ETV Bharat / state

ಪೇವರ್ಸ್ ಬೇಡ, ಸಿಸಿ ರಸ್ತೆ ನಿರ್ಮಿಸಿ : ಹುಬ್ಬಳ್ಳಿ ಜನರ ಒತ್ತಾಯ

ಪೇವರ್ಸ್ ಹಾಕುವುದರಿಂದ ರಸ್ತೆ ಮನೆಗಳಿಗಿಂತ ಎತ್ತರವಾಗಿದ್ದರಿಂದ ಒಂದು ಚಿಕ್ಕ ಮಳೆಯಾದರೂ ಕೂಡ ಮನೆ ಒಳಗೆ ನೀರು ನುಗ್ಗುತ್ತದೆ. ನಮಗೆ ಶಾಶ್ವತ ಪರಿಹಾರ ಇಲ್ಲದಂತಾಗಿದೆ. ಅಧಿಕಾರಿಗಳು ಪೇವರ್ಸ್ ಹಾಕುವುದನ್ನು ಬಂದ್ ಮಾಡಿ ಎಂದರು ಕೂಡ ಕಾಂಟ್ರಾಕ್ಟರ್ ಮಾಡಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ..

Hubballi
ಹುಬ್ಬಳ್ಳಿ
author img

By

Published : Feb 4, 2022, 4:45 PM IST

Updated : Feb 4, 2022, 5:36 PM IST

ಹುಬ್ಬಳ್ಳಿ : ಸುಮಾರು ವರ್ಷಗಳಿಂದ ರಸ್ತೆಯಿಲ್ಲದೆ ಪರದಾಡುತ್ತಿದ್ದ ಹುಬ್ಬಳ್ಳಿ ಜನತೆಗೆ ಸುಗಮ ರಸ್ತೆ ನಿರ್ಮಿಸಲು ಮಹಾನಗರ ಪಾಲಿಕೆ ಅಧಿಕಾರಿಗಳು ಪೇವರ್ಸ್ ಹಾಕಿದ್ದಾರೆ. ಆದರೆ, ಅಲ್ಲಿನ ಜನರು ಮಾತ್ರ ಪೇವರ್ಸ್ ಬೇಡ ಎಂದು ಪಟ್ಟು ಹಿಡಿದಿದ್ದಾರೆ.

ಸಿಸಿ ರಸ್ತೆ ನಿರ್ಮಿಸುವಂತೆ ಸ್ಥಳೀಯರ ಒತ್ತಾಯ

ಹುಬ್ಬಳ್ಳಿಯ ವಾರ್ಡ್ ನಂ.‌ 47ರಲ್ಲಿ ಬರುವ ಲೋಕಪ್ಪನ ಹಕ್ಕಲದಲ್ಲಿ ಸ್ಲಂ ಬೋರ್ಡ್ ವತಿಯಿಂದ ರಸ್ತೆ ಮಾಡಲು ಕಾಮಗಾರಿ ಆರಂಭವಾಗಿದೆ. ‌ಆದರೆ, ಅದು ರಸ್ತೆ ಬದಲಿಗೆ ಪೇವರ್ಸ್ ಹಾಕುತ್ತಿರುವುದರಿಂದ ಇಲ್ಲಿನ ನಿವಾಸಿಗಳಲ್ಲಿ ಆತಂಕ ಎದುರಾಗಿದೆ.

ಪೇವರ್ಸ್ ಹಾಕುವುದರಿಂದ ರಸ್ತೆ ಮನೆಗಳಿಗಿಂತ ಎತ್ತರವಾಗಿದ್ದರಿಂದ ಒಂದು ಚಿಕ್ಕ ಮಳೆಯಾದರೂ ಕೂಡ ಮನೆ ಒಳಗೆ ನೀರು ನುಗ್ಗುತ್ತದೆ. ನಮಗೆ ಶಾಶ್ವತ ಪರಿಹಾರ ಇಲ್ಲದಂತಾಗಿದೆ. ಅಧಿಕಾರಿಗಳು ಪೇವರ್ಸ್ ಹಾಕುವುದನ್ನು ಬಂದ್ ಮಾಡಿ ಎಂದರು ಕೂಡ ಕಾಂಟ್ರಾಕ್ಟರ್ ಮಾಡಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಲವು ದಿನಗಳ ಹಿಂದೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು, ಇಲ್ಲಿ ರಸ್ತೆ ಕಾಮಗಾರಿ ಮಾಡಲು ಭೂಮಿ ಪೂಜೆ ಮಾಡಿದ್ದರು. ಆದರೆ, ಇಲ್ಲಿನ ನಿವಾಸಿಗಳು ಪೇವರ್ಸ್ ಹಾಕುವುದು ಬೇಡ ಸಿಸಿ ರಸ್ತೆ ಮಾಡಿಸಿ ಕೊಡಿ ಎಂದು ಕೇಳಿದಾಗ, ಆಯ್ತು ಸಿಸಿ ರಸ್ತೆ ಮಾಡಿಸಿ ಕೊಡುತ್ತೇವೆ ಎಂದು ಹೇಳಿ ಹೋಗಿದ್ದರಂತೆ. ಆದರೆ, ಇಲ್ಲಿ ಆಗಿದ್ದೆ ಬೇರೆ. ಆದ್ದರಿಂದ, ಪೇವರ್ಸ್ ಹಾಕಿದ್ರೆ ತೊಂದರೆಯಾಗುತ್ತದೆ. ಕೂಡಲೇ ಕಾಮಗಾರಿ ನಿಲ್ಲಿಸಿ ಎಂದು ಒತ್ತಾಯ ಮಾಡಿದ್ದಾರೆ.

ಓದಿ: ಫೈವ್​ಸ್ಟಾರ್ ಹೋಟೆಲ್​ನ ಜೂಜು ಅಡ್ಡೆ ಮೇಲೆ ಸಿಸಿಬಿ ದಾಳಿ.. ಆರು ಮಂದಿ ಬಂಧನ

Last Updated : Feb 4, 2022, 5:36 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.