ಹುಬ್ಬಳ್ಳಿ: ಕೋವಿಡ್ ಸೋಂಕಿತ ತಾಯಿಯ ನರಳಾಟ ನೋಡಲಾಗದೆ ಮಗ ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ, ತಾಯಿಯೂ ಚಿಕಿತ್ಸೆ ಫಲಿಸದೆ ಮೃತಪಟ್ಟ ಹೃದಯವಿದ್ರಾವಕ ಘಟನೆ ನಗರದಲ್ಲಿ ನಡೆದಿದೆ.
ನಗರದ ಶಬರಿ ನಗರದ ನಿವಾಸಿಗಳಾದ ಇವರಿಗೆ ಒಂದು ವಾರದ ಹಿಂದೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಹೀಗಾಗಿ, ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯಲ್ಲಿ ತಾಯಿ ಉಸಿರಾಟದ ಸಮಸ್ಯೆಯಿಂದ ನರಳುತ್ತಿರುವುದನ್ನು ನೋಡಲಾಗದೆ ಮಗ ಮನೆಗೆ ಮರಳಿ ಹೋಮ್ ಕ್ವಾರಂಟೈನ್ಗೆ ಒಳಗಾಗಿದ್ದ. ಮನೆಗೆ ಬಂದ ಮಾರನೇ ದಿನ ಮೇ 2 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಮಗ ಮೃತಪಟ್ಟ ಬೆನ್ನಲ್ಲೇ ತಾಯಿಯೂ ಕೂಡ ಚಿಕಿತ್ಸೆ ಫಲಿಸದೆ ಇಂದು ಕಿಮ್ಸ್ನಲ್ಲಿ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ : ಬೆಡ್ಗಾಗಿ ಸಿಎಂ ನಿವಾಸದೆದುರು ಗೋಗರೆದ ಸೋಂಕಿತನ ಪತ್ನಿ: ಆಸ್ಪತ್ರೆಗೆ ಹೋಗುವಾಗಲೇ ಹಾರಿಹೋಯ್ತು ಪ್ರಾಣ
ಒಂದೇ ಮನೆಯ ಇಬ್ಬರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.