ETV Bharat / state

ಕಟಿಂಗ್ ಶಾಪ್​​ಗೆ ಹೋಗುವುದಾಗಿ ಹೇಳಿ ಹೋದವ ಹೆಣವಾಗಿ ಪತ್ತೆ - ಹುಬ್ಬಳ್ಳಿಯಲ್ಲಿ ಕಟಿಂಗ್ ಶಾಪ್ ಗೆ ಹೋಗುವುದಾಗಿ ಹೇಳಿ ಹೋದವ ಹೆಣವಾಗಿ ಪತ್ತೆ

ಎರಡು ದಿನಗಳ ಹಿಂದೆ ಹೆರಿಗೆಗಾಗಿ ತವರಿಗೆ ಬಂದಿರುವ ಪತ್ನಿ ನೋಡಲು ಬಂದಿದ್ದ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.

Murder of a person in Hubli
ಕಟಿಂಗ್ ಶಾಪ್ ಗೆ ಹೋಗುವುದಾಗಿ ಹೇಳಿ ಹೋದವ ಹೆಣವಾಗಿ ಪತ್ತೆ
author img

By

Published : Nov 24, 2020, 11:47 AM IST

ಹುಬ್ಬಳ್ಳಿ: ಎರಡು ದಿನಗಳ ಹಿಂದೆ ಹೆರಿಗೆಗಾಗಿ ತವರಿಗೆ ಬಂದಿರುವ ಪತ್ನಿ ನೋಡಲು ಅಂಚಟಗೇರಿಗೆ ಬಂದಿದ್ದ ವ್ಯಕ್ತಿಯೊಬ್ಬನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ಅಂಚಟಗೇರಿ ಗ್ರಾಮದ ಬಳಿ ನಡೆದಿದೆ.

ಹಾನಗಲ್ ನಾರಾಯಣ ದೇವಸ್ಥಾನ ಬಳಿಯ ನಿವಾಸಿ ಜಗದೀಶ ಮನೋಹರ ಕೊಲ್ಲಾಪುರ (27) ಮೃತಪಟ್ಟ ವ್ಯಕ್ತಿ ಎಂದು ತಿಳಿದು ಬಂದಿದೆ. ನಾಲ್ಕೈದು ದಿನಗಳ ಹಿಂದೆ ಹಾನಗಲ್ ಬಿಟ್ಟಿದ್ದು, ಎರಡು ದಿನಗಳ ಹಿಂದೆ ಹೆರಿಗೆಗಾಗಿ ತವರಿಗೆ ಬಂದಿರುವ ಪತ್ನಿಯನ್ನು ನೋಡಲು ಅಂಚಟಗೇರಿಗೆ ಬಂದಿದ್ದ ಎಂದು ತಿಳಿದು ಬಂದಿದೆ.

ಓದಿ: ಅವನಿಗೆ ಅವಳೇ ಬೇಕು, ಅವಳಿಗೆ ಇವನೇ ಬೇಕು : ದೊಡ್ಡಬಳ್ಳಾಪುರ ಸ್ಟೇಷನ್ ಮುಂದೆ ಹೈಡ್ರಾಮ

ಕಟಿಂಗ್ ಶಾಪ್​​​ಗೆ ಹೋಗುವುದಾಗಿ ಹೇಳಿ ಹೋದವ ಹೆಣವಾಗಿ ಪತ್ತೆಯಾಗಿದ್ದಾನೆ. ಯಾರೋ ಅರಣ್ಯ ಪ್ರದೇಶಕ್ಕೆ ಕರೆಸಿ, ಕಲ್ಲು ಎತ್ತಿ ಹಾಕಿ ಕೊಲೆ‌ ಮಾಡಿದ್ದಾರೆ ಎಂದು ಕುಟುಂಬಸ್ಥರು ಶಂಕಿಸಿದ್ದಾರೆ. ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.