ಹುಬ್ಬಳ್ಳಿ: ಬಂಜಾರಾ (ಲಂಬಾಣಿ) ಸಮುದಾಯ ಅಂದರೆ ಭಾರತೀಯ ಪರಂಪರೆಗೆ ಸಾಕಷ್ಟು ಕೊಡುಗೆ ಕೊಟ್ಟಿರುವ ಸಮುದಾಯ. ಇಲ್ಲಿನ ಆಚರಣೆ ಹಾಗೂ ಉಡುಗೆ-ತೊಡುಗೆ ವಿಭಿನ್ನ ಹಾಗೂ ವಿಶೇಷವಾಗಿದೆ. ಸಮುದಾಯದ ಆಚರಣೆಗೆ ಉತ್ತೇಜನ ನೀಡುವ ಹಾಗೂ ಲಂಬಾಣಿ ಜನರ ಆರ್ಥಿಕ ಮಟ್ಟವನ್ನು ವೃದ್ಧಿಸಲು ಕೇಂದ್ರ ಸರ್ಕಾರ ವೋಕಲ್ ಫಾರ್ ಲೋಕಲ್ ಎಂಬಂತೆ ಒನ್ ಸ್ಟೇಷನ್ ಒನ್ ಪ್ರೊಡೆಕ್ಟ್ ಅಭಿಯಾನ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಲಂಬಾಣಿ ಸಮುದಾಯದ ಉತ್ಪನ್ನಗಳ ಮಾರಾಟ ಹಾಗೂ ಪರಿಚಯಕ್ಕೆ ನೈಋತ್ಯ ರೈಲ್ವೆ ಕೈ ಜೋಡಿಸಿದೆ.
ಸಂಡೂರ ಲಂಬಾಣಿ ಕಸೂತಿ ಕಲಾ ಕೇಂದ್ರದ ಸ್ಟಾಲ್ವೊಂದು ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಲೋಕಾರ್ಪಣೆಗೊಂಡಿದ್ದು, ಲಂಬಾಣಿ ಉಡುಪು, ಕನ್ನಡಿ, ನಾಣ್ಯಗಳು, ಚಿಪ್ಪುಗಳ ಮೂಲಕ ಅಳವಡಿಸಿದ ಸಿದ್ಧ ಉಡುಪುಗಳನ್ನು ಇಲ್ಲಿ ಮಾರಾಟಕ್ಕಿಡಲಾಗಿದೆ. ಲಂಬಾಣಿ ಸಮುದಾಯದಲ್ಲಿ ತಮ್ಮ ಬಟ್ಟೆಗಳನ್ನು ತಾವೇ ಸಿದ್ಧ ಪಡಿಸಿಕೊಳ್ಳುತ್ತಾರೆ. ಆದರೆ ಈಗ ಒತ್ತಡದ ಬದುಕಿನಲ್ಲಿ ಈ ವ್ಯವಸ್ಥೆ ಕಣ್ಮರೆಯಾಗುತ್ತಿದ್ದು, ಇಂತಹ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಶ್ರಮಿಸುತ್ತಿದೆ.
ಇದನ್ನೂ ಓದಿ: ವಿದ್ಯಾರ್ಥಿಗಳೇ ಗಮನಿಸಿ: ಕಲಬುರಗಿಯ ಈ 16 ಕಾಲೇಜುಗಳಲ್ಲಿ ದಾಖಲಾತಿ ಮಾಡದಿರಿ..