ಹುಬ್ಬಳ್ಳಿ: ತಾಲೂಕಿನ ಶಿರಗುಪ್ಪಿ ಗ್ರಾಮದ ನಿವಾಸಿಗಳು ಹಾಗೂ ಪ್ರಗತಿಪರ ರೈತರಾಗಿದ್ದ ಶಿವಪುತ್ರಪ್ಪ ಶಿದ್ಧಪ್ಪ ನೆಲಗುಡ್ಡ (90) ಮತ್ತು ಶಿವಪುತ್ರಪ್ಪ ಪತ್ನಿ ಬಸಮ್ಮ ಶಿವಪುತ್ರಪ್ಪ ನೆಲಗುಡ್ಡ (86) ಮಂಗಳವಾರ ನಿಧನರಾಗಿದ್ದಾರೆ.
ಮೃತರಿಗೆ ಇಬ್ಬರು ಗಂಡು ಮಕ್ಕಳು ಒಬ್ಬ ಪುತ್ರಿ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಪ್ರಮಾಣದ ಬಂಧುಗಳನ್ನ ಅಗಲಿದ್ದಾರೆ. ಮೃತ ಶಿವಪುತ್ರಪ್ಪ ಶಿದ್ಧಪ್ಪ ನೆಲಗುಡ್ಡ ಕೃಷಿಯಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ರೈತರು ಬೆಳೆ ಹಾನಿ, ಸಾಲ ಶೂಲಕ್ಕೆ ಸಿಲುಕಿ ಸಾವನ್ನಪ್ಪಬಾರದು ಎಂದು ಜಮೀನುಗಳಲ್ಲಿ ಮಿಶ್ರ ಬೆಳೆ ಹಾಗೂ ಹವಾಮಾನ ಆಧಾರಿತ ಬೆಳೆ ಬೆಳೆದು ಮಾದರಿಯಾದವರು.
ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಶಿವಪುತ್ರಪ್ಪ ಶಿದ್ಧಪ್ಪ ನೆಲಗುಡ್ಡ ಅವರು ಇಂದು ಬೆಳಿಗ್ಗೆ ನಿಧನರಾಗಿದ್ದರು. ಅವರ ಕರ್ಮಾಧಿಗಳು ಹಾಗೂ ಅಂತ್ಯಕ್ರಿಯೆಗೆ ಸಿದ್ಧತೆ ನಡೆದಾಗ ಇನ್ನೇನು ಕೆಲವೇ ನಿಮಿಷಗಳಲ್ಲಿ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯುತ್ತಿದೆ ಎನ್ನುವಾಗ ಮೃತರ ಪತ್ನಿ ಬಸಮ್ಮ ಕೂಡ ಪತಿ ಅಗಲಿಕೆಯಿಂದ ಸಾವನ್ನಪ್ಪಿದ್ದಾರೆ. ನಂತರ ಮೃತರ ಅಂತ್ಯಕ್ರಿಯೆಯನ್ನು ರುದ್ರಭೂಮಿಯ ಅಕ್ಕಪಕ್ಕದಲ್ಲಿ ಮಾಡಲಾಯಿತು.
ಓದಿ: ವಿದ್ಯುತ್ ಶಾಕ್; ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಂಪಾಪತಿ ದಂಪತಿ ಸಾವು