ಹುಬ್ಬಳ್ಳಿ : ಅತಿ ವೇಗದಿಂದ ಕಾರೊಂದು ಪಲ್ಟಿಯಾಗಿ ಓರ್ವ ಸಾವನ್ನಪ್ಪಿ, ನಾಲ್ವರು ಗಾಯಗೊಂಡಿರುವ ಘಟನೆ ನಗರದ ಹೊರವಲಯದ ರಾಯನಾಳ ಕ್ರಾಸ್ ಬಳಿ ಇಂದು ಬೆಳಗ್ಗೆ ಸಂಭವಿಸಿದೆ.
![one-killed-and-four-injured-in-hubballi-car-accident](https://etvbharatimages.akamaized.net/etvbharat/prod-images/kn-hbl-01-car-pulti-orava-saavu-av-ka10025_01012022122847_0101f_1641020327_303.jpg)
ಕಾರಿನಲ್ಲಿ ಒಟ್ಟು ಐವರು ಪ್ರಯಾಣಿಸುತ್ತಿದ್ದರು. ಇದರಲ್ಲಿ ಯುವಕನೋರ್ವ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಗಾಯಗೊಂಡ ನಾಲ್ವರನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
![one-killed-and-four-injured-in-hubballi-car-accident](https://etvbharatimages.akamaized.net/etvbharat/prod-images/kn-hbl-01-car-pulti-orava-saavu-av-ka10025_01012022122847_0101f_1641020327_270.jpg)
ಮೃತ ಯುವಕನನ್ನ ಹುಬ್ಬಳ್ಳಿ ಮಹಾವೀರಗಲ್ಲಿಯ ಗಣೇಶ ಬಂಡಿ ಎಂದು ಗುರುತಿಸಲಾಗಿದೆ. ಕಾರು ಲಕ್ಷ್ಮಿಕಾಂತ ಕಾಟವಾಟೆ ಎನ್ನುವವರ ಹೆಸರಿನಲ್ಲಿದೆ. ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳ ಬಗ್ಗೆ ಹಾಗೂ ಇತರೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇದನ್ನೂ ಓದಿ: ರಾಯಚೂರು : ಸರ್ಕಾರಿ ಶಾಲೆಯಲ್ಲಿ ಹೊಸ ವರ್ಷದ ಎಣ್ಣೆ ಪಾರ್ಟಿ ಮಾಡಿರುವ ಆರೋಪ