ETV Bharat / state

ಉತ್ತರ ಕರ್ನಾಟಕ-ದಕ್ಷಿಣ ಕರ್ನಾಟಕ ನಮ್ಗೇ ಬೇರೆಬೇರೆ ಅಲ್ಲ.. ನಿಖಿಲ್ ಕುಮಾರಸ್ವಾಮಿ

author img

By

Published : Aug 12, 2019, 1:44 PM IST

ಮಂತ್ರಿ ಮಂಡಲ‌ ಇನ್ನೂ ರಚನೆಯಾಗಿಲ್ಲ. ಪ್ರವಾಹ ಸ್ಥಳಗಳಿಗೆ ಮುಖ್ಯಮಂತ್ರಿ‌ ಒಬ್ಬರೇ ಓಡಾಡ್ತಿದ್ದಾರೆ ಪಾಪ ಎಂದು ನಟ ನಿಖಿಲ್​​​ ಕುಮಾರಸ್ವಾಮಿ, ಸಿಎಂ ಯಡಿಯೂರಪ್ಪ ಅವರ ಮೇಲೆ ಕನಿಕರ ವ್ಯಕ್ತಪಡಿಸಿದ್ದಾರೆ.

ನಿಖಿಲ್ ಕುಮಾರಸ್ವಾಮಿ

ಧಾರವಾಡ: ಇವತ್ತು ಮತ್ತು ನಾಳೆ ಉತ್ತರ ಕರ್ನಾಟಕ ಭಾಗದಲ್ಲಿ ಓಡಾಡಲಿದ್ದೇನೆ. ನಮ್ಮ ಪಕ್ಷದ ವರಿಷ್ಠರು ನಿನ್ನೆ ಸಂತ್ರಸ್ತರ ನೆರವಿಗೆ ಧಾವಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಮಾನವೀಯತೆ ದೃಷ್ಟಿಯಿಂದ ನಾವು ಬಂದಿದ್ದೇವೆ ಎಂದು ನಟ ಹಾಗೂ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಹೊಳೆ ಆಲೂರಿನ ಸಂತ್ರಸ್ತ ಅಂಧ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ದಕ್ಷಿಣ ಮತ್ತು ‌ಉತ್ತರ ಕರ್ನಾಟಕ ಬೇರೆಯಲ್ಲ. ನಮ್ಮ ಕಡೆಯಿಂದ ವೈಯಕ್ತಿಕ ಸಹಾಯ ಮಾಡಲು ಪ್ರಯತ್ನ ಪಡುತ್ತಿದ್ದೇವೆ. ನಮ್ಮ ಕರ್ತವ್ಯ ನಾವು ನಿರ್ವಹಿಸುತ್ತಿದ್ದೇವೆ ಎಂದರು.

ಮಾನವೀಯತೆ ದೃಷ್ಟಿಯಿಂದ ಸಂತ್ರಸ್ತರ ಕಷ್ಟ ಕೇಳುತ್ತಿದ್ದೇನೆ.. ನಿಖಿಲ್‌ಕುಮಾರಸ್ವಾಮಿ

ಮುಂದೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಜನರ ಪರವಾಗಿ ನಿಲ್ಲುತ್ತಾರೆಂಬ ಭರವಸೆ ಇದೆ. ಇವತ್ತು ಮಂತ್ರಿಮಂಡಲ‌ ಇನ್ನೂ ರಚನೆಯಾಗಿಲ್ಲ. ಮುಖ್ಯಮಂತ್ರಿ‌ ಒಬ್ಬರೇ ಓಡಾಡ್ತಿದ್ದಾರೆ ಪಾಪ ಎಂದು‌ ಕನಿಕರ ವ್ಯಕ್ತಪಡಿಸಿದರು. ರಾಷ್ಟ್ರೀಯ ವಿಪತ್ತು ಘೋಷಣೆ ವಿಳಂಬ ವಿಚಾರಕ್ಕೆ ಮಾತನಾಡಿದ ಅವರು, ಇವತ್ತು ಜನ ಸಂಕಷ್ಟದಲ್ಲಿದ್ದಾಗ ಯಾರೇ ಮಂತ್ರಿ ಇದ್ದರೂ ತಮ್ಮ ಧರ್ಮ ಪಾಲಿಸಬೇಕು. ಕೇಂದ್ರ ಸರ್ಕಾರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಆ ನಿರೀಕ್ಷೆಯನ್ನು ಕೇಂದ್ರ ಸರ್ಕಾರ ಹುಸಿ ಮಾಡೋದಿಲ್ಲ ಅಂತಾ ಅಂದುಕೊಂಡಿದ್ದೇವೆ ಎಂದು ಭರವಸೆ ವ್ಯಕ್ತಪಡಿಸಿದರು.

