ETV Bharat / state

ಗರ್ಭಿಣಿ ಆತ್ಮಹತ್ಯೆ ಪ್ರಕರಣ.. ವಿಷವುಣಿಸಿ ಗಂಡನೇ ಆಕೆಯನ್ನ ಕೊಂದಿರುವ ಆರೋಪ.. - ಧಾರವಾಡದಲ್ಲಿ ಗರ್ಭಿಣಿ ಆತ್ಮಹತ್ಯೆ

ಗಂಡ-ಹೆಂಡತಿ ನಡುವೆ ವೈಮನಸ್ಸು ಏರ್ಪಟ್ಟ ಕಾರಣ ಇವರ ಜಗಳ ಧಾರವಾಡ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿ, ನಿನ್ನೆಯಷ್ಟೇ ರಾಜಿ-ಸಂಧಾನದ ಮೂಲಕ ಕೌಟುಂಬಿಕ ಕಲಹ ಬಗೆಹರಿದಿತ್ತು..

pragnant lady commits suicide by poison
ಧಾರವಾಡ
author img

By

Published : Jan 29, 2021, 2:52 PM IST

ಧಾರವಾಡ : 6 ತಿಂಗಳ ಗರ್ಭಿಣಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಮೃತಳ ಕುಟುಂಬಸ್ಥರು ಗಂಡನ ವಿರುದ್ಧ ವಿಷವುಣಿಸಿದ ಆರೋಪ ಹೊರಿಸಿದ್ದಾರೆ.

ಗರ್ಭಿಣಿಯ ಆತ್ಮಹತ್ಯೆಯ ಸುತ್ತ ಅನುಮಾನ..
ಕಾವ್ಯ ತಡಸಮಠ (22) ಮೃತ ಗರ್ಭಿಣಿ. ಕಲಘಟಗಿ ತಾಲೂಕಿನ ಗಳಗಿ ಹುಲಕೊಪ್ಪ ಗ್ರಾಮದ ಮುತ್ತಯ್ಯ ತಡಸಮಠ ಅವರಿಗೆ ಧಾರವಾಡ ತಾಲೂಕಿನ ಕ್ಯಾರಕೊಪ್ಪ ಗ್ರಾಮದ ಕಾವ್ಯ ಅವರನ್ನು ಮದುವೆ ಮಾಡಿ‌ಕೊಡಲಾಗಿತ್ತು. ಆದರೆ, ಗಂಡ-ಹೆಂಡತಿ ನಡುವೆ ವೈಮನಸ್ಸು ಏರ್ಪಟ್ಟ ಕಾರಣ ಇವರ ಜಗಳ ಧಾರವಾಡ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿ, ನಿನ್ನೆಯಷ್ಟೇ ರಾಜಿ-ಸಂಧಾನದ ಮೂಲಕ ಕೌಟುಂಬಿಕ ಕಲಹ ಬಗೆಹರಿದಿತ್ತು. ಆದರೆ, ಇಂದು ಕಾವ್ಯ ಆತ್ಮಹತ್ಯೆ ಮಾಡಿಕೊಂಡಿದ್ದು, ಗಂಡನೇ ವಿಷ ಹಾಕಿ ಕೊಂದಿದ್ದಾನೆ ಅಂತಾ ಆಕೆಯ ಮನೆಯವರು ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ:ಮುಂಬೈ- ಅಹಮದಾಬಾದ್​​ ಹೈ ಸ್ಪೀಡ್ ರೈಲು ಕಾರಿಡಾರ್​​ : ಎಲ್​​ ಅಂಡ್​ ಟಿ ಜತೆ ಒಪ್ಪಂದ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.