ಹುಬ್ಬಳ್ಳಿ: ಕೊರೊನಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸರ್ಕಾರ ನಿರ್ದೇಶನ ನೀಡಿದೆ.
ಖಾಸಗಿ ಹಾಗೂ ಸರ್ಕಾರಿ ಸಾರಿಗೆ ಸಂಸ್ಥೆಯ ಬಸ್ಗಳಿಗೆ, ಪ್ರಯಾಣಿಕರ ಸಂಚಾರಕ್ಕೆ ನಿರ್ಧಿಷ್ಟ ಮಿತಿಯನ್ನು ಘೋಷಣೆ ಮಾಡಲಾಗಿದೆ. ಆದರೆ ಹುಬ್ಬಳ್ಳಿ - ಧಾರವಾಡ ಮಹಾನಗರದಲ್ಲಿ ಸಂಚರಿಸುವ ಬೇಂದ್ರೆ ಬಸ್ನಲ್ಲಿ ಮಾತ್ರ, ಯಾವುದೇ ನಿಯಮ ಪಾಲಿಸದೇ ಬೇಕಾಬಿಟ್ಟಿ ಸಂಚಾರ ನಡೆಸಲಾಗುತ್ತಿದೆ.
ಕೊರೊನಾ ವೈರಸ್ ಧಾರವಾಡ ಜಿಲ್ಲೆಯಲ್ಲಿ ದ್ವಿಶತಕ ಬಾರಿಸಿದರು ಕೂಡ, ಜನರ ಓಡಾಟ ಮಾತ್ರ ಕಡಿಮೆಯಾಗುತ್ತಿಲ್ಲ. ಅಲ್ಲದೆ ಲಾಕ್ಡೌನ್ ಸಡಿಲಿಕೆ ಮಾಡಿ ಬಸ್ ಸಂಚಾರಕ್ಕೆ ಅನುಮತಿ ನೀಡಿದ ಬೆನ್ನಲ್ಲೇ, ಸಾಮಾಜಿಕ ಅಂತರ ಕಾಯ್ದುಕೊಂಡು ಸಂಚಾರ ಮಾಡಲು ಖಾಸಗಿ ಬಸ್ ಕೂಡ ರಸ್ತೆಗಿಳಿಯಲು ಅನುಮತಿ ನೀಡಿದೆ. ಆದರೆ ಬೇಂದ್ರೆ ನಗರ ಸಾರಿಗೆಯಲ್ಲಿ ಮಾತ್ರ, ಹಣದ ಆಸೆಗೆ ಹೆಚ್ಚು ಹೆಚ್ಚು ಪ್ರಯಾಣಿಕರನ್ನು ಹತ್ತಿಸಿಕೊಂಡು ಸಂಚರಿಸಲಾಗುತ್ತಿದೆ.
ಪ್ರಾರಂಭದ ಎರಡು ದಿನ ಮಾತ್ರ ಸಾಮಾಜಿಕ ಅಂತರಕ್ಕೆ ಬೆಲೆ ಇತ್ತು. ಈಗ ಆರೋಗ್ಯಕ್ಕೆ ಬೆಲೆಯಿಲ್ಲ ದುಡ್ಡಿಗೆ ಬೆಲೆ ಎಂಬುವಂತೆ ಬಸ್ಗಳು ಸಂಚಾರ ನಡೆಸಿವೆ. ಕೂಡಲೇ ಜಿಲ್ಲಾಡಳಿತ ಇದರ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕಿದೆ.