ETV Bharat / state

ಉತ್ತರಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳಿಗೆ ನಿಖಿಲ್ ಕುಮಾರಸ್ವಾಮಿ ಭೇಟಿ..

ಹುಬ್ಬಳ್ಳಿಯಲ್ಲಿ ಮಳೆಯಿಂದ ಹಾನಿಗೊಳಗಾದ ಸ್ಥಳಗಳಿಗೆ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ, ಮಹಿಳೆ ಹಾಗೂ ವೃದ್ದೆಗೆ ಆರ್ಥಿಕ ನೆರವು ನೀಡಿದರು. ನಿರಾಶ್ರಿತರಿಗೆ ಆದಷ್ಟು ಬೇಗ ಪರಿಹಾರ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

nikhil-kumaraswamy-visits-flood-prone-areas
author img

By

Published : Aug 12, 2019, 11:42 AM IST

ಹುಬ್ಬಳ್ಳಿ: ಮಳೆಯಿಂದ ಹಾನಿಗೊಳಗಾದ ಸ್ಥಳಗಳಾದ ದೇವಿನಗರ, ಕುಂಬಾರ ಓಣಿ, ಹಳೇಹುಬ್ಬಳ್ಳಿ ಸೇರಿದಂತೆ ಇನ್ನಿತರ ಪ್ರದೇಶಗಳಿಗೆ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿದರು. ಇದೇ ಸಂದರ್ಭದಲ್ಲಿ ಮಹಿಳೆ ಹಾಗೂ ವೃದ್ದೆಗೆ ಹಣ ನೀಡಿದರು.

ಮಳೆ ಹಾನಿಗೆ ಒಳಗಾದ ದೇವಿನಗರದ ಮನೆ ಮನೆಗಳಿಗೂ ಭೇಟಿ ನೀಡಿದ ನಿಖಿಲ್‌ಕುಮಾರಸ್ವಾಮಿ, ಸಂತ್ರಸ್ತರ ಸಮಸ್ಯೆ ಆಲಿಸಿ ಕೈಲಾದ ಸಹಾಯ ಮಾಡಿದರು. ಹಾಗೇ ಎಲ್ಲರಿಗೂ ಆದಷ್ಟು ಬೇಗ ಪರಿಹಾರ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ನಿರಾಶ್ರಿತರಿಗೆ ಆರ್ಥಿಕ ನೆರವು ನೀಡಿದ ನಿಖಿಲ್ ಕುಮಾರಸ್ವಾಮಿ..

ನಂತರ ಮಾಧ್ಯಮದ ಜೊತೆ ಮಾತನಾಡಿದ ಅವರು, ಸತತ ಮಳೆಗೆ ರಾಜ್ಯ ತತ್ತರಿಸಿ ಹೋಗಿದೆ. ಈ ಹಿನ್ನೆಲೆಯಲ್ಲಿ ಜನರ ಸಂಕಷ್ಟ ನೋಡಿ ಹೊಟ್ಟೆ ಉರಿಯುವ ರೀತಿಯಾಗುತ್ತಿದೆ‌. ಇಂತಹ ಸಂದರ್ಭಗಳಲ್ಲಿ ರಾಜಕೀಯ ಮಾಡದೇ ಮಾನವೀಯ ದೃಷ್ಟಿಯಿಂದ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಮಳೆಯಿಂದಾಗಿ ದೊಡ್ಡ ಮಟ್ಟದ ಹಾನಿಯಾಗಿದ್ದು, ಮನೆಯಲ್ಲಿದ್ದ ವಸ್ತುಗಳು, ಅಗತ್ಯ ದಾಖಲೆಗಳು ನೀರಿನಲ್ಲಿ ಮುಳುಗಡೆಯಾಗಿವೆ. ಇದರಿಂದ ಅಪಾರ ಪ್ರಮಾಣದ ಹಾನಿಯಾಗಿದೆ. ತೊಂದರೆಗೆ ಒಳಗಾದ ಜನರಿಗೆ ಪ್ರಯತ್ನ ಮೀರಿ ಸಹಾಯ ಮಾಡಲಾಗುವುದು. ಅಲ್ಲದೇ ಅತಿವೃಷ್ಟಿ, ಅನಾವೃಷ್ಟಿ ಆದ ಪ್ರದೇಶಗಳನ್ನ ಗಮನ ಹರಿಸಿ ಹಾನಿಗೊಳಗಾದ ಜನರಿಗೆ ಸಹಾಯ ಮಾಡಬೇಕು. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹೆಚ್ಚಿನ ಗಮನ ಹರಿಸಬೇಕು.

ಅಲ್ಲದೇ ಮಂತ್ರಿಮಂಡಲದ ರಚನೆ ಆಗದಿರೋದಕ್ಕೆ ಹಲವಾರು ಕಾರಣಗಳಿವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಈ ಸಂದರ್ಭದಲ್ಲಿ ಸಿಎಂ ಆದವರೇ ಎಲ್ಲ ಕೆಲಸ ಮಾಡಲು ಅಸಾಧ್ಯ. ಹಾಗಾಗಿ ಎಲ್ಲರೂ ಒಟ್ಟಾಗಿ ಜನರಿಗೆ ಸ್ಪಂದಿಸಬೇಕೆಂದು ಹೇಳಿದರು. ಇದೇ ಸಂದರ್ಭದಲ್ಲಿ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಶಾಸಕ ಎನ್ ಹೆಚ್ ಕೋನರೆಡ್ಡಿ ಹಾಗೂ ಕಾರ್ಯಕರ್ತರು ನಿಖಿಲ್​ಗೆ ಸಾಥ್ ನೀಡಿದರು.

