ಧಾರವಾಡ: ಕೊರೊನಾ ವೈರಸ್ ಭೀತಿಯ ನಡುವೆ ಜನರನ್ನು ಮನೆಯಿಂದ ಹೊರಬರದಂತೆ ನಿಯಂತ್ರಣದಲ್ಲಿಡಲು ಪೊಲೀಸ್ ಅಧಿಕಾರಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಹಾಗೆಯೇ ಧಾರವಾಡ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ ಪರ ರಾಜ್ಯದ ಜನ ಸಾಮಾನ್ಯರಿಗೆ ಊಟೋಪಚಾರ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಧಾರವಾಡ ಹೊರವಲಯದಲ್ಲಿರುವ ತೇಗೂರ ರಾಷ್ಟ್ರೀಯ ಹೆದ್ದಾರಿ ನಂ. 4ರಲ್ಲಿ ಪರರಾಜ್ಯದವರೂ ಸೇರಿ ನೂರಕ್ಕೂ ಹೆಚ್ಚು ಜರಿಗೆ ಪೊಲೀಸ್ ಇಲಾಖೆಯಿಂದ ತರಿಸಲಾಗಿದ್ದ ಊಟವನ್ನು ಖುದ್ದು ಪೊಲೀಸರೇ ಬಡಿಸಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.