ETV Bharat / state

ಕಗ್ಗಂಟಾದ ಹು-ಧಾ ಮೇಯರ್‌ಗಿರಿ.. ಬಿಜೆಪಿ ಪಾಳಯದಲ್ಲಿ ಪಟ್ಟಕ್ಕಾಗಿ ಘಟಾನುಘಟಿಗಳ ಪೈಪೋಟಿ.. - ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ ಚುನಾವಣೆ

ಮೀಸಲಾತಿ ನಿಗದಿಗೊಳ್ಳುತ್ತಿದಂತೆಯೇ ಬಿಜೆಪಿಯ ಆಕಾಂಕ್ಷಿಗಳು ಮೇಯರ್, ಉಪಮೇಯರ್ ಸ್ಥಾನಕ್ಕಾಗಿ ತೆರೆಮರೆಯ ರಾಜಕೀಯ ಚುರುಕುಗೊಳಿಸಿದ್ದಾರೆ. ಫೆಬ್ರವರಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಚುನಾವಣೆ ನಡೆಯಲಿದೆ..

More competation in BJP leaders for hubli-dharwad mayor position
ಹುಬ್ಬಳ್ಳಿ -ಧಾರವಾಡ ಮೇಯರ್​ ಸ್ಥಾನಕ್ಕೆ ಬಿಜೆಪಿಯಿಲ್ಲಿ ಪೈಪೋಟಿ
author img

By

Published : Jan 28, 2022, 4:08 PM IST

ಹುಬ್ಬಳ್ಳಿ : ಹು-ಧಾ ಮಹಾನಗರ ಪಾಲಿಕ ಚುನಾವಣೆ ನಡೆದು ನಾಲ್ಕು ತಿಂಗಳುಗಳೇ ಕಳೆದಿದೆ. ಆದರೆ, ಈವರೆಗೂ ಮೇಯರ್​​​​,ಉಪಮೇಯರ್​​ ಆಯ್ಕೆ ಆಗಿಲ್ಲ. ಇದೀಗ ಸರ್ಕಾರ ಮೀಸಲಾತಿ ಘೋಷಣೆ ಮಾಡಿದ್ದೇ ತಡ ಆಕಾಂಕ್ಷಿಗಳ ದಂಡೇ ಹುಟ್ಟಿಕೊಂಡಿದೆ. ಇದರಿಂದ ಬಿಜೆಪಿ ನಾಯಕರಿಗೆ ಮೊದಲ ಪ್ರಜೆ ಆಯ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಹುಬ್ಬಳ್ಳಿ -ಧಾರವಾಡ ಮೇಯರ್​ ಸ್ಥಾನಕ್ಕೆ ಬಿಜೆಪಿಯಿಲ್ಲಿ ಹೆಚ್ಚಿದ ಪೈಪೋಟಿ..

ಮೀಸಲಾತಿ ಗೊಂದಲದಿಂದ ಅವಳಿ ನಗರದ ಚುನಾವಣೆ ನಡೆದು ಪಾಲಿಕೆಗೆ ಸದಸ್ಯರು ಆಯ್ಕೆ ಆದ್ರೂ ಮೇಯರ್-ಉಪಮೇಯರ್ ಆಯ್ಕೆ ಆಗಿರಲಿಲ್ಲ. ಈಗ ರಾಜ್ಯ ಸರ್ಕಾರ ಮೀಸಲಾತಿ ಗೊಂದಲ ನಿವಾರಿಸಿ ಮೇಯರ್-ಉಪಮೇಯರ್ ಆಯ್ಕೆ ಮಾಡಲು ಸೂಚಿಸಿದೆ.

ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆಯನ್ನು 21ನೇ ಅವಧಿಗೆ ಸಂಬಂಧಿಸಿದಂತೆ ಮೀಸಲಾತಿ ಅನ್ವಯ ನಡೆಸುವಂತೆ ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ.

