ETV Bharat / state

ನರೇಗಾ ಯೋಜನೆಯಡಿ ನೆರವು: 2 ಎಕರೆಯಲ್ಲಿ 40 ಟನ್ ಬಾಳೆ, ರೈತನ ಕೈಗೆ ಲಕ್ಷಾಂತರ ರೂ. ಆದಾಯ - banana crop,

ಕೊರೊನಾದ ಈ ಸಂಕಷ್ಟದ ದಿನಗಳಲ್ಲಿಯೂ ತೋಟಗಾರಿಕೆ ಬೆಳೆಗಳನ್ನು ಬೆಳೆದು ರೈತರು ಯಶಸ್ಸು ಸಾಧಿಸಿರುವುದು ಮಾದರಿಯಾಗಿದೆ. ಬಹುವಾರ್ಷಿಕ ಹಣ್ಣು, ಹೂವಿನ ತೋಟಗಳನ್ನು ಹೊಸದಾಗಿ ನಿರ್ಮಿಸಿಕೊಳ್ಳಲು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಾಕಷ್ಟು ಅವಕಾಶಗಳಿವೆ. ಕಳೆದ ಸಾಲಿನಲ್ಲಿ ನಿಗದಿಗಿಂತ ಶೇ.30 ರಷ್ಟು ಅಧಿಕ ಪ್ರಗತಿ ಸಾಧಿಸಲಾಗಿದೆ. ಈ ಬಾರಿ ಶೇ.200 ರಷ್ಟು ಅಧಿಕ ಪ್ರಗತಿ ಸಾಧಿಸುವ ಗುರಿ ಹೊಂದಲಾಗಿದೆ.

banana-crop
ಬಾಳೆ ಬೆಳೆ
author img

By

Published : Jun 19, 2021, 10:06 PM IST

ಧಾರವಾಡ: ತಾಲೂಕಿನ ಕವಲಗೇರಿ ಗ್ರಾಮದ ರೈತರೊಬ್ಬರು ತಮ್ಮ ಎರಡು ಎಕರೆ ಭೂಮಿಯಲ್ಲಿ, ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನೆರವು ಪಡೆದು ಬೆಳೆದ ಬಾಳೆಯು ಸುಮಾರು 40 ಟನ್ ಇಳುವರಿ ನೀಡಿ 3 ಲಕ್ಷ ರೂ.ಗಳಿಗೂ ಅಧಿಕ ಆದಾಯ ನೀಡಿದೆ. ಇದರಿಂದ ರೈತನ ಮೊಗದಲ್ಲಿ ಮಂದಹಾಸ ಮೂಡಿದೆ.

banana-crop
ಬಾಳೆ ಬೆಳೆ

ಓದಿ: ಇನ್ಮುಂದೆ ಗಂಜಿ ಕೇಂದ್ರಗಳಲ್ಲಿ ಸಿಗಲಿದೆ ಫುಲ್ ಮೀಲ್ಸ್ : ಸಚಿವ ಆರ್.ಅಶೋಕ್

ಕವಲಗೇರಿ ಗ್ರಾಮದ ತಿಪ್ಪಣ್ಣ ಕಲ್ಲಪ್ಪ ತೀರ್ಲಾಪುರ ಅವರು, ತಮ್ಮ ಎರಡು ಎಕರೆ ಭೂಮಿಯನ್ನು ಅಂಗಾಂಶ ಬಾಳೆಯ ಹೊಸ ತೋಟವಾಗಿ ಅಭಿವೃದ್ಧಿ ಪಡಿಸಲು ತೋಟಗಾರಿಕೆ ಇಲಾಖೆ ಮೂಲಕ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 2020-21 ನೇ ಸಾಲಿನಲ್ಲಿ ಕೂಲಿವೆಚ್ಚವಾಗಿ 78 ಸಾವಿರ ರೂ. ಹಾಗೂ ಸಾಮಗ್ರಿ ವೆಚ್ಚವಾಗಿ 27 ಸಾವಿರ ರೂ.ಗಳ ಅನುದಾನದ ನೆರವು ಪಡೆದು 283 ಮಾನವ ದಿನಗಳನ್ನು ಸೃಷ್ಟಿಸಿದ್ದರು.

ಪ್ರಸಕ್ತ ಬಾಳೆಯ ಸುಮಾರು 40 ಟನ್ ಫಸಲು ನೀಡಿದ್ದು, ಅದರ ಮಾರಾಟದಿಂದ ರೈತ ತಿಪ್ಪಣ್ಣ ಸುಮಾರು 3 ಲಕ್ಷ 20 ಸಾವಿರ ರೂ. ಆದಾಯ ಗಳಿಸಿದ್ದಾರೆ ಎಂದು ಹೋಬಳಿ ಮಟ್ಟದ ಸಹಾಯಕ ತೋಟಗಾರಿಕೆ ಅಧಿಕಾರಿ ಮಹೇಶ ಪಟ್ಟಣಶೆಟ್ಟಿ ತಿಳಿಸಿದ್ದಾರೆ.

ಕೊರೊನಾದ ಈ ಸಂಕಷ್ಟದ ದಿನಗಳಲ್ಲಿಯೂ ತೋಟಗಾರಿಕೆ ಬೆಳೆಗಳನ್ನು ಬೆಳೆದು ರೈತರು ಯಶಸ್ಸು ಸಾಧಿಸಿರುವುದು ಮಾದರಿಯಾಗಿದೆ. ಬಹುವಾರ್ಷಿಕ ಹಣ್ಣು, ಹೂವಿನ ತೋಟಗಳನ್ನು ಹೊಸದಾಗಿ ನಿರ್ಮಿಸಿಕೊಳ್ಳಲು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಾಕಷ್ಟು ಅವಕಾಶಗಳಿವೆ. ಕಳೆದ ಸಾಲಿನಲ್ಲಿ ನಿಗದಿಗಿಂತ ಶೇ.30 ರಷ್ಟು ಅಧಿಕ ಪ್ರಗತಿ ಸಾಧಿಸಲಾಗಿದೆ. ಈ ಬಾರಿ ಶೇ.200 ರಷ್ಟು ಅಧಿಕ ಪ್ರಗತಿ ಸಾಧಿಸುವ ಗುರಿ ಹೊಂದಲಾಗಿದೆ. ರೈತರು ಹತ್ತಿರದ ತೋಟಗಾರಿಕೆ ಅಧಿಕಾರಿ, ಸಿಬ್ಬಂದಿಯನ್ನು ಸಂಪರ್ಕಿಸಬಹುದು ಎಂದು ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಶಿವಯೋಗಿ ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.