ETV Bharat / state

ಶತಾಯಗತಾಯ ಶೆಟ್ಟರ್​ಗೆ ಸೋಲುಣಿಸೋದೇ ನಮ್ಮ ಗುರಿ: ಬಿ ಎಸ್ ಯಡಿಯೂರಪ್ಪ - ರೋಡ್ ಶೋ‌

ಜಗದೀಶ್ ಶೆಟ್ಟರ್​ಗೆ ರಾಜ್ಯಸಭೆ ಸದಸ್ಯ ಕೇಂದ್ರ ಮಂತ್ರಿ ಆಗುವಂತೆ ಆಫರ್ ನೀಡಲಾಯಿತು. ಇಷ್ಟೆಲ್ಲಾ ಆದ ಮೇಲೂ ಪಕ್ಷಕ್ಕೆ ದ್ರೋಹ ಮಾಡಿ ಕಾಂಗ್ರೆಸ್​ಗೆ ಹೋಗಿದ್ದಾರೆ:ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆರೋಪ.

Former CM Yeddyurappa spoke to the media.
ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಮಾಧ್ಯಮದವರ ಜತೆ ಮಾತನಾಡಿದರು.
author img

By

Published : Apr 25, 2023, 11:10 PM IST

ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಮಾಧ್ಯಮದವರ ಜತೆ ಮಾತನಾಡಿದರು.

ಹುಬ್ಬಳ್ಳಿ: ಶೆಟ್ಟರ್ ಗೆ ಸೋಲುಣಿಸೋ ಉದ್ದೇಶದಿಂದ ಸಭೆ ಕರೆಯಲಾಗಿತ್ತು. ಶತಾಯಗತಾಯ ಶೆಟ್ಟರ್ ಗೆ ಸೋಲುಣಿಸೋದೇ ಸಭೆಯ ಗುರಿ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.

ನಗರದ ಖಾಸಗಿ ಹೋಟೆಲ್​​ ನಲ್ಲಿ ವೀರಶೈವ ಲಿಂಗಾಯತರ ಸಭೆ ಬಳಿಕ‌ ಅವರು ಮಾತನಾಡಿ, ಪಕ್ಷ ವಿರೋಧಿಗೆ ತಕ್ಕ ಪಾಠ ಕಲಿಸುವಂತೆ ವೀರಶೈವ, ಲಿಂಗಾಯತ ಸಮುದಾಯದವರಿಗೆ ಕರೆ ನೀಡಿದ್ದೇನೆ. ಅದು ಖಂಡಿತಾ ಕೆಲಸ ಮಾಡುತ್ತೆ. ಈ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಗೆ ಸೋಲು ಖಚಿತ. ಈ ನಿಟ್ಟಿನಲ್ಲಿ ನಾನೂ ಸಹ ಬುಧವಾರ ರೋಡ್ ಶೋ‌ ಮಾಡ್ತೇನೆ. ಮುಂದೆ ಪ್ರಧಾನಿ ಮೋದಿ‌ ಸಹ ಬರೋ ಸಾಧ್ಯತೆಗಳಿವೆ ಎಂದರು.

ಜಗದೀಶ್ ಶೆಟ್ಟರ್ ನಡೆಯ ಬಗ್ಗೆ ಸತ್ಯ ಸಂಗತಿ ಹೇಳಲು ವೀರಶೈವ ಸಭೆ ಕರೆದಿದ್ದೇನೆ. ಶೆಟ್ಟರ್ ರನ್ನು ಸಿಎಂ, ವಿರೋಧ ಪಕ್ಷದ ನಾಯಕ, ರಾಜ್ಯಾಧ್ಯಕ್ಷನನ್ನಾಗಿ ಮಾಡಿದ್ದೇವೆ. ಬಿ.ಬಿ.ಶಿವಪ್ಪ ಅವರನ್ನು ಬಿಟ್ಟು ಶೆಟ್ಟರ್ ಪರವಾಗಿ ನಿಂತು‌ ವಿರೋಧ ಪಕ್ಷದ ನಾಯಕನನ್ನಾಗಿ ಮಾಡಿದ್ದೆವು. ಅವರಿಗೆ ಏನು ಅನ್ಯಾಯ ಮಾಡಿದ್ದೆವು. ಸ್ವತಃ ಪ್ರಧಾನಿಗಳೇ ಮಾತನಾಡಿದರು. ನಿಮ್ಮ ಶ್ರೀಮತಿಯವರನ್ನು ನಿಲ್ಲಿಸಿ‌, ಅವರಿಗೆ ಟಿಕೆಟ್ ಕೊಡ್ತೇವೆಂದು ತಿಳಿಸಿದ್ದೆವು ಎಂದು ಸ್ಪಷ್ಟಪಡಿಸಿದರು.

ರಾಜ್ಯಸಭೆ ಸದಸ್ಯರಾಗಿ, ಕೇಂದ್ರ ಮಂತ್ರಿ ಆಗುವಂತೆ ಆಫರ್ ನೀಡಲಾಯಿತು. ಇಷ್ಟೆಲ್ಲಾ ಆದ ಮೇಲೂ ಪಕ್ಷಕ್ಕೆ ದ್ರೋಹ ಮಾಡಿ ಕಾಂಗ್ರೆಸ್ ಗೆ ಹೋಗಿದ್ದಾರೆ. ಯಾವುದೇ ಕಾರಣಕ್ಕೂ ಶೆಟ್ಟರ್ ಪರವಾಗಿ ನಿಲ್ಲಬೇಡಿ. ಚುನಾವಣೆಯಲ್ಲಿ ದಯನೀಯ ಸೋಲಾಗುವಂತೆ ಮಾಡಬೇಕು. ಅದೇ ಅವರಿಗೆ ಪಾಠವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂಓದಿ:2 ವರ್ಷದಲ್ಲಿ ಅದಾನಿ ಆಸ್ತಿ 10 ಲಕ್ಷ ಕೋಟಿಗೆ ಏರಿಕೆಯಾಗಿದೆ ಈ ಬಗ್ಗೆ ಮೋದಿ ಉತ್ತರಿಸಲಿ : ಮಲ್ಲಿಕಾರ್ಜುನ ಖರ್ಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.