ETV Bharat / state

ಪಶ್ಚಿಮ ಬಂಗಾಳ ಸಿಎಂ ಮಮತಾ ವಿರುದ್ಧ ಸಂಸದ ಜೋಶಿ ವಾಗ್ದಾಳಿ - undefined

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಪಾಕಿಸ್ತಾನಕ್ಕೆ ಏನು ಬೇಕೋ ಅದರ ಬಗ್ಗೆ ಮಾತನಾಡುತ್ತಿದ್ದಾರೆ. ಅವರನ್ನು ನಾಯಕರೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಸಂಸದ ಪ್ರಹ್ಲಾದ್ ಜೋಶಿ ಧಾರವಾಡದಲ್ಲಿ ಆರೋಪ ಮಾಡಿದ್ದಾರೆ.

ಸಂಸದ ಪ್ರಹ್ಲಾದ್ ಜೋಶಿ
author img

By

Published : Feb 19, 2019, 8:30 PM IST

ಧಾರವಾಡ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಪಾಕಿಸ್ತಾನಕ್ಕೆ ಏನು ಬೇಕೋ ಅದರ ಬಗ್ಗೆ ಮಾತನಾಡುತ್ತಿದ್ದಾರೆ. ಅವರನ್ನು ನಾಯಕರೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಸಂಸದ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.

ನಗರದಲ್ಲಿ ಶಿವಾಜಿ ಜಯಂತಿ ಅಂಗವಾಗಿ ಶಿವಾಜಿ ಮೂರ್ತಿಗೆ ಮಾಲಾರ್ಪಣೆ ಮಾಡಿದ ಬಳಿಕ‌ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಸಂದರ್ಭದಲ್ಲಿ ಮಮತಾ ಅವರು ಪಾಕಿಸ್ತಾನಕ್ಕೆ ಅನುಕೂಲಕರವಾಗಿ ಮಾತನಾಡುತ್ತಿದ್ದಾರೆ ಎಂದು ದೂರಿದರು.

ಮಮತಾ ಅವರಿಗೆ ಭಾರತದ ಬಗ್ಗೆ ಗೌರವ ಇದೆಯೋ ಇಲ್ಲವೋ, ಭಾರತದಲ್ಲಿ ಶಾಂತಿ ನೆಲೆಸಬೇಕು ಅನ್ನೋ ಇಚ್ಛೆ ಇದೆಯೋ ಇಲ್ಲವೋ ಎಂದು ಜೋಶಿ ಅನುಮಾನ ವ್ಯಕ್ತಪಡಿಸಿದರು. ಅಲ್ಲದೆ, ವೋಟಿಗಾಗಿ ಆತ್ಮಸಾಕ್ಷಿ, ಭಾರತದ ಮಾನ ಗೌರವ ಮಾರಾಟ ಮಾಡಬೇಕೆಂದು ತೀರ್ಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಸದ ಪ್ರಹ್ಲಾದ್ ಜೋಶಿ

ದೇವೇಗೌಡರು ಪ್ರಧಾನಿ ಆಗಿದ್ದಾಗ ಇಂತಹ ಘಟನೆ ನಡೆದಿಲ್ಲ ಎಂಬ ಹೇಳಿಕೆಗೆ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದ ಜೋಶಿ, ಎರಡು ದಿವಸ ಎಲ್ಲರೂ ಸುಮ್ಮನಿದ್ದರು. ಈಗ ಎಲ್ಲರೂ ಮಾತನಾಡುತ್ತಿದ್ದಾರೆ. ಇಲ್ಲಿಯವರೆಗೆ ನಾನು ನಮ್ಮ ಪಕ್ಷದ ಮುಖಂಡರು ಹೇಳಿಕೆ ನೀಡಿಲ್ಲ. ಮಮತಾ ಬ್ಯಾನರ್ಜಿ, ಕುಮಾರಸ್ವಾಮಿ ಹೇಳಿಕೆ ನೀಡುತ್ತಾರೆ ಅಂದರೆ 70 ವರ್ಷಗಳಲ್ಲಿ ನಾವು ಅನುಸರಿಸಿದ ನೀತಿಗಳೇ ಭಯೋತ್ಪಾದನೆ ಬೆಳೆಯಲು ಕಾರಣವಾಗಿದೆ ಎಂದರು.

ಈ ದೇಶದಲ್ಲಿ ಇರೋರೆಲ್ಲ ಒಂದೇ. ದೇಶದ್ರೋಹಿ, ಸಮಾಜ ದ್ರೋಹಿ ಚಟುವಟಿಕೆಗಳನ್ನು ಸಹಿಸೋದಿಲ್ಲ ಎಂಬ ಸಂದೇಶ ಕೊಟ್ಟವರು ನಾವು. ದೇಶದ್ರೋಹಿ ಒಸಾಮ ಬಿನ್ ಲಾಡೆನ್​​ಗೆ ಮಾನ್ಯ ಒಸಾಮ್ ಬಿನ್ ಲಾಡೆನ್ ಅನ್ನೋರು ಕಾಂಗ್ರೆಸ್​ನವರು. ಅಂತವರ ಜೊತೆ ನೀವು ಸೇರಿ ಸರ್ಕಾರ ಮಾಡಿದ್ದೀರಿ. ಸಿಎಂ ಸ್ವಲ್ಪ ಜವಾಬ್ದಾರಿಯಿಂದ ಮಾತನಾಡಬೇಕು ಎಂದು ಹೇಳಿದರು.

ಇನ್ನು ಶಾಸಕ ಸಿ.ಟಿ ರವಿ ಕಾರು ಅಪಘಾತ ಪ್ರಕರಣದ ಬಗ್ಗೆ ನನಗೆ ಪೂರ್ತಿ ಮಾಹಿತಿ ಇಲ್ಲ. ಅವರು ನೂರಕ್ಕೆ ನೂರರಷ್ಟು ಸಚ್ಛಾರಿತ್ರ್ಯ ರಾಜಕಾರಣಿ ಎಂದು ಸಿ.ಟಿ. ರವಿ ಪರ ಜೋಶಿ ಬ್ಯಾಟ್ ಬೀಸಿದರು.

sample description

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.