ETV Bharat / state

ನಮ್ಮ ತಾತನೇ ನಮ್ಮ ಆಸ್ತಿ : ನಾಡೋಜ ಡಾ. ಪಾಪು ಮೊಮ್ಮಗಳು ವಿಜಯಾ ಪಾಟೀಲ - fulfill our grandfather s dream

ಅವಳಿ ನಗರದಲ್ಲಿ ಪಾಪು ಅವರ ಹೆಸರಿನಲ್ಲಿ ಸಭಾಭವನ ನಿರ್ಮಿಸಿ ಪ್ರತಿನಿತ್ಯ ಕಾರ್ಯಕ್ರಮಗಳನ್ನು ಆಯೋಜಿಸಬೇಕು, ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪಾಟೀಲ್ ಪುಟ್ಟಪ್ಪನವರ ಪುತ್ಥಳಿ ನಿರ್ಮಿಸಬೇಕು, ಹುಬ್ಬಳ್ಳಿಯಲ್ಲಿ ಒಂದು ರಸ್ತೆಗೆ ಪಾಪು ಅವರ ಹೆಸರಿಡಬೇಕು ಎಂದು ಪಾಪು ಮೊಮ್ಮಗಳು ಒತ್ತಾಯಿಸಿದ್ದಾರೆ.

Our grandfather is our property: Nadoja Dr. Papu's granddaughter Vijaya Patil..
ನಮ್ಮ ತಾತವೇ ನಮ್ಮ ಆಸ್ತಿ : ನಾಡೋಜ ಡಾ. ಪಾಪು ಮೊಮ್ಮಗಳು ವಿಜಯಾ ಪಾಟೀಲ..
author img

By

Published : Nov 12, 2022, 3:17 PM IST

ಹುಬ್ಬಳ್ಳಿ: ನಾಡೋಜ ದಿ. ಡಾ. ಪಾಟೀಲ್ ಪುಟ್ಟಪ್ಪನವರು ನಾಡು ನುಡಿಗಾಗಿ ಸಾಕಷ್ಟು ಶ್ರಮವಹಿಸಿದ್ದಾರೆ. ಅವರು ನಿಧನರಾದ ಬಳಿಕ ಸರ್ಕಾರ ನಮ್ಮ ತಾತನವರ ಸಾಧನೆಯತ್ತ ಗಮನ ಹರಿಸುತ್ತಿಲ್ಲ ಹೀಗಾಗಿ ಪಾಪು ಅವರ ಪರಿಚಯ ಹಾಗೂ ಸಾಧನೆಗಳ ಕುರಿತಂತೆ, ರಾಜ್ಯ ಸರ್ಕಾರ ಶಾಲಾ-ಕಾಲೇಜ್ ಪಠ್ಯ ಪುಸ್ತಕಗಳಲ್ಲಿ ಪ್ರಕಟಿಸುವ ಮೂಲಕ ಮುಂಬರುವ ಪೀಳಿಗೆಗೆ ಅರ್ಥೈಸಬೇಕೆಂದು ನಾಡೋಜ ದಿ. ಡಾ. ಪಾಟೀಲ್ ಪುಟ್ಟಪ್ಪನವರ ಮೊಮ್ಮಗಳಾದ ವಿಜಯಾ ಪಾಟೀಲ್ ಒತ್ತಾಯಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಳಿ ನಗರದಲ್ಲಿ ಪಾಪು ಅವರ ಹೆಸರಿನಲ್ಲಿ ಸಭಾಭವನ ನಿರ್ಮಿಸಿ ನಿತ್ಯ ಕಾರ್ಯಕ್ರಮಗಳನ್ನು ಆಯೋಜಿಸಬೇಕು, ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪಾಟೀಲ್ ಪುಟ್ಟಪ್ಪನವರ ಪುತ್ಥಳಿ ನಿರ್ಮಿಸಬೇಕು, ಹುಬ್ಬಳ್ಳಿಯಲ್ಲಿ ಒಂದು ರಸ್ತೆಗೆ ಪಾಪು ಅವರ ಹೆಸರಿಡಬೇಕು, ಅಲ್ಲದೇ ಹು-ಧಾ ಪಾಪು ಅವರ ಕರ್ಮ ಭೂಮಿಯಾಗಿದ್ದು, ಅವಳಿ ನಗರದ ಮಧ್ಯೆ ಅವರ ಹೆಸರಿನಲ್ಲಿ 5 ಎಕರೆ ಭೂಮಿ ಮೀಸಲಿಡಬೇಕು ಎಂದು ವಿಜಯಾ ಪಾಟೀಲ್ ಸರ್ಕಾರಕ್ಕೆ ಒತ್ತಾಯಿಸಿದರು.

ನಮ್ಮ ತಾತವೇ ನಮ್ಮ ಆಸ್ತಿ : ನಾಡೋಜ ಡಾ. ಪಾಪು ಮೊಮ್ಮಗಳು ವಿಜಯಾ ಪಾಟೀಲ..

ನಮ್ಮ ತಾತಾನ ಕನಸು ನನಸು ಮಾಡುವುದೇ ನನ್ನ ಮೊದಲ ಧ್ಯೇಯ: ಹಾಗೆ ಮಾತಾನಾಡಿದ ಅವರು, ಇನ್ನು ನಮ್ಮ ತಾತಾ ಪಾಟೀಲ್ ಪುಟ್ಟಪ್ಪನವರು ಬರೆದಿಟ್ಟಿ ವಿಲ್ ಪತ್ರದಲ್ಲಿ ಎಲ್ಲರಿಗೂ ಸಮಾನವಾಗಿ ಆಸ್ತಿಯನ್ನು ಹಂಚಿಕೆ ಮಾಡಿದ್ದರು. ಮನೆಯನ್ನು ಇಬ್ಬರು ಗಂಡು ಮಕ್ಕಳಿಗೆ, ಹಾಗೂ ಖಾಲಿ ಜಾಗವನ್ನು ಇಬ್ಬರು ಹೆಣ್ಣುಮಕ್ಕಳು ಹಾಗೂ ಮೊಮ್ಮಗಳಾದ ನನಗೆ ವಿಲ್ ಪತ್ರ ದಲ್ಲಿ ಹಂಚಿಕೆ ಮಾಡಿದ್ದರು.

ಇದಕ್ಕೆ ಪಾಪು ಅವರ ಮಗ ಅಶೋಕ ಪಾಟೀಲ ವಿರೋಧ ವ್ಯಕ್ತಪಡಿಸಿದ್ದರಿಂದ ಈ ಪ್ರಕರಣ ನ್ಯಾಯಾಲಯದಲ್ಲಿದೆ. ಆದರೆ ನಮಗೆ ಅವರೇ ಆಸ್ತಿ ಹೀಗಾಗಿ ನಮ್ಮ ತಾತಾನ ಕನಸು ನನಸು ಮಾಡುವುದೇ ನನ್ನ ಮೊದಲ ಧ್ಯೇಯ ಎಂದರು.

ಇದನ್ನೂ ಓದಿ:ಹುಬ್ಬಳ್ಳಿ: ಚಲಿಸುತ್ತಿದ್ದ ರೈಲಿನಲ್ಲಿ ಆಂಧ್ರ ವ್ಯಕ್ತಿಯ ಬರ್ಬರ ಹತ್ಯೆ... ದುಷ್ಕರ್ಮಿಗಳು ಎಸ್ಕೇಪ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.