More competation in BJP leaders for hubli-dharwad mayor position
ಮೇಯರ್​​ ಸ್ಥಾನದ ಆಕಾಂಕ್ಷಿಗಳು

ಮೀಸಲಾತಿ ನಿಗದಿಗೊಳ್ಳುತ್ತಿದಂತೆಯೇ ಬಿಜೆಪಿಯ ಆಕಾಂಕ್ಷಿಗಳು ಮೇಯರ್, ಉಪಮೇಯರ್ ಸ್ಥಾನಕ್ಕಾಗಿ ತೆರೆಮರೆಯ ರಾಜಕೀಯ ಚುರುಕುಗೊಳಿಸಿದ್ದಾರೆ. ಫೆಬ್ರವರಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಚುನಾವಣೆ ನಡೆಯಲಿದೆ.

ಸತತ ನಾಲ್ಕನೇ ಬಾರಿ ಪಾಲಿಕೆ ಸದಸ್ಯರಾಗಿರೋ ಮಾಜಿ‌ ಮೇಯರ್ ವೀರಣ್ಣ ಸವಡಿ ಮೇಯರ್ ಸ್ಥಾನದ ಆಕಾಂಕ್ಷಿಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ವಿಜಯಾನಂದ ಶೆಟ್ಟಿ, ಶಿವು ಹಿರೇಮಠ, ಚಂದ್ರಶೇಖರ ಮನಗುಂಡಿ ಸೇರಿದಂತೆ ಜೆಡಿಎಸ್‌ನಿಂದ ಬಿಜೆಪಿಗೆ ವಲಸೆ ಬಂದಿರುವ ರಾಜಣ್ಣ ಕೊರವಿ ಮೇಯರ್ ಸ್ಥಾನದ ರೇಸ್‌ನಲ್ಲಿದ್ದಾರೆ. ಉಪಮೇಯರ್ ಸ್ಥಾನಕ್ಕೆ ಉಮಾ‌ ಮುಕುಂದ, ರೂಪಾ ಶೆಟ್ಟಿ, ಮೀನಾಕ್ಷಿ ಒಂಟಮೂರಿ ಹೆಸರು ಕೇಳಿ ಬರುತ್ತಿದೆ.

ಇದನ್ನೂ ಓದಿ: ಪುಟ್ಟ ಮಗುವಿದ್ರೂ ಮಾಜಿ ಸಿಎಂ ಬಿಎಸ್​ವೈ ಮೊಮ್ಮಗಳು ಆತ್ಮಹತ್ಯೆ ಮಾಡಿಕೊಂಡಿದ್ಯಾಕೆ?

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಪಕ್ಷಗಳ ಬಲಾಬಲ‌ ನೋಡುವುದಾದ್ರೆ ಒಟ್ಟು 82 ವಾರ್ಡ್‌ಗಳಿವೆ. ಇದರಲ್ಲಿ ಬಿಜೆಪಿ 39 ಸ್ಥಾನ ಗಳಿಸುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್- 33, ಐಐಎಂಐಎಂ- 3, ಜೆಡಿಎಸ್- 1, ಪಕ್ಷೇತರರು -6 ವಾರ್ಡ್‌ಗಳಲ್ಲಿ ಜಯ ಗಳಿಸಿದ್ದಾರೆ.

ಇದರಿಂದಾಗಿ ಬಿಜೆಪಿ ಮಹಾನಗರ ಪಾಲಿಕೆಯ ಗದ್ದುಗೆ ಏರುವುದು ಪಕ್ಕಾ ಆಗಿದೆ. ಈಗ ಪ್ರಾದೇಶಿಕ ಆಯುಕ್ತರು ಚುನಾವಣೆ ದಿನಾಂಕ ಪ್ರಕಟಿಸಿವುದು ಮಾತ್ರ ಬಾಕಿ ಇದೆ. ಚುನಾವಣೆ ಘೋಷಣೆ ‌ಮುನ್ನವೇ ಮೇಯರ್ ಸ್ಥಾನದ ಆಕಾಂಕ್ಷೆಗಳು ಒಳಗಿಂದೊಳಗೆ ಪೈಪೋಟಿ ನಡೆಸಿದ್ದಾರೆ.

ಇದರ ನಡುವೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಶಾಸಕ ಅರವಿಂದ ಬೆಲ್ಲದ್ ಬೆಂಬಲಿಗರಿಂದ ಈಗಾಗಲೇ ಲಾಬಿ ಕೂಡ ಆರಂಭವಾಗಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.