ETV Bharat / state

ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದನೆ: ಶಾಸಕ ಅಮೃತ ದೇಸಾಯಿ ವಿಡಿಯೋ ವೈರಲ್..! - ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದನೆ

ಅಧಿಕಾರಿಗಳಿಗೆ ಶಾಸಕ ಅಮೃತ ದೇಸಾಯಿ ಅವಾಚ್ಯ ಶಬ್ದಗಳಿಂದ‌ ನಿಂದಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ..

MLA Amrita Desai video is viral.
ಶಾಸಕ ಅಮೃತ ದೇಸಾಯಿ ವಿಡಿಯೋ ವೈರಲ್.
author img

By

Published : Dec 1, 2020, 7:52 PM IST

ಧಾರವಾಡ: ಅಧಿಕಾರಿಗಳಿಗೆ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಅವಾಚ್ಯ ಶಬ್ದಗಳಿಂದ‌ ನಿಂದಿಸಿದ್ದು, ಏಕ ವಚನದಲ್ಲಿ ಅಧಿಕಾರಿಗಳಿಗೆ ಬೈದಿರುವ ವಿಡಿಯೋ ಇದೀಗ ಜಿಲ್ಲೆಯಲ್ಲಿ ಭಾರೀ ಸದ್ದು ಮಾಡುತ್ತಿದೆ.

ಮಳೆಯಿಂದ‌ ಮನೆ ಹಾನಿಯಾದವರಿಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳು‌ ಯಡವಟ್ಟು ಮಾಡಿದ್ದು, ಎ, ಬಿ ಹಾಗೂ ಸಿ ವರ್ಗದಲ್ಲಿ ಪಟ್ಟಿ ಮಾಡುವಾಗ ಗೊಂದಲವುಂಟಾಗಿದೆ. ಆದ್ದರಿಂದ ಶಾಸಕರು ಅಧಿಕಾರಿಗೆ ಏಕವಚನದಲ್ಲಿ ನಿಂದಿಸಿದ್ದಾರೆ. ಹಾಗೂ ಗೋಲ್‌ಮಾಲ್ ಮಾಡಿ ಹಣ ಕೊಟ್ಟವರಿಗೆ ಮಾತ್ರ ಮನೆ ಬಿಡುಗಡೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಶಾಸಕ ಅಮೃತ ದೇಸಾಯಿ ವಿಡಿಯೋ ವೈರಲ್

2020 ರ ಜೂನ್, ಜುಲೈ ಹಾಗೂ ಅಗಸ್ಟ್​ ತಿಂಗಳಲ್ಲಿ ಸುರಿದ ಮಳೆಯಿಂದ‌, ಧಾರವಾಡ ತಾಲೂಕಿನ ಮಂಗಳಗಟ್ಟಿ, ಕುರುಬಗಟ್ಟಿ, ಯಾದವಾಡ, ಲಕಮಾಪೂರ ಗ್ರಾಮಗಳಲ್ಲಿ ಅನೇಕ ಮನೆಗಳು ಬಿದ್ದಿವೆ. ಸರ್ಕಿಟ್ ಹೌಸ್​​​​​ನಲ್ಲಿ ಶಾಸಕರು ಡೋರ್ ಲಾಕ್ ಮಾಡಿಕೊಂಡು, ಗ್ರಾಮ ಲೆಕ್ಕಾಧಿಕಾರಿ ಹಾಗೂ ಸರ್ಕಲ್ ಸೇರಿದಂತೆ ಇತರೆ ಅಧಿಕಾರಿಗಳಿಗೆ ಏಕ ವಚನದಲ್ಲಿ ಪ್ರಶ್ನೆ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.