ETV Bharat / state

ಸತ್ತವರನ್ನು ಹೂಳಲು ಜಾಗವಿಲ್ಲ, ಹುಟ್ಟಿದ್ದೆಲ್ಲಿ ಅಂತ ದಾಖಲೆ ಕೇಳಿದ್ರೆ ಎಲ್ಲಿಂದ ತರೋದು?: ಸಿಎಂ ಇಬ್ರಾಹಿಂ - CM Ibrahim barrage against Central Govt

ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು, ಆದ್ರೆ ಹಿಂಸಾಚಾರ ನಡೆಸುವುದು ಸರಿಯಲ್ಲ ಎಂದು ವಿಧಾನ ಪರಿಷತ್​ ಸದಸ್ಯ ಸಿಎಂ ಇಬ್ರಾಹಿಂ ಹೇಳಿದ್ದಾರೆ.

MLC CM Ibrahim   barrage  against Central  Govt
ಸಿಎಂ ಇಬ್ರಾಹಿಂ, ವಿಧಾನ ಪರಿಷತ್​ ಸದಸ್ಯ
author img

By

Published : Dec 22, 2019, 9:00 PM IST

ಹುಬ್ಬಳ್ಳಿ: ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು, ಆದ್ರೆ ಹಿಂಸಾಚಾರ ನಡೆಸುವುದು ಸರಿಯಲ್ಲ ಎಂದು ವಿಧಾನ ಪರಿಷತ್​ ಸದಸ್ಯ ಸಿಎಂ ಇಬ್ರಾಹಿಂ ಹೇಳಿದ್ದಾರೆ.

ಸಿಎಂ ಇಬ್ರಾಹಿಂ, ವಿಧಾನ ಪರಿಷತ್​ ಸದಸ್ಯ

ನಗರದಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ತಾನು ಮಾಡಿರುವ ತಪ್ಪನ್ನು ತಿದ್ದಿಕೊಳ್ಳುವವರೆಗೂ ಈ ಪ್ರತಿಭಟನೆ ನಡೆಯಲಿದೆ. ಮುಸ್ಲಿಂ ಬಾಂಧವರಿಗೆ ಯಾವುದೇ ಹೆದರಿಕೆ ಇಲ್ಲ. ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಹೋಗಿದೆ. ಅನುಭವ ಇಲ್ಲದೆ ಇರುವವರು ಅಧಿಕಾರಕ್ಕೆ ಬಂದರೆ ದೇಶದ ಸ್ಥಿತಿ ದುಸ್ಥಿತಿಗೆ ಬರಲಿದೆ ಎಂದು ವಾಗ್ದಾಳಿ ನಡೆಸಿದರು.

ದೇಶದಲ್ಲಿ ಇಂದಿನ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಜನ ಏಕ ಕಂಠದಿಂದ ಹೋರಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಈಗಾಗಲೇ ಮಂಗಳೂರಲ್ಲಿ ಪೊಲೀಸರ ಗುಂಡಿಗೆ ಇಬ್ಬರು ಬಲಿಯಾಗಿದ್ದಾರೆ. ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೇನೆ. ಎನ್​ಆರ್​ಸಿ ಬಗ್ಗೆ ಜನತೆಗೆ ಸ್ಪಷ್ಟವಾಗಿ ತಿಳಿಸುವುದು ಸರ್ಕಾರದ ಕರ್ತವ್ಯ, ಪ್ರತಿಯೊಬ್ಬರಿಗೂ ಎನ್​ಆರ್​ಸಿ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ಅದರ ಬಗ್ಗೆ ಸ್ಪಷ್ಟತೆ ಇಲ್ಲದಿರುವುದರಿಂದ ದೇಶದೆಲ್ಲೆಡೆ ಭಯ ಹುಟ್ಟಿದೆ. ಈ ಹಿಂದೆ ಆರ್​ಎಸ್​ಎಸ್​ನವರು ಅಖಂಡ ಭಾರತದ ಬಗ್ಗೆ ಮಾತನಾಡುತ್ತಿದ್ದರು. ಆದ್ರೆ ಇತ್ತೀಚೆಗೆ ಅದನ್ನು ಕೈಬಿಟ್ಟಿದ್ದಾರೆ ಎಂದರು.

