ಧಾರವಾಡ: ಸರಣಿ ಮನೆಗಳ್ಳತನ ಮಾಡುತ್ತಿದ್ದ ಖದೀಮರನ್ನು ವಿದ್ಯಾಗಿರಿ ಪೊಲೀಸರು ಬಂಧಿಸಿದ್ದಾರೆ.
ಮಂಜು ಹುಲ್ಲೂರ್, ಶಾನು ಹಾಲಭಾವಿ ಮತ್ತು ರಾಜು ಅಮ್ಮಿನಭಾವಿ ಬಂಧಿತರು. ಇವರೆಲ್ಲಾ ನಗರದ ಲಕ್ಷ್ಮಿಸಿಂಗನಕೇರಿ ನಿವಾಸಿಗಳಾಗಿದ್ದು, ವಿವಿಧ ಮನೆಗಳಲ್ಲಿ ಕಳ್ಳತನ ಮಾಡಿದ್ದರು.
ಬಂಧಿತರಿಂದ 250 ಗ್ರಾಂ ಚಿನ್ನ, 690 ಗ್ರಾಂ ಬೆಳ್ಳಿ ಸೇರಿದಂತೆ 7 ಲಕ್ಷ ,10 ಸಾವಿರ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೇವಲ 20 ದಿನಗಳಲ್ಲಿ ಖದೀಮರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.