Intro:ಧಾರವಾಡ: ಇವತ್ತು ಮತ್ತು ನಾಳೆ ಉತ್ತರ ಕರ್ನಾಟಕ ಭಾಗದಲ್ಲಿ ಓಡಾಡಲಿದ್ದೇನೆ. ಪ್ರವಾಹದ ಭೀತಿ ಕಂಡಿದ್ದೇವೆ. ನಮ್ಮ ಪಕ್ಷದ ವರಿಷ್ಠರು ನಿನ್ನೆ ಸಂತ್ರಸ್ತರ ನೆರವಿಗೆ ಧಾವಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಮಾನವೀಯತೆ ದೃಷ್ಟಿಯಿಂದ ನಾವು ಬಂದಿದ್ದೇವೆ ಎಂದು ನಟ ಹಾಗೂ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಹೊಳೆ ಆಲೂರಿನ ಸಂತ್ರಸ್ತ ಅಂಧ ಮಕ್ಕಳಿಗೆ ಅಗತ್ಯ ವಸ್ತು ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ದಕ್ಷಿಣ ಮತ್ತು ‌ಉತ್ತರ ಕರ್ನಾಟಕ ಬೇರೆಯಲ್ಲ, ನಮ್ಮ ಕಡೆಯಿಂದ ವೈಯಕ್ತಿಕವಾಗಿ ಸಹಾಯ ಮಾಡಲು ಪ್ರಯತ್ನ ಪಡುತ್ತಿದ್ದೇವೆ. ನಮ್ಮ ಕರ್ತವ್ಯ ನಾವು ನಿರ್ವಹಿಸುತ್ತಾ ಇದೇವಿ ಎಂದರು.

ಮುಂದೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಜನರ ಪರವಾಗಿ ನಿಲ್ಲುತ್ತಾರೆಂಬ ಭರವಸೆ ಇದೆ. ಇವತ್ತು ಮಂತ್ರಿ ಮಂಡಲ‌ ಇನ್ನೂ ರಚನೆಯಾಗಿಲ್ಲ, ಮುಖ್ಯಮಂತ್ರಿ‌ ಒಬ್ಬರೇ ಓಡಾಡ್ತಾ ಇದಾರೆ ಪಾಪ ಎಂದು‌ ಕನಿಕರ ವ್ಯಕ್ತಪಡಿಸಿದರು.Body:ರಾಷ್ಟ್ರೀಯ ವಿಪತ್ತು ಘೋಷಣೆ ವಿಳಂಬ ವಿಚಾರಕ್ಕೆ ಮಾತನಾಡಿದ ಅವರು, ಇವತ್ತು ಜನ ಸಂಕಷ್ಟದಲ್ಲಿ ಇದ್ದಾಗ ಯಾರೇ ಮಂತ್ರಿ ಇದ್ದರೂ ತಮ್ಮ ಧರ್ಮ ಪಾಲಿಸಬೇಕು. ಕೇಂದ್ರ ಸರ್ಕಾರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಆ ನಿರೀಕ್ಷೆಯನ್ನು ಕೇಂದ್ರ ಸರ್ಕಾರ ಹುಸಿ ಮಾಡೊದಿಲ್ಲ ಅಂತಾ ಅಂದುಕೊಂಡಿದ್ದೇವೆ ಭರವಸೆ ವ್ಯಕ್ತಪಡಿಸಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.