ಹುಬ್ಬಳ್ಳಿ: ನಗರದಲ್ಲಿ ಕೊರೊನಾ ಸೋಂಕು ಕಡಿಮೆಯಾಗಿರುವ ಪರಿಣಾಮ ಮಾರುಕಟ್ಟೆಗಳಲ್ಲಿ ದೀಪಾವಳಿ ಖರೀದಿ ಭರಾಟೆ ಇಂದು ಜೋರಾಗಿ ನಡೆದಿದೆ.
ದೀಪಾವಳಿ ಹಬ್ಬ ಸಂಭ್ರಮ, ಸಡಗರ ತಂದಿದ್ದು, ಹುಬ್ಬಳ್ಳಿಯಲ್ಲಿ ಜನರು ತಮಗೆ ಬೇಕಾದ ಹೂ, ಹಣ್ಣು, ತರಕಾರಿ, ಪಟಾಕಿ, ದೀಪಗಳು ಸೇರಿದಂತೆ ಇನ್ನಿತರ ವಸ್ತುಗಳ ಖರೀದಿಗೆ ಮಾರುಕಟ್ಟೆಗೆ ಆಗಮಿಸಿದ್ದರು.
ಕಳೆದ ವರ್ಷ ಕೊರೊನಾ 2ನೇ ಅಲೆಯ ಅಬ್ಬರವಿತ್ತು. ಹೀಗಾಗಿ, ಜನರು ದೀಪಾವಳಿಯನ್ನು ಸಂಭ್ರಮಿಸಿರಲಿಲ್ಲ. ಆದರೆ, ಈ ಬಾರಿ ವೈರಸ್ ಅಬ್ಬರ ಕಡಿಮೆಯಾಗಿದ್ದು, ಜನ ಮಾರುಕಟ್ಟೆಗಳಲ್ಲಿ ಮುಗಿಬಿದ್ದು ವಸ್ತುಗಳನ್ನು ಖರೀದಿಸುತ್ತಿದ್ದಾರೆ.
ಮಳಿಗೆ ಹಾಗೂ ವಾಹನಗಳ ಪೂಜೆ ನಿಮಿತ್ತವಾಗಿ ಬೂದುಕುಂಬಳ, ನಿಂಬೆಹಣ್ಣುಗಳಿಗೂ ಸಾಕಷ್ಟು ಬೇಡಿಕೆ ಬಂದಿದೆ. ಜತೆಗೆ ಬಗೆ ಬಗೆಯ ವಿನ್ಯಾಸ ಮತ್ತು ಬಣ್ಣದ ಆಕಾಶ ಬುಟ್ಟಿಗಳು ಕೂಡ ಮಳಿಗೆಗಳಲ್ಲಿ ರಾರಾಜಿಸುತ್ತಿವೆ.
ಇದನ್ನೂ ಓದಿ: 5 ದಿನ ಮಾತ್ರ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ..ವ್ಯಾಪಾರಸ್ಥರ ಅಸಮಾಧಾನ