ETV Bharat / state

ನೂತನ ಕೇಂದ್ರ ಸಚಿವರಿಗೆ ಅದ್ದೂರಿ ಸ್ವಾಗತ : ಮಹದಾಯಿ ಇತ್ಯರ್ಥಕ್ಕೆ ರಾಜ್ಯ ಸರ್ಕಾರಕ್ಕೆ ಜೋಶಿ ಕರೆ - Kannada news

ಕೇಂದ್ರ ಸಚಿವರಾದ ನಂತರ ಮೊದಲ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿದ ಸಂಸದೀಯ ವ್ಯವಹಾರಗಳ ಹಾಗೂ ಕಲ್ಲಿದ್ದಲು ಮತ್ತು ಗಣಿ ಖಾತೆಯ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರಿಗೆ ಅದ್ದೂರಿ ಸ್ವಾಗತ ಕೋರಲಾಯಿತು.

ಸಂಸದೀಯ ವ್ಯವಹಾರಗಳ, ಕಲ್ಲಿದ್ದಲು ಮತ್ತು ಗಣಿ ಖಾತೆಯ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ
author img

By

Published : Jun 2, 2019, 12:09 PM IST

ಹುಬ್ಬಳ್ಳಿ : ಕೇಂದ್ರ ಸಚಿವರಾದ ನಂತರ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಪ್ರಹ್ಲಾದ್ ಜೋಶಿಯವರನ್ನು ಸಾವಿರಾರು ಬಿಜೆಪಿ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜೋಶಿ, ಹುಬ್ಬಳ್ಳಿ ಧಾರವಾಡ ಅವಳಿ ನಗರಕ್ಕೆ ಏನೇನು ಯೋಜನೆಗಳು ಬೇಕು ಎಂಬುವದನ್ನು ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದರೆ ನಾನು ಅದನ್ನು ಕೇಂದ್ರದಿಂದ ತರುವ ಕೆಲಸ ಮಾಡುತ್ತೇನೆ. ಎಲ್ಲಾ ವಿರೋಧ ಪಕ್ಷಗಳು ಬರುವ ಅಧಿವೇಶನ ಸುಸೂತ್ರವಾಗಿ ನಡೆಯಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಪ್ರಹ್ಲಾದ್​ ಜೋಶಿಗೆ ಕಾರ್ಯಕರ್ತರ ಅದ್ದೂರಿ ಸ್ವಾಗತ

ಮಹದಾಯಿ ಯೋಜನೆಯ ಕುರಿತು ಕಾನೂನು ತಜ್ಞರೊಂದಿಗೆ ಚರ್ಚಿಸಲಿ, ನೋಟಿಫಿಕೇಶನ್ ಪೆಂಡಿಗ್ ಇದೆ ಹಾಗಾಗಿ ಎಲ್ಲಾ ಕೂಡಿಕೊಂಡು ಮಹದಾಯಿ ಸಮಸ್ಯೆಯನ್ನು ಬಗೆಹರಿಸೋಣ ಇದರಲ್ಲಿ ರಾಜಕೀಯ ಮಾಡುವುದು ಬೇಡ ಎಂದರು.

ಕೋಯ್ನಾ ನದಿ ನೀರು ಬಿಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಸಮಸ್ಯೆಯನ್ನು ಮಹಾರಾಷ್ಟ್ರ ಸಿಎಂ ಜೊತೆಗೆ ಚರ್ಚೆ ಮಾಡಿ ಬಗೆಹರಿಸುತ್ತೇನೆ. ಈ ಕುರಿತು ರಾಜ್ಯ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಜೊತೆ ಮಾತುಕತೆ ನಡೆಸಿದ್ದೇನೆ. ಅವರು ಮುಂಬೈಗೆ ಬರುವುದಾದರೆ ನಾನು ಡಿಕೆಶಿ, ಮಹಾರಾಷ್ಟ್ರ ಸಿಎಂ ಭೇಟಿಯಾಗಿ ನೀರು ಬಿಡುವಂತೆ ಮನವಿ ಮಾಡುವದಾಗಿ ಹೇಳಿದರು.

