ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಕುಮರಿ ಗ್ರಾಮ(Bridge problem in Kumari village) ದ ಜನರು ಸೇತುವೆ ಇಲ್ಲದೆ ಪರದಾಡುತ್ತಿದ್ದಾರೆ.
ತಮ್ಮ ದಿನನಿತ್ಯದ ಕೆಲಸಗಳಿಗಾಗಿ, ದಿನಬಳಕೆಯ ವಸ್ತುಗಳ ಖರೀದಿಗಾಗಿ ಕುಮರಿ ಗ್ರಾಮದ ಜನ ಕಲಘಟಗಿ ತಾಲೂಕಿಗೆ ತೆರಳುವುದು ಅನಿವಾರ್ಯ. ಆದರೆ, ಅಲ್ಲಿಗೆ ಹೋಗಬೇಕಾದರೆ ಹಳ್ಳ ದಾಟಲೇಬೇಕಾಗಿದೆ. ಇದೀಗ ಸೇತುವೆ ಇಲ್ಲದಂತಾಗಿದ್ದು, ಪರಿಣಾಮ ಸ್ಥಳೀಯರು ತಮ್ಮ ಅಂಗೈಯಲ್ಲಿ ಜೀವ ಹಿಡಿದುಕೊಂಡು ಹಳ್ಳ ದಾಟುತ್ತಿದ್ದಾರೆ.
ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯೂ ಇಲ್ಲದಂತಾಗಿದ್ದು, ಇದರಿಂದಾಗಿ ಜನ ಹೈರಾಣಾಗಿದ್ದಾರೆ. ದಯಮಾಡಿ ನಮಗೆ ಶಾಶ್ವತ ಪರಿಹಾರ ಒದಗಿಸಿಕೊಡಿ ಎಂದು ಮನವಿ ಮಾಡುತ್ತಿದ್ದಾರೆ. ಜನರ ಈ ಮನವಿಗೆ ಕ್ಷೇತ್ರದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಪಂದಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಓದಿ: ಲಾರಿ ಕಂಟೇನರ್ ಮನೆ : ನೆಮ್ಮದಿಯಿಂದ ರಾತ್ರಿ ಕಳೆಯುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