ETV Bharat / state

ಕ್ರಿಮಿನಲ್ ಪರವಾಗಿ ಆರ್ ಅಶೋಕ ಪ್ರತಿಭಟನೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ: ಶಾಸಕ ಪ್ರಸಾದ ಅಬ್ಬಯ್ಯ - hubli ram activist arrest

ಕ್ರಿಮಿನಲ್​ಗಳ ಪರವಾಗಿ ಬಿಜೆಪಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಪ್ರತಿಭಟನೆ ಮಾಡುತ್ತಿರುವುದು ನಾಚಿಕೇಗೆಡಿನ ಸಂಗತಿ ಎಂದು ಕಾಂಗ್ರೆಸ್​ ಶಾಸಕ ವಾಗ್ದಾಳಿ ನಡೆಸಿದ್ದಾರೆ.

ಆರ್​ ಅಶೋಕ್​ ವಿರುದ್ಧ  ಪ್ರಸಾದ ಅಬ್ಬಯ್ಯ ವಾಗ್ದಾಳಿ

author img

By ETV Bharat Karnataka Team

Published : Jan 3, 2024, 12:44 PM IST

ಹುಬ್ಬಳ್ಳಿ: ಕ್ರಿಮಿನಲ್​ಗಳ ಪರವಾಗಿ ವಿರೋಧ ಪಕ್ಷದ ನಾಯಕ ಆರ್.ಅಶೋಕ ಪ್ರತಿಭಟನೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ, ಅದರ ಬಗ್ಗೆ ಗಮನ ಹರಿಸುವುದು ಬಿಟ್ಟು ರಾಜಕೀಯ ಲಾಭಕ್ಕಾಗಿ ರೌಡಿಶೀಟರ್ ಒಬ್ಬನ ಪರವಾಗಿ ರಾಜ್ಯಾದ್ಯಂತ ಹೋರಾಟ ಮಾಡುತ್ತಿರುವುದು ಬಿಜೆಪಿಯ ಹತಾಶೆಯ ಭಾವನೆ ತೋರಿಸುತ್ತದೆ ಎಂದು ಶಾಸಕ ಪ್ರಸಾದ್ ಅಬ್ಬಯ್ಯ ವಾಗ್ದಾಳಿ ನಡೆಸಿದರು.

ನಗರದಲ್ಲಿಂದು ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹುಬ್ಬಳ್ಳಿಯ ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರನನ್ನು ಅನಗತ್ಯವಾಗಿ ಬಂಧಿಸಲಾಗಿದೆ ಎಂದು ಬಿಜೆಪಿ ಬಿಂಬಿಸುತ್ತಿದೆ. ನೆಲದ ಕಾನೂನನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಕಾನೂನು ಯಾವುದೇ ಒಂದು ಸಮಾಜ, ಜಾತಿಗೆ ಸೀಮಿತವಾಗಿಲ್ಲ, ಇದನ್ನು ಪಾಲಿಸುವುದು ಎಲ್ಲರ ಕರ್ತವ್ಯ. ಅದರಂತೆ ಗೃಹ ಇಲಾಖೆ ಹಿಂದಿನ ಎನ್​​ಪಿಸಿ ಕೇಸ್ ಅಂತ್ಯಗೊಳಿಸಲು ಆದೇಶ ನೀಡಿದೆ. ಅದರಂತೆ ಪೊಲೀಸರು ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದರು.

ಹುಬ್ಬಳ್ಳಿಯ ಟೌನ್ ಪೊಲೀಸ್​ ಠಾಣೆಯಲ್ಲಿ ಸದ್ಯ 61 ಎನ್​​ಪಿಸಿ ಕೇಸ್​ಗಳಿವೆ. ಅದರಲ್ಲಿ ರಾಮ ಜನ್ಮಭೂಮಿ ಹೋರಾಟದ ದೊಂಬಿ ಪ್ರಕರಣವು ಒಂದಾಗಿದೆ. ಇದರಲ್ಲಿ 13 ಜನರ ವಿರುದ್ಧ ದೂರು ದಾಖಲಾಗಿತ್ತು. ಅದರಂತೆ ಪೊಲೀಸರು ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲನೆ ಮಾಡುತ್ತಿದ್ದಾರೆ. ಈ ವೇಳೆ ಬಿಜೆಪಿ ರೌಡಿಶೀಟರ್ ಒಬ್ಬನ ಪರವಾಗಿ ನಿಂತು ಆತ ರಾಮ ಭಕ್ತ ಎಂದು ಜಾತಿ, ಧರ್ಮದ ಬಣ್ಣ ಬಳಿಯುತ್ತಿರುವುದು ವಿಷಾದನೀಯ ಎಂದು ತಿಳಿಸಿದರು.