Intro:ಹುಬ್ಬಳ್ಳಿ-01

ಧಾರವಾಡ ಲೋಕಸಭಾ ಕ್ಷೇತ್ರದ ಜನರಿಗೆ ಅಭಾರಿಯಾಗಿದ್ದೇನೆ..
ಅವರ ಆರ್ಶಿವಾದದಿಂದ ನಾನು ಕೇಂದ್ರ ಸಚಿವನಾಗಿದ್ದೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ನನಗೆ ನೀಡಿದ ಜವಾಬ್ದಾರಿ ನಿರ್ವಹಿಸುತ್ತೇನೆ.
ಹುಬ್ಬಳ್ಳಿ- ಧಾರವಾಡ ಅವಳಿ ನಗರಕ್ಕೆ ಏನೇನೂ ಯೋಜನೆ ಬೇಕು ಅದನ್ನು ರಾಜ್ಯ ಸರ್ಕಾರ ಹೇಳಬೇಕು. ರಾಜ್ಯ ಸರ್ಕಾರ ಏನು ಪ್ರಸ್ತಾವನೆ ಸಲ್ಲಿಸುತ್ತಾರೆ ಅದನ್ನು ಕೇಂದ್ರದಿಂದ ತರುವ ಕೆಲಸ ಮಾಡುತ್ತೇನೆ.
ನಮ್ಮ ಎಲ್ಲಾ ವಿರೋಧ ಪಕ್ಷಗಳು ಬರುವ ಅಧಿವೇಶನ ಸುಸೂತ್ರವಾಗಿ ನಡೆಯಲು ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ.
ಎಲ್ಲಾ ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಿ ಸಹಕಾರ ನೀಡುವಂತೆ ಮನವಿ ಮಾಡುತ್ತೇನೆ ಎಂದರು.
ಮಹದಾಯಿ ಯೋಜನರ ಕುರಿತು ಕಾನೂನು ತಜ್ಞರು ಜೊತೆಗೆ ಚರ್ಚೆಸಲಿ.
ನೋಟಿಪಿಕೇಶನ್ ಪೆಂಡಿಗ್ ಇದೆ ಹಾಗಾಗಿ ಕಾನೂನು ತಜ್ಞರ ಜೊತೆಗೆ ಚರ್ಚೆಸಲಿ.
ಎಲ್ಲಾ ಕೂಡಿಕೊಂಡು ಮಹದಾಯಿ ಸಮಸ್ಯೆ ಬಗೆಹರಿಸೋಣ. ಇದರಲ್ಲಿ ಯಾವುದೇ ರಾಜಕೀಯ ಮಾಡುವದು ಬೇಡ ಎಂದರು.
ಕೋಯ್ನಾ ನದಿ ನೀರು ಬಿಡುವ ವಿಚಾರಕ್ಕೆ ಪ್ರತಿಕ್ರಯಿಸಿದ ಅವರು, ಈ ಸಮಸ್ಯೆಯನ್ನು ಮಹಾರಾಷ್ಟ್ರ ಸಿಎಂ ಜೊತೆಗೆ ಚರ್ಚೆ ಮಾಡಿ ಬಗೆ ಹರಿಸುತ್ತೇನೆ.
ಈ ಕುರಿತು ರಾಜ್ಯ ಜಲ ಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಮಾತುಕತೆ ನಡೆಸಿದ್ದೇನೆ. ಅವರು ಮುಂಬೈ ಬರುವದಾದರೆ ನಾನು ಡಿಕೆಶಿ ಮಹಾರಾಷ್ಟ್ರ ಸಿಎಂ ಭೇಟಿಯಾಗಿ ನೀರು ಬಿಡುವಂತೆ ಮನವಿ ಮಾಡುವದಾಗಿ ಹೇಳಿದರು.Body:H B GaddadConclusion:Etv hubli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.