ಹುಬ್ಬಳ್ಳಿ: ಪಾದಚಾರಿಗಳ ಸುರಕ್ಷಿತ ಸಂಚಾರಕ್ಕಾಗಿ ಫುಟ್ಪಾತ್ ನಿರ್ಮಾಣ ಮಾಡಲಾಗಿದೆ. ಆದರೆ, ಪೊಲೀಸರೇ ಫುಟ್ಪಾತ್ಗೆ ಬ್ಯಾರಿಕೇಡ್ ನಿಲ್ಲಿಸಿ ಸಾರ್ವಜನಿಕರು ರಸ್ತೆಯ ಮೇಲೆ ಓಡಾಡುವಂತೆ ಮಾಡಿದ್ದಾರೆ.
ಹೌದು, ವಾಣಿಜ್ಯ ನಗರಿ ಹುಬ್ಬಳ್ಳಿಯ ಜನನಿಬಿಡ ಹಾಗೂ ಹೆಚ್ಚು ವಾಹನ ದಟ್ಟಣೆಯ ಪ್ರದೇಶವಾದ ಹುಬ್ಬಳ್ಳಿಯ ಉಪನಗರ ಠಾಣೆ ಹತ್ತಿರದಲ್ಲಿ ಸಾರ್ವಜನಿಕರ ಓಡಾಟಕ್ಕೆ ಮಾಡಿರುವ ಫುಟ್ಪಾತ್ ಮೇಲೆ ಹಾಗೂ ಚಲಿಸುವ ಮಾರ್ಗವನ್ನು ಬ್ಯಾರಿಕೇಡ್ ನಿಂದ ಬಂದ್ ಮಾಡಿದ್ದಾರೆ.
ಇದರಿಂದ ಜನರು ವಾಹನಗಳ ಮಧ್ಯದಲ್ಲಿಯೇ ನಡೆದುಕೊಂಡು ಹೋಗಬೇಕಾದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಫುಟ್ಪಾತ್ಗಳನ್ನು ನಿರ್ಮಾಣ ಮಾಡಿದ್ದು, ಸಾರ್ವಜನಿಕರ ಓಡಾಟಕ್ಕೋ ಅಥವಾ ಪೊಲೀಸರ ಬ್ಯಾರಿಕೇಡ್ ಹೊಂದಿಸಿ ಇಡುವುದಕ್ಕೋ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಇನ್ನು ಗುರುವಾರ ದಿನದಂದು ಸಾಯಿಬಾಬಾ ಮಂದಿರಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಫುಟ್ಪಾತ್ ಬಂದ್ ಮಾಡಿರುವುದರಿಂದ ವಾಹನ ದಟ್ಟಣೆ ನಡುವೆಯೇ ಜನರು ನಡೆದುಕೊಂಡು ಹೋಗುವಂತಾಗಿದೆ. ಕೂಡಲೇ ಪೊಲೀಸ್ ಆಯುಕ್ತರು ಈ ಬಗ್ಗೆ ಸೂಕ್ತ ಕ್ರಮ ಕೈಗಳ್ಳಬೇಕಿದೆ.
ಇದನ್ನೂ ಓದಿ: ಸರ್ವರ್ ಸಮಸ್ಯೆಯಿಂದ ಸಕಾಲಕ್ಕೆ ಸಿಗದ ಕೋವಿಡ್ ವರದಿ: ಸರ್ಕಾರದ ವಿರುದ್ಧ ಸ್ಥಳೀಯರ ಆಕ್ರೋಶ