ಧಾರವಾಡ: ಅತೃಪ್ತ ಶಾಸಕರಿಗೆ ವಿಪ್ ಜಾರಿ ಸಂಬಂಧಿಸಿದಂತೆ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎನ್.ಹೆಚ್ ಕೋನರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆದಿದ್ದು, ನಾಳೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ವಿಧಾನಸಭೆಯಲ್ಲಿ 20ಕ್ಕೂ ಹೆಚ್ಚು ಶಾಸಕರ ಚರ್ಚೆ ಬಾಕಿ ಇದೆ. ಎಲ್ಲಾ ಚರ್ಚೆ ಮುಗಿದ ಬಳಿಕ ಏನು ತೀರ್ಮಾನ ಮಾಡಬೇಕು ಎಂಬುದನ್ನು ನಿರ್ಣಯಿಸಲಾಗುತ್ತದೆ ಎಂದರು.
ಶಾಸಕರ ಕುದುರೆ ವ್ಯಾಪಾರದ ಬಗ್ಗೆ ವಿಧಾನಸೌಧದಲ್ಲಿ ಚರ್ಚೆಯಾಗಿದ್ದು, ಈ ಬೆಳವಣಿಗೆಯಿಂದ ತಲೆ ತಗ್ಗಿಸುವಂತಾಗಿದೆ. ಈ ವ್ಯವಸ್ಥೆ ನೋಡಿದ್ರೆ, ರಾಜಕಾರಣ ಕಮರ್ಷಿಯಲ್ ಆಗುವ ಆತಂಕವಿದೆ. ಬಿಜೆಪಿ ಶಾಸಕರನ್ನು 'ಆಪರೇಷನ್' ಮಾಡುವುದು ಕುಮಾರಸ್ವಾಮಿ ಅವರಿಗೆ ದೊಡ್ಡ ವಿಚಾರವಲ್ಲ ಎಂದು ಎಚ್ಚರಿಸಿದರು.