ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಮೇಧಾರ ಓಣಿಯಲ್ಲಿ ಮಟನ್ ಮಾರುಕಟ್ಟೆಯಲ್ಲಿರುವ ಗೋಡೌನ್ ಒಳಗೆ ಕೂಡಿ ಹಾಕಲಾಗಿದ್ದ ನೂರಕ್ಕೂ ಹೆಚ್ಚು ಟಗರು ಹಾಗೂ ಕುರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಶುಕ್ರವಾರ ಸಂಜೆ ಮಳೆಯಾಗಿದ್ದರಿಂದ ಎಲ್ಲಾ ಕುರಿಗಳನ್ನು ಮಾರುಕಟ್ಟೆಯಲ್ಲಿನ ಗೋಡೌನ್ ಒಳಗೆ ಹಾಕಲಾಗಿದೆ. ಆದ್ರೆ ಗೋಡೌನ್ ಒಳಗೆ ನೀರು ನುಗ್ಗಿದ್ದರಿಂದ ನೂರಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ.
ಇದನ್ನೂ ಓದಿ: ಚಾಮರಾಜನಗರ: ಆಕಸ್ಮಿಕ ಬೆಂಕಿ ಅವಘಡಕ್ಕೆ 40 ಕುರಿಗಳು ಭಸ್ಮ, ರೈತ ಕಂಗಾಲು!
ವಿಷಯ ತಿಳಿಯುತ್ತಿದ್ದಂತೆ ಸಾರ್ವಜನಿಕರು ಹಾಗೂ ಕುರಿಗಳ ಮಾಲೀಕರು ಸ್ಥಳಕ್ಕೆ ದೌಡಾಯಿಸಿದ್ದು, ಮಾಲೀಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.