ಈಗಾಗಲೇ ಶ್ರೀಕಾಂತ್ ಪೂಜಾರ ಮೇಲೆ ರೌಡಿಶೀಟರ್ ಸೇರಿದಂತೆ 9 ಪ್ರಕರಣಗಳಿವೆ. ಅದರಲ್ಲಿ ಕಳೆದ ವರ್ಷ ಬಿಜೆಪಿ ರೌಡಿಶೀಟರ್ ಕೇಸ್ ಖುಲಾಸೆಗೊಳಿಸಿದೆ. ಬಿಜೆಪಿಯವರಿಗೆ ಕ್ರಿಮಿನಲ್​ಗಳ ಮೇಲೆ ಪ್ರೀತಿ ಇದ್ದರೆ ಈ ಹಿಂದೆ ಕೇಂದ್ರ ಹಾಗೂ ರಾಜ್ಯದಲ್ಲಿ ಅವರದ್ದೇ ಸರ್ಕಾರ ಇತ್ತು, ತಮ್ಮ ಭಕ್ತರ ಮೇಲಿನ ಕೇಸ್​ಗಳನ್ನು ಖುಲಾಸೆಗೊಳಿಸಬೇಕಿತ್ತು. ಆದ್ರೆ ಬಿಜೆಪಿಯವರಿಗೆ ತಮ್ಮ ಕಾರ್ಯಕರ್ತರ ಮೇಲೆ ಇಂತಹ ಕೇಸ್​ಗಳಿರಬೇಕು, ಅವರು ತಮ್ಮ ಹಿಂದೆ ಓಡಾಟ ನಡೆಸಬೇಕು, ಅದರ ಲಾಭ ಪಡೆಯುವುದು ಬಿಜೆಪಿಯ ದುರುದ್ದೇಶ ಎದ್ದು ಕಾಣುತ್ತಿದೆ ಎಂದು ಹರಿಹಾಯ್ದರು.

ಈ ಹಿಂದೆ ಬೆಳಗಾವಿಯಲ್ಲಿ ಚಳಿಗಾಲದ ಅದಿವೇಶನ ನಡೆದ ಸಂದರ್ಭದಲ್ಲಿ ಆರ್.ಅಶೋಕ ಉತ್ತರ ಕರ್ನಾಟಕ ಭಾಗದ ಜನರ ಸಮಸ್ಯೆ ಬಗ್ಗೆ ಚರ್ಚೆ ಮಾಡದೇ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು.‌ ಇದರಲ್ಲಿ ಜನರ ಕಾಳಜಿ ಎಲ್ಲಿತ್ತು. ಇದೀಗ ಅಪರಾಧ ಹಿನ್ನೆಲೆ ಪ್ರಕರಣವನ್ನು ಇಟ್ಟುಕೊಂಡು ಜಾತಿ, ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸಕ್ಕೆ ಮುಂದಾಗುವುದು ಖಂಡನೀಯ. ಇದನ್ನು ಜನರು ಗಮನಿಸುತ್ತಿದ್ದು, ಬರುವ ದಿನಗಳಲ್ಲಿ ತಕ್ಕಪಾಠ ಕಲಿಸಲಿದ್ದಾರೆ ಎಂದು ಹರಿಹಾಯ್ದರು.

ರೌಡಿಶೀಟರ್​ನನ್ನು ಬಿಜೆಪಿಯವರು ಹೀರೋ‌ ಎಂಬಂತೆ ಬಿಂಬಿಸುತ್ತಿದ್ದಾರೆ. ಈ ಹಿಂದೆ ಈದ್ಗಾ ‌ಮೈದಾನದಲ್ಲೂ ಇದೇ ರೀತಿ ಮಾಡಿದ್ದರು. ಈ‌ ಬಾರಿಯೂ‌ ಇದರ ಲಾಭ ಪಡೆಯಲು ಮುಂದಾಗಿದೆ. ಕ್ರಿಮಿನಲ್ ಇದ್ದವನ ಇಟ್ಟುಕೊಂಡು ಜಾತಿ, ಧರ್ಮದ ಹೆಸರಿನಲ್ಲಿ ವಿಷ ಬೀಜ‌ ಬಿತ್ತಿ ಕೋಮುಸೌಹಾರ್ಧತೆಗೆ ಧಕ್ಕೆ ಬರುವ ರೀತಿಯಲ್ಲಿ ಸಮಾಜ ಒಡೆಯುವ ಕೆಲಸವನ್ನು ಬಿಜೆಪಿ ಮಾಡುತ್ತ ಬಂದಿದೆ. ಇದು ಬಿಜೆಪಿಯ ಅಜೆಂಡಾ ಎಂದು ದೂರಿದರು.

ಇದನ್ನೂ ಓದಿ: 30 ವರ್ಷಗಳ ಹಿಂದಿನ ಗಲಭೆ ಕೇಸ್ ವಾಪಸ್​ ಪಡೆಯಲಿ: ಜಗದೀಶ್ ಶೆಟ್ಟರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.