ಧಾರವಾಡ: ಒಂದು ಸಮಾಜ, ಒಂದು ದೇಶ ಹಾಗೂ ಒಂದು ಕುಟುಂಬ ಅಂತ ಇದ್ದ ಮೇಲೆ ಬೇರೆ ಬೇರೆ ವಿಚಾರಗಳು ಇರುವುದು ಸಹಜ. ನಮ್ಮ ದೇಶದಲ್ಲಿ ಬೇರೆ ಬೇರೆ ಧರ್ಮಗಳಿವೆ. ಅದರ ನಡುವೆ ಬೇರೆ ಬೇರೆ ತೊಂದರೆಗಳು ಬಂದಿರುತ್ತವೆ ಎಂದು ಮಂಡ್ಯ ವಿದ್ಯಾರ್ಥಿನಿಯನ್ನು ಅಲ್‌ಖೈದಾ ಮುಖಂಡ ಹೊಗಳಿರುವ ವಿಚಾರವಾಗಿ ಧಾರವಾಡದಲ್ಲಿ ಶಾಸಕ ಅರವಿಂದ ಬೆಲ್ಲದ್ ಪ್ರತಿಕ್ರಿಯಿಸಿದರು.
ಇಂಥ ವಿಚಾರಗಳಲ್ಲಿ ಹೊರ ದೇಶದಿಂದ ಪ್ರಚೋದನೆ ಕೊಟ್ಟಾಗ ಖಂಡನೆ ಮಾಡುವ ಜವಾಬ್ದಾರಿ ನಮ್ಮ ದೇಶದ ಮುಸ್ಲಿಂ ನಾಯಕರ ಮೇಲಿದೆ. ಇವರು ಅದನ್ನು ಖಂಡನೆ ಮಾಡಿದರೆ ಉಳಿದವರು ಮೆಚ್ಚುತ್ತಾರೆ. ಅಲ್ಲದೇ ಈ ಮೂಲಕ ನಮ್ಮ ನಡುವಿನ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂಬುದು ಮುನ್ನೆಲೆಗೆ ಬರುತ್ತದೆ ಎಂದರು.
ಇದೇ ವೇಳೆ, ಸಿದ್ಧರಾಮಯ್ಯನವರು ಆರ್ಎಸ್ಎಸ್ ಬಗ್ಗೆ ಮಾತನಾಡಿದ್ದು ಬಾಲಿಶ. ದೊಡ್ಡ ನಾಯಕರಾಗಿ ಮಾತನಾಡಿದ್ದು ಸರಿಯಲ್ಲ ಎಂದರು. ಚಂದ್ರು ಕೊಲೆ ವಿಚಾರದಲ್ಲಿ ಗೃಹ ಸಚಿವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಗೃಹ ಸಚಿವರಿಗೆ ಆಗಿನ ಸಮಯದಲ್ಲಿ ಬಂದಿರುವ ಮಾಹಿತಿ ಆಧಾರವಾಗಿ ಹೇಳಿಕೆ ಕೊಟ್ಟಿದ್ದಾರೆ. ಇಷ್ಟು ಸಿರಿಯಸ್ ಆಗಿ ವಿಚಾರ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ: ಉಕ್ರೇನ್ನಲ್ಲಿ ಓದುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಎಂ.ಬಿ.ಪಾಟೀಲ ನೆರವು