ಹುಬ್ಬಳ್ಳಿ: ಲಾಕ್ ಡೌನ್ ಸಂದರ್ಭವನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ವಂಚಕರು ಮದ್ಯ ಪ್ರಿಯರ ಜೇಬಿಗೆ ಕತ್ತರಿ ಹಾಕಲು ಸ್ಕೆಚ್ ಹಾಕುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಕೆಲವು ವಂಚಕರು ಗೋಕುಲ್ ರಸ್ತೆಯ ತೇಜ್ ಲಿಕ್ಕರ್ ಶಾಪ್ ಹೆಸರು ಬಳಸಿಕೊಂಡು ನಕಲಿ ಫೇಸ್ಬುಕ್ ಸೃಷ್ಟಿಸಿ ಮದ್ಯವನ್ನು ಆನ್ಲೈನ್ ಡೆಲಿವರಿ ನೀಡಲಾಗುವುದು ಎಂದು ಜಾಹೀರಾತು ಹರಿಬಿಟ್ಟಿದ್ದಾರೆ. ವಿಷಯ ತಿಳಿದ ಲಿಕ್ಕರ್ ಶಾಪ್ ಮಾಲೀಕ ಅಕ್ಷಯ್ ಪವಾರ್ ಕೂಡಲೇ ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಏ. 11 ರಂದು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆದರೂ ಕೂಡ ವಂಚಕರು ತಮ್ಮ ಚಾಳಿಯನ್ನು ಮುಂದುವರೆಸಿದ್ದಾರೆ. ಮದ್ಯ ಪೂರೈಸುವುದಕ್ಕೂ ಮುನ್ನ ಗೂಗಲ್ ಪೇ ಅಥವಾ ಪೆಟಿಎಂ ಮೂಲಕ ಹಣ ಕಟ್ಟಿಸಿಕೊಂಡು ವಂಚನೆ ಮಾಡುವುದನ್ನು ಸ್ಥಳಿಯರೊಬ್ಬರು ವಾಯ್ಸ್ ರೆಕಾರ್ಡ್ ಮಾಡಿ ಹರಿಬಿಟ್ಟಿದ್ದಾರೆ.