Intro:ಹುಬ್ಬಳಿBody:ಪ್ರವಾಹ ಪೀಡಿತ ಸ್ಥಳಗಳಿಗೆ ನಿಖಿಲ್ ಕುಮಾರಸ್ವಾಮಿ ಸಮಸ್ಯೆ ಆಲಿಸಿ ಹಣ ನೀಡಿದರು. ‌

ಹುಬ್ಬಳ್ಳಿ:- ಮಳೆಯಿಂದ ಹಾನಿಗೊಳಗಾದ ಸ್ಥಳಗಳಾದ ದೇವಿನಗರ, ಕುಂಬಾರ ಓಣಿ, ಹಳೇಹುಬ್ಬಳ್ಳಿ ಸೇರಿದಂತೆ ಇನ್ನಿತರ ಪ್ರದೇಶಗಳಿಗೆ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿದರು.ಇದೇ ಸಂದರ್ಭದಲ್ಲಿ ಮಹಿಳೆ ಹಾಗೂ ವೃದ್ದೆಗೆ ಹಣ ನೀಡಿ ಮಾನವೀಯತೆ ಮೆರೆದ್ರು...
ಮಳೆ ಹಾನಿಗೆ ಒಳಗಾದ ದೇವಿನಗರದ ಮನೆ ಮನೆಗಳಿಗೂ ಭೇಟಿ ನೀಡಿದ ನಿಖಿಲ್, ಸಂತ್ರಸ್ತರ ಸಮಸ್ಯೆ ಆಲಿಸಿ ಕೈಲಾದ ಸಹಾಯ ಮಾಡಿದರು. ಹಾಗೇ ಎಲ್ಲರಿಗೂತ ಆದಷ್ಟು ಬೇಗ ಪರಿಹಾರ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಮಾಧ್ಯಮದ ಜೊತೆ ಮಾತನಾಡಿದ ಅವರು, ಸತತ ಮಳೆಗೆ ರಾಜ್ಯ ತತ್ತರಿಸಿ ಹೋಗಿದ್ದು, ಈ ಹಿನ್ನೆಲೆಯಲ್ಲಿ ಜನರ ಸಂಕಷ್ಟ ನೋಡಿ ಹೊಟ್ಟೆ ಉರಿಯುವ ರೀತಿಯಾಗುತ್ತಿದೆ‌. ಇಂತಹ ಸಂದರ್ಭಗಳಲ್ಲಿ ರಾಜಕೀಯ ಮಾಡದೇ ಮಾನವೀಯ ದೃಷ್ಟಿಯಿಂದ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಇನ್ನೂ ಮಳೆಯಿಂದಾಗಿ ದೊಡ್ಡ ಮಟ್ಟದ ಹಾನಿಯಾಗಿದ್ದು, ಮನೆಯಲ್ಲಿದ್ದ ವಸ್ತುಗಳು, ಅಗತ್ಯ ದಾಖಲೆಗಳು ನೀರಿನಲ್ಲಿ ಮುಳುಗಡೆಯಾಗಿವೆ. ಇದರಿಂದ ಅಪಾರ ಪ್ರಮಾಣದ ಹಾನಿಯಾಗಿದೆ. ತೊಂದರೆಗೆ ಒಳಗಾದ ಜನರಿಗೆ ಪ್ರಯತ್ನ ಮೀರಿ ಸಹಾಯ ಮಾಡಲಾಗುವುದು. ಅಲ್ಲದೇ ಅತಿವೃಷ್ಟಿ, ಅನಾವೃಷ್ಟಿ ಆದ ಪ್ರದೇಶಗಳಲ್ಲಿ ಗಮನ ಹರಿಸಿ ಹಾನಿಗೊಳಗಾದ ಜನರಿಗೆ ಸಹಾಯ ಮಾಡಬೇಕು ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹೆಚ್ಚಿನ ಗಮನ ಹರಿಸಬೇಕು. ಅಲ್ಲದೇ ಮಂತ್ರಿಮಂಡಲದ ವಿಸ್ತರಣೆ ಗೊಳದಕ್ಕೆ ಹಲವಾರು ಕಾರಣಗಳಿವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ, ಈ ಸಂದರ್ಭದಲ್ಲಿ ಸಿಎಂ ಆದವರೇ ಎಲ್ಲ ಕೆಲಸ ಮಾಡಲು ಅಸಾಧ್ಯ ಹಾಗಾಗಿ ಎಲ್ಲರೂ ಒಟ್ಟಾಗಿ ಜನರಿಗೆ ಸ್ಪಂದಿಸಬೇಕೆಂದು ಹೇಳಿದರು. ಇದೆ ಸಂದರ್ಭದಲ್ಲಿ ಮಾಜಿ ಸಭಾಪತಿ ಬಸವರಾಜ ಹೋರಟ್ಟಿ, ಮಾಜಿ ಶಾಸಕ ಎನ್ ಹೆಚ್ ,ಕೋನರೆಡ್ಡಿ, ಕಾರ್ಯಕರ್ತರು ಸಾತ್ ನೀಡಿದರು....

____________________________

ಹುಬ್ಬಳ್ಳಿ: ಸ್ಟ್ರಿಂಜರ್

ಯಲ್ಲಪ್ಪ‌ ಕುಂದಗೋಳConclusion:ಯಲ್ಲಪ್ಪ ಕುಂದಗೊಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.