ETV Bharat / state

5 ಲಕ್ಷಕ್ಕೆ ಶೇ.5ರಂತೆ ಲಂಚ ಕೇಳಿ ಎಸಿಬಿ ಬಲೆಗೆ ಬಿದ್ದ ದೇವರಹುಬ್ಬಳ್ಳಿ ಪಿಡಿಒ - darwad PDB was arrested by ACB for demanding bribes

ಉದ್ಯೋಗ ಖಾತರಿ ಯೋಜನೆಯಲ್ಲಿ ಮಾಡಿದ ಕೆಲಸದ ಬಿಲ್ ಮಾಡಲು ಲಂಚಕ್ಕೆ ಬೇಡಿಕೆಯಿಟ್ಟ ಪಿಡಿಒ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿಡಿಓ ಎಸಿಬಿ ಬಲೆಗೆ

author img

By

Published : Mar 30, 2021, 8:09 PM IST

ಧಾರವಾಡ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಮಾಡಿದ ಕೆಲಸದ ಬಿಲ್ ಮಾಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಗ್ರಾಮ‌ ಪಂಚಾಯಿತಿ ಅಭಿವೃದ್ದಿ ಅಧಿಕಾರಿ(ಪಿಡಿಒ) ಎಸಿಬಿ ಕೈಗೆ ಸಿಕ್ಕಿಬಿದ್ದಿದ್ದಾರೆ.

ಧಾರವಾಡ ತಾಲೂಕಿನ ದೇವರಹುಬ್ಬಳ್ಳಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮಹ್ಮದ ಯೂಸೂಫ್ ಅಬ್ದುಲ್ ಮುಜೀಬ ಚಕ್ಕೋಲಿ ಎಂಬುವವರನ್ನು ಅಧಿಕಾರಿಗಳು ಟ್ರ್ಯಾಪ್​​ ಮಾಡಿದ್ದಾರೆ. ದೇವರ ಹುಬ್ಬಳ್ಳಿ ಗ್ರಾಮದ ಶಿವಾಜಿ ಮಹದೇವಪ್ಪ ಆರೇರ ಅವರ ಹಣಕ್ಕೆ ಬಿಲ್​ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಇದನ್ನೂ ಓದಿ: ಪ್ರಯಾಣಿಕರ ಹೆಚ್ಚಿನ ಹಣಕ್ಕೆ ಬೇಡಿಕೆ ಆರೋಪ.. ಆಟೋಚಾಲಕರ ಜತೆಗೆ ಪೊಲೀಸರೊಂದಿಗೆ ಚರ್ಚೆ

ಈ ಅಧಿಕಾರಿ 5 ಲಕ್ಷ ರೂಪಾಯಿಗೆ ಶೇ.5ರಂತೆ 25 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಬಿಲ್ ಮಂಜೂರಾತಿ ಮಾಡಲು ಲಂಚ ಪಡೆಯುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.