ಹುಬ್ಬಳ್ಳಿ : ಲಾಕ್‌ಡೌನ್ ಸಂದರ್ಭದಲ್ಲಿ ಇಷ್ಟು ದಿನ ಪೊಲೀಸರು ಜನರನ್ನು ಹೊರಬರದಂತೆ ನೋಡಿಕೊಳ್ಳವುದು, ಅನಾವಶ್ಯಕ ತಿರುಗಾಟದಲ್ಲಿದ್ದವರಿಗೆ ಲಾಠಿ ರುಚಿ ತೋರಿಸುವುದು ಎಂಬೆಲ್ಲಾ ಸುದ್ದಿ ಕೇಳಿಯೇ ಕೇಳಿರುತ್ತೀರಾ. ಆದರೆ, ಇದೀಗ ಪೊಲೀಸ್ ಸಿಬ್ಬಂದಿ ನಿರ್ಗತಿಕರು, ಬಡ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ವಿತರಣೆ ಮಾಡಿದ್ದಾರೆ.
ದೇಶದಲ್ಲಿ ಲಾಕ್‌ಡೌನ್ ಜಾರಿಯಲ್ಲಿರೋ ಪರಿಣಾಮ ದಿನಗೂಲಿ ಮಾಡಿ ಬದುಕು ನಡೆಸುವವರು, ನಿರ್ಗತಿಕರು, ಬಡವರಿಗೆ ಕೆಲಸವಿಲ್ಲದೇ ತೊಂದರೆಯಾಗಿದೆ. ಇಂತಹ ಸಂದರ್ಭದಲ್ಲಿ ಇವರ ಕಷ್ಟವನ್ನು ಅರಿತ ಪೊಲೀಸ್ ಇಲಾಖೆಯ ಸಿಬ್ಬಂದಿಯೊಬ್ಬರು ಕೆಲಸದ ಒತ್ತಡದಲ್ಲೂ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಕಷ್ಣ ಕಟ್ಟಿಮನಿ ಎಂಬುವರೇ ಬಡವರಿಗೆ ಅಗತ್ಯ ವಸ್ತುಗಳನ್ನು ನೀಡಿದವರು. ಇಂದು ಬಂಜಾರ ಕಾಲೋನಿ, ಕುಸುಗಲ್ ರಸ್ತೆಯ ಶಬರಿನಗರದಲ್ಲಿರುವ ಬಡ ಕುಟುಂಬಗಳಿಗೆ ಅಗತ್ಯ ಆಹಾರ ಸಾಮಾಗ್ರಿಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಬಂಜಾರಾ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ಪಾಂಡುರಂಗ ಪಮ್ಮಾರ, ಶಂಕರ ಕಟ್ಟಿಮನಿ, ಮೋತಿಲಾಲ್ ರಾಠೋಡ, ಪ್ರಭು ಬೊಮ್ಮನಪಾಡ, ಶ್ರೀನಿವಾಸ ಕಟ್ಟಿಮನಿ ಹಾಗೂ ಬಂಜಾರಾ ಕಾಲೋನಿಯ ಗುರು-ಹಿರಿಯರು ಉಪಸ್ಥಿತರಿದ್ದರು.