ರೊಹಿಂಗ್ಯಾಗಳ ಬಗ್ಗೆ ನಾನು ಏನು ಮಾತನಾಡುವುದಿಲ್ಲ, ಬೇರೆ ದೇಶದ ಚಿಂತೆ ನಮಗೆ ಬೇಡ, ನಮ್ಮ ದೇಶದಲ್ಲಿ ಏನಾಗುತ್ತಿದೆ ಎಂಬುದು ಮುಖ್ಯ. ನಮಗೆ ಇಲ್ಲೇ ಖಬರಸ್ಥಾನ ಇದೆ. ಸತ್ತವರಿಗೆ ಇಲ್ಲಿ ಜಾಗ ಸಿಗುತ್ತಿಲ್ಲ, ಅಂತಹದರಲ್ಲಿ ಹುಟ್ಟಿದ್ದು ಎಲ್ಲಿ ಅಂತ ದಾಖಲೆ ಕೇಳಿದ್ರೆ ಎಲ್ಲಿಂದ ತರೋದು. ಬಸವರಾಜ ಬೊಮ್ಮಾಯಿ ಯುಟಿ ಖಾದರ್ ಮೇಲೆ ಪ್ರಕರಣ ದಾಖಲಿಸಿದ್ದೀರ, ಸಿಟಿ ರವಿ ಮೇಲೆ ಯಾಕೆ ಕೇಸ್ ದಾಖಲಿಸಿಲ್ಲ ಇಂತಹದನ್ನು ದಯವಿಟ್ಟು ಮಾಡಬೇಡಿ ಎಂದು ಮನವಿ ಮಾಡಿದರು.

Intro:HubliBody:ಸ್ಲಗ್:- ನಾನು ರಾಣೆಬೆನ್ನೂರಿನಲ್ಲಿ ಜನಿಸಿದ್ದೇನೆ ಆದ್ರೆ ಈವರೆಗೂ ನನ್ನದೇ ಜನನ ಪ್ರಮಾಣ ಸಿಕ್ಕಿಲ್ಲ! ಸಿಎಮ್ ಇಬ್ರಾಹಿಂ

