ಧಾರವಾಡ: ಮಂಗಳೂರು ಬಜಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣ ಇದೊಂದು ಆತಂಕಕಾರಿ ವಿಷಯವಾಗಿದ್ದು,ಇದರ ಬಗ್ಗೆ ಎಲ್ಲ ರೀತಿಯ ತನಿಖೆಯನ್ನು ಮಾಡಲಾಗುತ್ತದೆ. ಪ್ರಕರಣದಲ್ಲಿ ಭಾಗಿಯಾದವರಿಗೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರ ಬಾಂಬ್ ಪ್ರಕರಣದಲ್ಲಿ ಭಾಗಿಯಾದವರು. ದೇಶ ವಿರೋಧಿಗಳು, ದೇಶದಲ್ಲಿ ಅಭದ್ರತೆ ಸೃಷ್ಟಿಸಲು ಮಂಗಳೂರಿನಲ್ಲಿ ಇತ್ತೀಚಿಗೆ ನಡೆದ ಗಲಭೆಯಲ್ಲಿಯೂ ಪ್ರಯತ್ನ ಮಾಡಿದ್ದರು ಎಂದರು.
ಮಂಗಳೂರು ಗಲಭೆಯಲ್ಲಿ ಪಾಲ್ಗೊಂಡವರ ಪ್ರೇರಣೆಯಿಂದಲೇ ಇದು ಆಗಿರುವ ಸಾಧ್ಯತೆಯಿದೆ ಎಂದ ಅವರು, ತೀವ್ರವಾಗಿ ತನಿಖೆಯಾಗಬೇಕು, ತಪ್ಪಿತಸ್ಥರನ್ನ ಬಂಧಿಸಬೇಕು ಎಂದು ಅವರು ಸೂಚನೆ ನೀಡಿದರು. ರಾಜ್ಯದ ಎಲ್ಲಾ ವಿಮಾನ ಹಾಗೂ ರೈಲ್ವೆ ನಿಲ್ದಾಣಗಳಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ಹೇಳಿದರು.