ಹುಬ್ಬಳ್ಳಿ: ಮನೆ ಕಟ್ಟಲು ಬುನಾದಿ ತಗೆಯುತ್ತಿದ್ದ ವೇಳೆ ಕಾಂಪೌಂಡ್ ಗೋಡೆ ಕುಸಿದು ಕಾರ್ಮಿಕನೋರ್ವ ಮೃತಪಟ್ಟ ಘಟನೆ ಲಿಂಗರಾಜನಗರದಲ್ಲಿ ನಡೆದಿದೆ.
ಮಂಟೂರ ಗ್ರಾಮದ ಈರಪ್ಪ ಸಂಕನಗೌಡ್ರ ಮೃತಪಟ್ಟಿರುವ ಕಾರ್ಮಿಕ.
ಗಂಭೀರವಾಗಿ ಗಾಯಗೊಂಡ ಕಾರ್ಮಿಕನನ್ನು ತಕ್ಷಣವೇ ಕಿಮ್ಸ್ಗೆ ದಾಖಲಿಸಲಾಯಿತಾದ್ರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.