ಹುಬ್ಬಳ್ಳಿ: ಹು-ಧಾ ಮಹಾನಗರ ಪೊಲೀಸ್ ಕಮಿಷನರ್ ಲಾಬುರಾಮ್ ಅವರು ಕಳೆದ ಎರಡು ದಿನಗಳ ಹಿಂದೆ ಅನಾರೋಗ್ಯದಿಂದ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಏರ್ಲಿಫ್ಟ್ ಮಾಡಲಾಗಿದೆ.
ಆರ್.ದಿಲೀಪ್ ಅವರ ವರ್ಗಾವಣೆ ಹಿನ್ನೆಲೆ ಹು-ಧಾ ಮಹಾನಗರ ಪೊಲೀಸ್ ಆಯುಕ್ತರಾಗಿ ನೇಮಕವಾಗಿದ್ದ ಲಾಬುರಾಮ್, ಅವಳಿನಗರದ ಕ್ರೈಂಗಳಿಗೆ ಕಡಿವಾಣ ಹಾಕಿದ್ದರು. ಸಿಬ್ಬಂದಿಗಳಲ್ಲಿ ಸಮನ್ವಯತೆ ಸೃಷ್ಟಿಸಿದ್ದ ದಕ್ಷ ಅಧಿಕಾರಿ ಈಗ ಅನಾರೋಗ್ಯಕ್ಕೆ ತುತ್ತಾಗಿದ್ದು, ಎಸ್ಡಿಎಂ ನಿಂದ ಮಣಿಪಾಲ್ ಆಸ್ಪತ್ರೆಗೆ ಏರ್ಲಿಫ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಬಲ್ಲ ಮೂಲಗಳ ಮಾಹಿತಿಯಂತೆ ಗಂಟಲು ನೋವು ಹಾಗೂ ಬಿಳಿ ರಕ್ತ ಕಣಗಳು ಕಡಿಮೆ ಇರುವುದರಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ತಿಳಿದು ಬಂದಿದೆ. ಅವಳಿ ನಗರದಲ್ಲಿ ಶಾಂತಿ ನೆಲೆಸಲು ಶ್ರಮಿಸುತ್ತಿರುವ ಅಧಿಕಾರಿ ಶೀಘ್ರವಾಗಿ ಗುಣಮುಖರಾಗಿ ಸೇವೆಗೆ ಹಾಜರಾಗಬೇಕು ಎಂಬುವುದು ಹು-ಧಾ ಮಹಾನಗರ ಜನತೆಯ ಆಶಯವಾಗಿದೆ.
ಕಮಿಷನರ್ ಲಾಬುರಾಮ್ಗೆ ಆರೋಗ್ಯ ಸಮಸ್ಯೆ: ಮಣಿಪಾಲ ಆಸ್ಪತ್ರೆಗೆ ಏರ್ಲಿಫ್ಟ್ - Treatment of Laburam at Manipal Hospital
ಕಳೆದ ಎರಡು ದಿನಗಳ ಹಿಂದೆ ಅನಾರೋಗ್ಯದಿಂದ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹು-ಧಾ ಮಹಾನಗರ ಪೊಲೀಸ್ ಕಮಿಷನರ್ ಲಾಬುರಾಮ್ ಅವರು ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಏರ್ಲಿಫ್ಟ್ ಮಾಡಲಾಗಿದೆ.