ಹುಬ್ಬಳ್ಳಿ: ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನದಲ್ಲಿ ತಿರುಗಾಡುತ್ತಿದ್ದರೆ ಎಚ್ಚರವಾಗಿರುವ ಅಗತ್ಯ ಇಲ್ಲದಿದ್ದರೆ ಬೀಳುತ್ತೆ ಸಾವಿರಾರು ರೂಪಾಯಿ ದಂಡ. ಪೊಲೀಸರಿಂದ ತಪ್ಪಿಸಿಕೊಳ್ಳಬಹುದು ಆದರೆ, ಪೊಲೀಸರು ಅಳವಡಿಸಿರುವ ಕ್ಯಾಮೆರಾಗಳಿಂದ ಅಲ್ಲ. ANPR ಕ್ಯಾಮೆರಾಗಳು ಸಂಚಾರ ನಿಯಮಗಳನ್ನು ಉಲ್ಲಂಘನೆಯನ್ನು ಸೆರೆ ಹಿಡಿಯುತ್ತವೆ ಎಂಬುದನ್ನು ನಾವೆಲ್ಲ ಗಮನಿಸಬೇಕು.
ನಗರದ ಮೊಹಮ್ಮದ್ ರಫೀಕ್ ಗುಡಗೇರಿ ಎಂಬ ವ್ಯಕ್ತಿ ಸಂಚಾರ ನಿಯಮ ಉಲ್ಲಂಘನೆ ಮಾಡಿ ಓಡಾಡುತ್ತಿದ್ದರು. ಹೆಲ್ಮೆಟ್ ಧರಿಸದೇ ಓಡಾಡಿರುವುದು ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಶಿರೂರು ಪಾರ್ಕ್‌ನ ಹರ್ಷ ಹೋಟೆಲ್ ಬಳಿ ಉತ್ತರ ಟ್ರಾಫಿಕ್ ಎಎಸ್‌ಐ ರಾಮಜಾನಬಿ ಅಳಗವಾಡಿ ಮತ್ತು ಪೊಲೀಸ್ ಕಾನ್ಸ್ಟೇಬಲ್ ಸಂತೋಷ ಚವ್ಹಾಣ ಕರ್ತವ್ಯ ನಿರ್ವಹಿಸುತ್ತಿರುವಾಗ ಪಲ್ಸರ್ ಬೈಕ್‌ನಲ್ಲಿ ಬಂದ ವ್ಯಕ್ತಿಯನ್ನು ಗಮನಿಸಿದ್ದಾರೆ.
ದಂಡವನ್ನು ಪರಿಶೀಲಿಸಲು ಸಿಬ್ಬಂದಿ ವಾಹನದ ಸಂಖ್ಯೆ ನಮೂದಿಸಿದಾಗ ಅವರು ಅನೇಕ ಸಂಚಾರ ಉಲ್ಲಂಘನೆ ಮಾಡಿ ದಂಡವನ್ನು ಪಾವತಿಸದಿರುವುದು ಕಂಡು ಬಂದಿದೆ ಸ್ಥಳದಲ್ಲೇ ಪೊಲೀಸರು ಆತನಿಗೆ 17,500 ರೂ. ದಂಡ ಹಾಕಿದ್ದಾರೆ.
ಹೆಲ್ಮೆಟ್ ಇಲ್ಲದೇ ಬೈಕ್ ಚಲಾಯಿಸುತ್ತಿದ್ದ ಈತ ಮೊದಲ ಅಪರಾಧ 2017ರಲ್ಲಿ ನಡೆದಿತ್ತು, ಇಲ್ಲಿಯವರೆಗೆ 23 ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ದ್ವಿಚಕ್ರ ವಾಹನವನ್ನು ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದ್ದು ಬೈಕ್ ಚಾಲಕನಿಗೆ ದಂಡ ಪಾವತಿಸುವಂತೆ ಸಂಚಾರ ಇನ್ಸ್‌ಪೆಕ್ಟರ್ ಸೂಚಿಸಿದ್ದಾರೆ.
ಇದನ್ನೂ ಓದಿ:ಗೂಡ್ಸ್ ವಾಹನ ಸಂಚಾರ ನಿರ್ಬಂಧ: ಹೆಬ್ಬಾಳದಲ್ಲಿ ಕಡಿಮೆಯಾಯ್ತು ಟ್ರಾಫಿಕ್ ಜಾಮ್!