ಧಾರವಾಡ: ಕಾಂಗ್ರೆಸ್ ಮುಖಂಡ ಪರಮೇಶ್ ಕಾಳೆ ವಿರುದ್ಧ ಮಹಿಳಾ ಪಿಡಿಒವೊಬ್ಬರು ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಮ್ಮಿನಭಾವಿ ಪಿಡಿಒ ಅಮ್ಮಿನಭಾವಿ ಪಿಡಿಒ ಪುಷ್ಪಾವತಿ ಮೇದಾರ ತಮ್ಮ ದೂರಿನಲ್ಲಿ, ಪರಮೇಶ ಕಾಳೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ, ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಕಚೇರಿಯಲ್ಲಿ ಮಹಿಳಾ ಪಿಡಿಒ ಮತ್ತು ಪರಮೇಶ ಕಾಳೆ ಏಕವಚನದಲ್ಲಿ ಪರಸ್ಪರ ಬಡಿದಾಡಿಕೊಂಡಿದ್ದಾರೆ ಎನ್ನಲಾಗಿದೆ.
ಶಿವಳ್ಳಿ ಗ್ರಾಮ ಪಂಚಾಯತಿಗೆ ಇಂತಹ ಭ್ರಷ್ಟ ಅಧಿಕಾರಿಯನ್ನು ಹಾಕಬೇಡಿ ಎಂದು ಕಾಳೆ ಪಟ್ಟು ಹಿಡಿದರೆ, ಇತ್ತ ನಾನೇನು ಭ್ರಷ್ಟಾಚಾರ ಮಾಡಿದ್ದೇನೆ ಸಾಬೀತು ಮಾಡು ಎಂದು ಪಿಡಿಒ ಕೂಡ ಸವಾಲು ಹಾಕಿದ್ದಾರೆ ಎನ್ನಲಾಗಿದೆ. ಈ ಕುರಿತು ಧಾರವಾಡ ಉಪನಗರ ಪೊಲೀಸ್ ಠಾಣೆಗೆ ಇಬ್ಬರೂ ದೂರು ನೀಡಿದ್ದಾರೆ.