ಹುಬ್ಬಳ್ಳಿ : ಬಿಜೆಪಿ ನಾಯಕರು ಜಾತಿಯ ವಿಷ ಬೀಜ ಬಿತ್ತುತ್ತಾರೆ. ಸಣ್ಣ ಸಣ್ಣ ಮಕ್ಕಳಲ್ಲಿಯೂ ಸಹ ನಾ ಹಿಂದೂ, ನಾ ಮುಸ್ಲಿಂ ಎಂಬ ಭಾವನೆ ಮೂಡುವ ಹಾಗೆ ಮಾಡಿದ್ದಾರೆಂದು ಶಾಸಕ ಪ್ರಸಾದ್ ಅಬ್ಬಯ್ಯ ಕಿಡಿಕಾರಿದರು.
ನಗರದಲ್ಲಿಂದು ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಹಿಜಾಬ್ ಹಾಕುವ ವಿಚಾರಕ್ಕೆ ಮಾತನಾಡಿದ ಅವರು, ನಮ್ಮ ಸರ್ಕಾರ ಇದ್ದಾಗ ಯಾವುದೇ ಜಾತಿ-ಬೇಧ ಭಾವವಿಲ್ಲದೇ ಹಿಂದೂ- ಮುಸ್ಲಿಂ-ಕ್ರೈಸ್ತ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಎಲ್ಲರೂ ಒಗ್ಗಟ್ಟಿನಿಂದ ಇದ್ದರು. ಆದರೆ, ಬಿಜೆಪಿ ಸರ್ಕಾರ ಬಂದ ಮೇಲೆ ಮಕ್ಕಳಲ್ಲೂ ಸಹ ಜಾತಿ ಹುಟ್ಟಿರುವುದು ಆತಂಕ ಸೃಷ್ಟಿಸಿದೆ.
ಇಂತಹ ವಿಚಾರ ಬಿಟ್ಟು, ದೇಶ ಹಾಗೂ ರಾಜ್ಯದ ಪ್ರಗತಿ ಬಗ್ಗೆ ವಿಚಾರ ಮಾಡಿ. ಇನ್ನು ಬಿಜೆಪಿ ಜಾತಿವಾದಿ, ಕೋಮುವಾದಿ ಪಕ್ಷವನ್ನು ಬೇರು ಸಮೇತ ಕಿತ್ತು ಒಗೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಓದಿ: ಶಾಲಾ ಪ್ರವೇಶ ನಿರಾಕರಿಸಿದ ಮುಖ್ಯ ಶಿಕ್ಷಕನಿಗೆ ಶಿಕ್ಷೆಯಾಗಬೇಕು : ಅಯೂಬ್ ಖಾನ್ ಆಗ್ರಹ