ಹುಬ್ಬಳ್ಳಿ:-ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕುಆದ್ರೆ ಹಿಂಸಾಚಾರ ನಡೆಸುವುದು ಸರಿಯಲ್ಲ
ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಎಲ್ಲರೂ ಪ್ರತಿಭಟನೆ ಮಾಡುತ್ತಿದ್ದಾರೆ.ದೇಶದಲ್ಲಿ ಇಂದಿನ ಸ್ಥಿತಿ ಅತ್ಯಂತ ಗಂಭೀರವಾಗಿದೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಜನ ಏಕಕಂಠದಿಂದ ಹೋರಾಡುತ್ತಿದ್ದಾರೆ ಕೇಂದ್ರ ಸರಕಾರ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಿತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಕೇಂದ್ರ ಸರ್ಕಾರ ತಾನು ಮಾಡಿರುವ ತಪ್ಪನ್ನು ತಿದ್ದಿಕೊಳ್ಳುವವರೆಗೂ ಈ ಪ್ರತಿಭಟನೆ ನಡೆಯಲಿದೆ ''ಮುಸ್ಲಿಂ ಬಾಂದವರಿಗೆt ಯಾವದೇ ಹೆದರಿಕೆ ಇಲ್ಲ,ದೇಶದ ಆರ್ಥಿಕ ಪರಿಸ್ಥಿತಿ ಅದೋಗತಿಗೆ ಹೋಗಿದೆ.ಅನುಭವ ಇಲ್ಲದೇ ಇರುವವರು ಅಧಿಕಾರಕ್ಕೆ ಬಂದರೆ ದೇಶದ ಸ್ಥಿತಿ ದುಸ್ಥಿತಿಗೆ ಬರಲಿದೆ. ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಧಾನಿ ಮೋದಿಯವರು ಎಲ್ಲರನ್ನೂ ವಿಶ್ವಾಸಕ್ಕೆt ತೆಗೆದುಕೊಂಡು ಸರ್ಕಾರ ನಡೆಸುತ್ತಾರೆ ಎಂದುಕೊಂಡಿದ್ದೇವು,ಆದ್ರೆ ಈವರೆಗೂ ಮೋದಿಯವರು ಅಂತಹ ಕೆಲಸ ಮಾಡಿಲ್ಲ.
ನಾನು ರಾಣೆಬೆನ್ನೂರಿನಲ್ಲಿ ಜನಿಸಿದ್ದೇನೆ ಆದ್ರೆ ಈವರೆಗೂ ನನ್ನದೇ ಜನನ ಪ್ರಮಾಣ ಪತ್ರ ನನಗೆ ಸಿಕ್ಕಿಲ್ಲ 'ಅಂತಹದರಲ್ಲಿ ಎಲ್ಲೋ ಜನಿಸಿದವರಿಗೆ ಜನ್ಮಪ್ರಮಾಣ ಕೇಳಿದ್ರೆ ಎಲ್ಲಿಂದ ತರಬೇಕು, ಲೇವಡಿ ಮಾಡಿದ್ರು.ಇನ್ನೂ ಪಾಕಿಸ್ತಾನದಿಂದ ಲಕ್ಷಾಂತರ ಜನ ಈ ಹಿಂದೆಯೇ ದೇಶಕ್ಕೆ ಬಂದಿದ್ದಾರೆ''ಆದ್ರೆ ಇದೀಗ ಏಕಾಏಕಿ ಈ ರೀತಿಯ ಕಾಯ್ದೆ ಜಾರಿಗೆ ತಂದಿರುವುದು ಸರಿಯಲ್ಲ,ಬಿಜೆಪಿ ಈ ದೇಶದಲ್ಲಿ ಸಂವಿಧಾನ ಕಿತ್ತುಹಾಕಿ ಶೂದ್ರರನ್ನು ತರಲು ಹೊರಟಿದ್ದಾರೆ ಕೇವಲ ಅಸ್ಸಾಂ ರಾಜ್ಯದಲ್ಲಿ ಎನ್ ಆರ್ ಸಿ ಜಾರಿಗಾಗಿ 130 ಕೋಟಿ ಖರ್ಚಾಗಿದೆ,ಈಗಾಗಲೇ ಮಂಗಳೂರಲ್ಲಿ ಪೊಲೀಸರ ಗುಂಡಿಗೆ ಇಬ್ಬರು ಬಲಿಯಾಗಿದ್ದಾರೆ.ಮೃತರt ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೇನೆ.ಎನ್ಸ್ಪಷ್ಟತೆಯ ಆರ್ ಸಿ ಬಗ್ಗೆ ಜನತೆಗೆ ಸ್ಪಷ್ಟವಾಗಿ ತಿಳಿಸುವುದು ಸರ್ಕಾರದ ಕರ್ತವ್ಯ ಪ್ರತಿಯೊಬ್ಬರಿಗೂ ಎನ್ ಆರ್ ಸಿ ಬಗ್ಗೆ ತಿಳಿವಳಿಕೆ ಮೂಡಿಸಬೇಕು
ಅದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲದಿರುವುದರಿಂದ ದೇಶದೆಲ್ಲೆಡೆ ಹೆದರಿಕೆ ಹುಟ್ಟಿದೆ ಎಂದು ಆತಂಕ ವ್ಯಕ್ತಪಡಿಸಿದರು.ಯಡಿಯೂರಪ್ಪ ಹಾಗೂ ಗೃಹಮಂತ್ರಿಗಳೇ ಕೇಂದ್ರದ ನಾಯಕರ ಒತ್ತಡಕ್ಕೆ
ರಾಜ್ಯದಲ್ಲಿ ಶಾಂತಿಯತೆ ಕಾಪಾಡಲು ಪ್ರಯತ್ನಿಸಿ, ದೇಶ ಅಖಂಡ ಭಾರತ‌ ಆಗಬೇಕು‌,ಭಾರತ ಇಭ್ಬಾಗ ವಾಗುತ್ತಿರುವುದು ದುರ್ಧೈವದ ಸಂಗತಿ,ನಾನು‌ ಅಖಂಡ ಭಾರತದ ಕನಸು ಕಾಣುತ್ತಿದ್ದೇನೆ.ಅಖಂಡ ಭಾರತ ಆಗಲಿ ಎಂದು ಆಸೆ ಪಡುತ್ತಿರುವ ಏಕೈಕ ವ್ಯಕ್ತಿ ನಾನು
ಈ ಹಿಂದೆ ಆರ್ ಎಸ್ ಎಸ್ ನವರು ಅಖಂಡ ಭಾರತದ ಬಗ್ಗೆ ಮಾತನಾಡುತ್ತಿದ್ದರು ಆದ್ರೆ ಇತ್ತೀಚೆಗೆ ಅದನ್ನ ಕೈಬಿಟ್ಟಿದ್ದಾರೆ ಕೇವಲ ಅವರಿಗೆ ಚುನಾವಣೆಯಲ್ಲಿ ಮಾತ್ರ ನೆನಪು ಆಗುತ್ತೆ ಎಂದರು ಇನ್ನೂ ಸಿಎಎ ಬಗ್ಗೆ ಅಮೀತ್ ಶಾ ಸ್ಪಷ್ಟಪಡಿಸುತ್ತಿಲ್ಲ,ಅಮೀತ್ ಶಾ ಅವರು ಅರ್ದಂಬರ್ದ ಮಾಹಿತಿ ನೀಡುತ್ತಿದ್ದಾರೆ.ಸಿಎಎ ಬಗ್ಗೆ ಕೂಲಂಕುಶವಾಗಿ ಚರ್ಚೆ ಮಾಡಿ
ರೊಹಿಂಗ್ಯಾಗಳ ಬಗ್ಗೆ ನಾನು ಏನು ಮಾತನಾಡುವುದಿಲ್ಲ'' ಬೇರೆ ದೇಶದ ಚಿಂತೆ ನಮಗೆ ಬೇಡ,ನಮ್ಮ ದೇಶದಲ್ಲಿ ಏನಾಗುತ್ತಿದೆ ಎಂಬುದು ಮುಖ್ಯ
ನಮಗೆ ಇಲ್ಲೇ ಖಬರಸ್ಥಾನ ಇದೆ, ಸತ್ತವರಿಗೇ ಇಲ್ಲಿ ಜಾಗ ಸಿಗುತ್ತಿಲ್ಲ,ಅಂತಹದರಲ್ಲಿ ಹುಟ್ಟಿದ್ದು ಎಲ್ಲಿ ಅಂತಾ ದಾಖಲೆ ಕೇಳಿದ್ರೆ ಎಲ್ಲಿಂದ ತರೋದು ಎಂದು ಕಿಡಿ ಕಾರಿದರು.ಬಸವರಾಜ ಬೊಮ್ಮಾಯಿ ಯುಟಿ ಖಾದರ್ ಮೇಲೆ ಪ್ರಕರಣ ದಾಖಲಿಸಿದ್ದೀಯಾ'ಸಿಟಿ ರವಿ ಮೇಲೆ ಯಾಕೆ ಕೇಸ್ ದಾಖಲಿಸಿಲ್ಲ,ಇಂತಹದನ್ನ ದಯವಿಟ್ಟು ಮಾಡಬೇಡಿ ಎಂದು ಮನವಿ ಮಾಡಿದರು.!

ಬೈಟ್:- ಸಿಎಮ್ ಇಬ್ರಾಹಿಮ್! (ವಿಧಾನ ಪರಿಷತ್ ಸದಸ್ಯ)

Yallappa kundagol

Hubli

_______________________________

Conclusion:Yallappa kundagol
ETV Bharat Logo

Copyright © 2025 Ushodaya Enterprises Pvt. Ltd., All Rights Reserved.