ಹುಬ್ಬಳ್ಳಿ: ಗರ್ಭಕೋಶದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಮಹಿಳೆಗೆ ಚಿಟಗುಪ್ಪಿ ಆಸ್ಪತ್ರೆ ವೈದ್ಯಾಧಿಕಾರಿಯೊಬ್ಬರು ತೆರೆದ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಮತ್ತೊಂದು ಮೈಲುಗಲ್ಲು ಸಾಧಿಸಿದ್ದಾರೆ.
ಹುಬ್ಬಳ್ಳಿಯ ಚಿಟಗುಪ್ಪಿ ಹೆರಿಗೆ ಆಸ್ಪತ್ರೆ ಶುಚಿ, ಅಚ್ಚುಕಟ್ಟಾಗಿ ಇರುವುದರ ಜೊತೆಗೆ ಇಲ್ಲಿಯ ವೈದ್ಯರು ಬಡ ಜನರಿಗೆ ದೇವರಂತೆ ತೆರೆಮರೆಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಹುಬ್ಬಳ್ಳಿ ನಿವಾಸಿ ನಸೀನ್ ಬಾನು ಎಂಬುವವರು ಗರ್ಭಕೋಶದ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಓಪನ್ ಸರ್ಜರಿ ಮಾಡಿದ್ದರೆ ಇವರಿಗಿರುವ ವಯೋಸಹಜ ಕಾಯಿಲೆಯಿಂದ ಸಾಕಷ್ಟು ತೊಂದರೆ ಆಗುವ ಸಾಧ್ಯತೆ ಇತ್ತು.
ಈ ಪ್ರಕರಣವನ್ನು ಸವಾಲಾಗಿ ತೆಗೆದುಕೊಂಡ ಚಿಟಗುಪ್ಪಿ ವೈದ್ಯಾಧಿಕಾರಿ ಡಾ.ಶ್ರೀಧರ್ ದಂಡೆಪ್ಪನವರ, ಖಾಸಗಿ ಆಸ್ಪತ್ರೆ ಸ್ನೇಹಿತರ ಬಳಿಯಿಂದ ಲ್ಯಾಪೋಸ್ಕೋಪಿ ಮಷಿನ್ ಪಡೆದು ಸರ್ಜರಿ ಮಾಡಿ ಗರ್ಭಕೋಶದಲ್ಲಿದ್ದ ಕ್ಯಾನ್ಸರ್ ಗಡ್ಡೆಯನ್ನು ಯಶಸ್ವಿಯಾಗಿ ಹೊರ ತೆಗೆದು ಹೊಸ ಬದುಕು ನೀಡಿದ್ದಾರೆ.
ಚಿಟಗುಪ್ಪಿ ಇತಿಹಾಸದಲ್ಲೇ ಇದೇ ಮೊದಲು ಇಂತಹ ಚಿಕಿತ್ಸೆ ನೀಡಲಾಗಿದೆ. ಅಲ್ಲದೇ ಗರ್ಭಿಣಿಯರಿಗೆ ಆಶಾದಾಯಕ ಚಿಟಗುಪ್ಪಿ ಆಸ್ಪತ್ರೆ ಸಿಬ್ಬಂದಿ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 'ಚಿಟಗುಪ್ಪಿ ಬ್ರಿಟಿಷರ ಲಾಕರ್' ಓಪನ್.. ಅದರಲ್ಲಿ ಸಿಕ್ಕಿದ್ದೇನು?- ಈಟಿವಿ ಭಾರತ ವರದಿ ಫಲಶೃತಿ