ETV Bharat / state

ಹುಬ್ಬಳ್ಳಿ ಟ್ರ್ಯಾಕ್ಟರ್ ಕಳವು ಪ್ರಕರಣ: ಮೂವರು ಆರೋಪಿಗಳ ಬಂಧನ - The police operation was successful

ಟ್ರ್ಯಾಕ್ಟರ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿಯ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

Three accused arrested in tractor theft case
ಟ್ರ್ಯಾಕ್ಟರ್ ಕಳವು ಪ್ರಕರಣ ಮೂವರು ಆರೋಪಿಗಳ ಬಂಧನ
author img

By

Published : Nov 2, 2022, 11:17 AM IST

ಹುಬ್ಬಳ್ಳಿ: ಟ್ರ್ಯಾಕ್ಟರ್ ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.‌ ಧಾರವಾಡದ ಅಕ್ಷರಭಾಷಾ ಕಂಬಾರಗಣವಿ, ಇಮಾಮಸಾಬ ತಹಶೀಲ್ದಾರ, ಸಯ್ಯದಸಾಬ್ ದೇವಗಿರಿ ಬಂಧಿತರು.

ಇ-ಮೇಲ್ ಮುಖಾಂತರ ದೂರು: ಹುಬ್ಬಳ್ಳಿ ತಾಲೂಕು ಅಂಚಟಗೇರಿಯ ಸಂತೋಷಕುಮಾರ ಸಾದರ ಎಂಬುವರಿಗೆ ಸೇರಿದ್ದ ಟ್ರ್ಯಾಕ್ಟರ್ ಅನ್ನು ಆರೋಪಿಗಳು ಟೇಲರ್ ಸಮೇತ ಕಳವು ಮಾಡಿದ್ದರು. ಟ್ರ್ಯಾಕ್ಟರ್ ಕಳ್ಳತನ ಆಗಿದ್ದ ಬಗ್ಗೆ ಇ-ಮೇಲ್ ಮುಖಾಂತರ ಮಾಲೀಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ದೂರಿನನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿ ಟ್ರಾಕ್ಟರ್ ಸಹಿತ ಟೇಲರನ್ನು ವಶಕ್ಕೆ ಪಡೆದಿದ್ದಾರೆ. ಇತ್ತೀಚೆಗೆ ಧಾರವಾಡ ಉಪನಗರ, ಧಾರವಾಡ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೂ ಕೂಡ ಬಂಧಿತರು ಟ್ರ್ಯಾಕ್ಟರ್‌ ಟೇಲರ್ ಕಳ್ಳತನದ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ವಿನಾಯಕ ಬಾಳಿಗಾ ಕೊಲೆ ಪ್ರಕರಣ: ವಿಶೇಷ ಅಭಿಯೋಜಕರಾಗಿ ವಕೀಲ ಬಾಲಕೃಷ್ಣನ್ ನೇಮಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.