ಧಾರವಾಡ: ಆನ್‌ಲೈನ್‌ನಲ್ಲೇ ಅಧಿಕಾರಿಗಳನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ದಿಶಾ ಸಭೆಯನ್ನು ನವದೆಹಲಿಯಿಂದಲೇ ಆನ್‌ಲೈನ್ ಮೂಲಕ ಸಚಿವ ಜೋಶಿ ನಡೆಸಿದರು. ಧಾರವಾಡ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ವೇಳೆ ಉದ್ಯೋಗ ಖಾತ್ರಿ ಯೋಜನೆ, ಅವ್ಯವಹಾರ ವಿಚಾರಕ್ಕೆ, ಬೇರೆಯವರ ಹೆಸರಿನಲ್ಲಿ ಹಣ ಜಮಾ ಮಾಡಿಸಿಕೊಂಡು ದುರ್ಬಳಕೆ ಮಾಡಿಕೊಂಡಿದ್ದಾರೆಂಬ ಆರೋಪ ಕೇಳಿಬಂದಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಸಿಇಒ ಡಾ. ಬಿ.ಸಿ. ಸತೀಶ ಅವರನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತರಾಟೆಗೆ ತೆಗೆದುಕೊಂಡರು.
ಸಮಾಜಾಯಿಸಿ ನೀಡಲು ಹೋಗಿ ಪ್ರಗತಿ ವರದಿಯಲ್ಲಿ ಪದಬಳಕೆ ತಪ್ಪಾಗಿದೆ ಎಂದು ಸಿಇಒ ಹೇಳಿದ ಬಳಿಕ, ಸಚಿವರು ಮತ್ತಷ್ಟು ಗರಂ ಆದರು. ನನ್ನ ಬಳಿ ಉದ್ಯೋಗ ಖಾತ್ರಿ ಹಣ ದುರುಪಯೋಗ ದಾಖಲೆಗಳಿವೆ ಎಂದು ತೋರಿಸಿದರು. ತಪ್ಪಿತಸ್ಥರ ವಿರುದ್ಧ ಈ ಕೂಡಲೇ ಕ್ರಮ ಕೈಗೊಳ್ಳುವಂತೆ ಸಿಇಒಗೆ ಖಡಕ್ ವಾರ್ನಿಂಗ್ ನೀಡಿದರು.