ಧಾರವಾಡ : ಕಂಡಲ್ಲಿ ಕೈ,ಬಾಯಿ ತುಂಬಿಕೊಂಡು ಮರದ ಮೇಲೆ ನೆಗೆದಾಡುತ್ತಿದ್ದ ಮಂಗಗಳಿಗೂ ಆಹಾರದ ಕೊರತೆ ಎದುರಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಜಿಲ್ಲಾಡಳಿತ ಕಚೇರಿಯ ಕಿಟಕಿಗಳಲ್ಲಿ ಕುಳಿತು ಆಹಾರಕ್ಕಾಗಿ ಹಪಹಪಿಸುತ್ತಿದ್ದವು. ಕೂಡಲೇ ಮಂಗಗಳಿಗೆ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಯೊಬ್ಬರು ಹಣ್ಣು, ಬಿಸ್ಕೆಟ್ ನೀಡಿದರು.
ಲಾಕ್ಡೌನ್ ಪರಿಣಾಮ ಮೂಕ ಪ್ರಾಣಿಗಳು ಪರಿತಪಿಸುತ್ತಿವೆ. ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದ ಕಿಟಕಿಯಲ್ಲಿ ವಾಮನ ಸೈನ್ಯ ಲಗ್ಗೆ ಇಟ್ಟಿತ್ತು. ಇತ್ತ ಜಿಲ್ಲೆಯಲ್ಲಿ ಕನಿಷ್ಟ ಬೆಂಬಲ ಯೋಜನೆಯಡಿ ಕಡಲೆ ಖರೀದಿ ಕೇಂದ್ರಗಳ ಕಾರ್ಯಾರಂಭ ಕುರಿತು ಜಿಲ್ಲಾಧಿಕಾರಿ ದೀಪಾ ಚೋಳನ್ ಸಭೆ ನಡೆಸುತ್ತಿದ್ದ ವೇಳೆ ಮಂಗಗಳು ಪ್ರತ್ಯಕ್ಷವಾಗಿವೆ.
ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಿ ಸಿ ಸತೀಶ್, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಅವರು ಬಿಸ್ಕೆಟ್, ಹಣ್ಣು ನೀಡಿದರು.