿಂದ. ಅವರು ಆವಾಗಲೇ ವಿದ್ಯೆಗೆ ಮಹತ್ವ ಕೊಡ್ತೇವೆ, ಹಿಜಾಬ್​ಗೆ ಅಲ್ಲಾ ಅಂತಾ ಯೋಚನೆ ಮಾಡಿದ್ದರೆ ಇದು ಇಷ್ಟು ಬೆಳವಣಿಗೆ ಆಗುತ್ತಿರಲಿಲ್ಲ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​ ಹೇಳಿದರು.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋರ್ಟ್ ಆದೇಶವನ್ನು ಎಲ್ಲರೂ ಪಾಲಿಸಬೇಕಾಗಿರುವುದು ನಮ್ಮ ಧರ್ಮ, ಕರ್ತವ್ಯ. ಇಂದು ಪ್ರಿಯಾಂಕಾ ಗಾಂಧಿ ಒಂದು ಟ್ವೀಟ್ ಮಾಡಿ ಮಹಿಳೆಯರಿಗೆ ಸ್ವತಂತ್ರ ಕೊಡಬೇಕು, ಹಕ್ಕು ಕೊಡಬೇಕು ಎಂದಿದ್ದಾರೆ. ಜಿನ್ಸ್ ಹಾಕೋಬಹುದು, ಬಿಕಿನಿ ಹಾಕಿಕೊಳ್ಳಬಹುದು ಎಂಬ ಉಲ್ಲೇಖ ಮಾಡಿದ್ದಾರೆ. ಪ್ರಿಯಾಂಕಾ ಗಾಂಧಿ ಅವರೇ ದೊಡ್ಡ ಸ್ಥಾನದಲ್ಲಿ ಇದ್ದೀರಾ, ನೀವು ಇವತ್ತು ಶಾಲಾ ಆವರಣದಲ್ಲಿ ಬಿಕಿನಿ ಹಾಕಿಕೊಳ್ಳಿ ಎಂದು ಸಂದೇಶ ಕೊಡ್ತಿರಲ್ಲಾ, ನಿಮಗೆ ನಾಚಿಕೆಯಾಗಬೇಕು, ಮಹಿಳೆಯರಿಗೆ ಅವಮಾನ ಮಾಡುವಂಥದ್ದು ಎಂದು ಖಂಡಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​

ಪಾಕಿಸ್ತಾನ ಕೂಡಾ ನಮ್ಮ ದೇಶದ ಹಿಜಾಬ್ ವಿಷಯದಲ್ಲಿ ಮೂಗು ತುರಿಸುತ್ತಿದೆ. ಪಾಕಿಸ್ತಾನ ಇಡೀ ಜಗತ್ತಿನಲ್ಲಿ ಭಯೋತ್ಪಾದಕ ದೇಶ,‌ ಅಲ್ಲಿ ಮಹಿಳೆಯರಿಗೆ ಯಾವ ಸ್ಥಾನ ಕೊಟ್ಟಿದ್ದೀರಿ?. ಗುಂಡು ಹೊಡೆಯುತ್ತೀರಿ, ಬುರ್ಕಾ ಹಾಕಿ ಒಡಾಡಿಸುತ್ತೀರಿ. ನೀವು ನಮಗೆ ಉಪದೇಶ ಮಾಡುವ ಅವಶ್ಯಕತೆ ಇಲ್ಲ. ಮಂಡ್ಯದಲ್ಲಿ ಮುಸ್ಲಿಂ ಹುಡುಗಿ ಅಲ್ಲಾಹು ಅಕ್ಬರ್ ಎಂದಿದ್ದಕ್ಕೆ ಅವಳನ್ನು ಹೀರೋಯಿನ್ ಮಾಡಲು ಹೊರಟಿದ್ದೀರಿ. ಇದು ಸರಿಯಲ್ಲ, ಇದನ್ನ ನಾನು ವಿರೋಧ ಮಾಡುತ್ತೇನೆ ಎಂದರು.

ಇದನ್ನೂ ಓದಿ: 'ಬಿಕಿನಿ, ಮುಸುಕು, ಜೀನ್ಸ್, ಹಿಜಾಬ್ ಸೇರಿದಂತೆ ಹೆಣ್ಣು ಮಕ್ಕಳಿಗೆ ಬೇಕಾದ ಉಡುಪು ಧರಿಸುವ ಹಕ್ಕಿದೆ'

ಮೈಸೂರಿನಲ್ಲಿ ಎಸ್​​ಡಿಪಿಐ ಕಾರ್ಯಕರ್ತ ನನ್ನ ವೈಯಕ್ತಿಕ ವಿಷಯ ಮಾತನಾಡಿದ್ದನ್ನು ಖಂಡಿಸುತ್ತೇನೆ. ಆ ಎಸ್​​ಡಿಪಿಐ ಕಾರ್ಯದರ್ಶಿಗೆ ಬಾಯಿ ಮುಚ್ಚಲು ಹೇಳುತ್ತೇನೆ. ನಾನು ಈ ದೇಶಕ್ಕೆ 40 ವರ್ಷಗಳಿಂದ ಹಿಂದುತ್ವಕ್ಕಾಗಿ ಕೆಲಸ ಮಾಡಿದವನು, ನೀವು ಈ ರೀತಿ ಮಾತನಾಡಿದರೆ ಬಿಡಲ್ಲ ಎಂದು ಹೇಳಿದರು.

Last Updated : Feb 9, 2022, 2:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.