ಹುಬ್ಬಳ್ಳಿ: ಸ್ಟಾರ್ ನಟರ ಫಿಲ್ಮ್ ಬಿಡುಗಡೆಗೆ ಅಭಿಮಾನಿಗಳು ಕ್ಷೀರಾಭಿಷೇಕ ಮಾಡುವುದು, ಪಟಾಕಿ ಸಿಡಿಸುವುದು, ಘೋಷಣೆ ಕೂಗಿ ಅಭಿಮಾನ ವ್ಯಕ್ತಪಡಿಸುವುದು ಸರ್ವೇ ಸಾಮಾನ್ಯ. ಆದರೆ, ವಾಣಿಜ್ಯ ನಗರಿಯಲ್ಲಿ ಅಪ್ಪು ಅಭಿಮಾನಿಗಳು ಮಾತ್ರ ವಿನೂತನವಾಗಿ ತಮ್ಮ ಅಭಿಮಾನವನ್ನು ಪ್ರದರ್ಶಿಸುವ ಮೂಲಕ ದೃಷ್ಟಿ ಸಮಸ್ಯೆ ಇದ್ದವರ ಬಾಳಿಗೆ ಬೆಳಕಾಗಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಜೇಮ್ಸ್ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಅಭಿಮಾನಿಗಳು ಬೆಂಬಲವನ್ನು ನೀಡಿ ಚಿತ್ರದ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ವಿಶೇಷ ಅಂದ್ರೆ ಪುನೀತ್ ಅವರ ಜನ್ಮದಿನದ ಅಂಗವಾಗಿಯೇ ಚಿತ್ರ ಬಿಡುಗಡೆಯಾಗಿದ್ದು, ಹುಬ್ಬಳ್ಳಿ ರಾಜವಂಶದ ಅಭಿಮಾನಿ ಬಳಗ ಮಾತ್ರ ವಿಭಿನ್ನವಾಗಿ ಶುಭಾಶಯ ಕೋರಿದ್ದಾರೆ. ಹುಬ್ಬಳ್ಳಿಯ ಪುನೀತ್ ರಾಜ್ಕುಮಾರ್ ಅಭಿಮಾನಿ ರಾಘವೇಂದ್ರ ವದ್ದಿ ನೇತೃತ್ವದಲ್ಲಿ ರಾಜವಂಶ ಅಭಿಮಾನಿ ಬಳಗ ಸುಮಾರು ನೂರು ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸುವ ಮೂಲಕ ದೃಷ್ಟಿದೋಷ ಸಮಸ್ಯೆಯಿಂದ ಮುಕ್ತಿ ಕೊಡಿಸಿದ್ದಾರೆ.
ಸಿನಿಮಾದ ಅಭಿಮಾನ ಎಂದರೆ ಕೇವಲ ಚಿತ್ರವನ್ನು ನೋಡುವುದು. ವಿಶಲ್ ಹೊಡೆಯುವುದು ಮಾತ್ರವಲ್ಲ. ನಮ್ಮ ಚಿತ್ರನಟರ ಮೇಲಿನ ಅಭಿಮಾನ ಅಸಹಾಯಕರಿಗೆ ಸಹಾಯ ಮಾಡುವಂತಾಗಬೇಕು ಎಂಬುದನ್ನು ತೋರಿಸಿದ್ದಾರೆ.
ಅಲ್ಲದೆ, ಹುಬ್ಬಳ್ಳಿಯ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಸುಮಾರು ನೂರು ಜನರ ಬಾಳಿನಲ್ಲಿ ಹೊಸ ಚೈತನ್ಯ ತುಂಬಿದ್ದಅರೆ. ಇದರಿಂದ ನಮ್ಮ ಬದುಕಿನಲ್ಲಿ ಏನಾದರೂ ಮಾಡಲು ಸಹಾಯವಾಗುತ್ತೆ ಅಂತಾರೇ ಕಣ್ಣಿನ ಚಿಕಿತ್ಸೆ ಮಾಡಿಸಿಕೊಂಡವರು. ಅಲ್ಲದೆ, ಅಪ್ಪು ಅಭಿಮಾನಿ ಬಳಗಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಓದಿ: ಮಂಗಳೂರಿನಲ್ಲಿ ಒತ್ತಾಯ ಪೂರ್ವಕವಾಗಿ ಬಂದ್ ಮಾಡಿಸುವ ಕಾರ್ಯ ನಡೆದಿಲ್ಲ: ಎನ್. ಶಶಿಕುಮಾರ್