ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಇಂದು ಯಾವುದೇ ಕೊರೊನಾ ಸೊಂಕು ಪತ್ತೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೆಲ್ತ್ ಬುಲೆಟಿನ್ ಬಿಡುಗಡೆಗೊಳಿಸಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ 158 ಜನರ ಮೇಲೆ ಕೋವಿಡ್19 ವೈರಸ್ನ ನಿಗಾ ಇಡಲಾಗಿದ್ದು, ಜೊತೆಗೆ 122 ಜನರಿಗೆ ಹೋಮ್ ಐಸೊಲೇಷನ್ ನೀಡಲಾಗಿದೆ ಎಂದು ಹೇಳಿದ್ದಾರೆ.
ಮೂರು ಜನರಿಗೆ ಆಸ್ಪತ್ರೆಯಲ್ಲಿ ಐಸೋಲೇಷನ್ ವ್ಯವಸ್ಥೆ ಮಾಡಲಾಗಿದೆ. 27 ಜನರು 14 ದಿನದ ಹೋಮ್ ಐಸೋಲೇಷನ್ ಪೂರ್ಣಗೊಳಿಸಿದ್ದಾರೆ. 6 ಜನರು 28 ದಿನದ ಹೋಮ್ ಐಸೋಲೇಷನ್ ಚಿಕಿತ್ಸೆ ಪೂರ್ಣಗೊಳಿಸಿದ್ದಾರೆ. ಅಲ್ಲದೆ ಐದು ಪ್ರಕರಣಗಳ ರಕ್ತ ಮಾದರಿಯನ್ನು ಲ್ಯಾಬ್ ಕಳಿಸಲಾಗಿದ್ದು, ಎರಡು ಮಾದರಿ ಕೂಡ ನೆಗೆಟಿವ್ ಬಂದಿದ್ದು, ಇನ್ನೂ ಮೂರು ಫಲಿತಾಂಶಗಳು ಬರಬೇಕಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.