ಹುಬ್ಬಳ್ಳಿ : ಪ್ರಸ್ತುತ ದಿನಮಾನಗಳಲ್ಲಿ ವೈದ್ಯಕೀಯ ಸಿಬ್ಬಂದಿ ಜೀವನ ನಿಜಕ್ಕೂ ಮುಳ್ಳಿನ ದಾರಿಯಾಗಿದೆ. ಕಿಲ್ಲರ್ ಕೊರೊನಾ ವೈರಸ್ ವಿರುದ್ಧ ತಮ್ಮ ಜೀವನ ಕಾಪಾಡಿಕೊಂಡು ಇತರರ ಜೀವನ ರಕ್ಷಣೆ ಮಾಡುವುದು ವೈದ್ಯಕೀಯ ಸಿಬ್ಬಂದಿ ಜವಾಬ್ದಾರಿಯಾಗಿದೆ. ಇದೆಲ್ಲದರ ಮಧ್ಯದಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಗೋಳು ಕೇಳುವವರು ಯಾರೂ ಇಲ್ಲದಂತಾಗಿದೆ.
ಸರ್ಕಾರ ಹೊರಗುತ್ತಿಗೆ ಸಿಬ್ಬಂದಿಗೆ ಭರವಸೆ ನೀಡಿ ಕೆಲಸ ಮಾಡಿಸಿಕೊಂಡಿದೆ. ಆದರೆ ವೇತನ ಹಾಗೂ ಸೇವಾ ಭದ್ರತೆ ಇಲ್ಲದೆ ಹೀಗೆ ಬೇಕಾಬಿಟ್ಟಿ ನಡೆದುಕೊಳ್ಳುವುದರಿಂದ ಸಿಬ್ಬಂದಿ ಕಣ್ಣೀರು ಹಾಕುವಂತಾಗಿದೆ. ರಾಜ್ಯಾದ್ಯಂತ ಅನೇಕ ಕಡೆಗಳಲ್ಲಿ ಹೊರಗುತ್ತಿಗೆ ನೌಕರರು ಸರ್ಕಾರದ ಭರವಸೆ ಮಾತಿನ ಈಡೇರಿಕೆಯನ್ನು ಎದುರು ನೋಡುತ್ತಾ ಕುಳಿತಿದ್ದಾರೆ. ಇನ್ನಾದರೂ ಸರ್ಕಾರ ಹಾಗೂ ಆಡಳಿತ ಮಂಡಳಿ ಎಚ್ಚೆತ್ತುಕೊಂಡು ಕೋವಿಡ್ ವಿರುದ್ಧ ಹೋರಾಟ ನಡೆಸುತ್ತಿರುವ ಸಿಬ್ಬಂದಿಯ ಹಿತಾಸಕ್ತಿ ಕಾಪಾಡಬೇಕಿದೆ.