ಧಾರವಾಡ: ಲಾಕ್ ಡೌನ್ ಗೂ ಬೆಲೆ ಕೊಡದೇ ತರಕಾರಿ ಖರೀದಿ ಹಿನ್ನೆಲೆ ಹೊಸ ಎಪಿಎಂಸಿ ತರಕಾರಿ ಮಾರುಕಟ್ಟೆಗೆ ಅಧಿಕಾರಿಗಳ ದಾಳಿ ನಡೆಸಿದ್ದಾರೆ.
ಉಪ ವಿಭಾಗಾಧಿಕಾರಿ ಮಹಮ್ಮದ್ ಜುಬೇರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.ವ್ಯಾಪಾರಿಗಳನ್ನು ಸಿಬ್ಬಂದಿ ತೆರವುಗೊಳಿಸಿದ್ದು, ಕಳೆದ ನಾಲ್ಕು ದಿನಗಳಿಂದ ಎಷ್ಟೇ ಹೇಳಿದ್ರೂ ಕೇಳದೇ ತರಕಾರಿ ವ್ಯಾಪಾರ ಮಾಡುತ್ತಿದ್ದರು.
ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನರು ಗುಂಪು ಸೇರುತ್ತಿದ್ದರು.ಆಯಾ ಬಡಾವಣೆಗಳಿಗೆ ತರಕಾರಿ ಪೂರೈಕೆಗೆ ಜಿಲ್ಲಾಡಳಿತ ವ್ಯವಸ್ಥೆ ಮಾಡಲಾಗಿದೆ. ಆದರೂ ಹೊಸ ಎಪಿಎಂಸಿಗೆ ಮಾರಾಟಕ್ಕೆ ವ್ಯಾಪಾರಿಗಳು ತರಕಾರಿ ತಂದಿದ್ದರು. ಈ ಹಿನ್ನೆಲೆ ಎಲ್ಲರನ್ನೂ ಸಿಬ್ಬಂದಿ ತೆರವುಗೊಳಿಸಿದ್ದಾರೆ.
ಇನ್ನೂ ಗ್ರಾಮೀಣ ಭಾಗದ ಕೆಲವೆಡೆ ಸಾಮಾಜಿಕ ಅಂತರ ಕಾಯ್ದುಕೊಂಡು ಪಡಿತರ ಪಡೆದುಕೊಳ್ಳುತ್ತಿದ್ದು, ಗ್ರಾಮಸ್ಥರ ಈ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.