ಹುಬ್ಬಳ್ಳಿ: ನೇತ್ರದಾನ ಅನ್ನೋದು ಕೂಡ ಶ್ರೇಷ್ಠದಾನ ಅಂತಾರೆ. ಅದನ್ನು ಮನಗಂಡ ಇಲ್ಲೊಂದು ಕುಟುಂಬ ಹೃದಯಘಾತದಿಂದ ಸಾವನ್ನಪ್ಪಿದ ತಮ್ಮ ಮಗನ ಕಣ್ಣುಗಳನ್ನು ದಾನ ಮಾಡುವ ಮೂಲಕ, ಬೇರೆ ಜೀವ ಪ್ರಪಂಚವನ್ನು ನೋಡುವ ಹಾಗೆ ಮಾಡಿ ಸಾರ್ಥಕತೆ ಮೆರೆದಿದೆ.
ಇಂತಹ ಸಂಕಷ್ಟಮಯ ಸನ್ನಿವೇಶದಲ್ಲೂ, ಹೆತ್ತವರು ಆತ್ಮಸ್ಥೈರ್ಯ ಕಳೆದುಕೊಳ್ಳದೆ, ಹುಬ್ಬಳ್ಳಿಯ ಕಿಮ್ಸ್ಗೆ ಮಗನ ಕಣ್ಣುಗಳ ಕಾರ್ನಿಯಾ ದಾನ ಮಾಡಿ ಇನ್ನೋರ್ವ ವ್ಯಕ್ತಿಗೆ ಬೆಳಕು ನೀಡಿದ್ದಾರೆ. ಮಗನ ಸಾವಿನ ದುಖಃದಲ್ಲೂ ಸಾರ್ಥಕತೆ ಮೆರೆದ ಪೋಷಕರ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.