ಹುಬ್ಬಳ್ಳಿ: ಸೃಷ್ಠಿ ಇನ್ಪೋಟೆಕ್ ಸಂಸ್ಥೆಯಿಂದ ವಿವಾಹಿತ ಮಹಿಳೆಯರಿಗಾಗಿ ಫೆ. 2 ರಂದು ನಗರದ ಕೋಯಿನ್ ರಸ್ತೆಯಲ್ಲಿರುವ ಲಕ್ಷ್ಮಿ ಮಾಲ್ ನಲ್ಲಿ ಮೀಸಸ್ ಇಂಡಿಯಾ ಆಡಿಶನ್ ನಡೆಸಲಾಗುತ್ತಿದೆ ಎಂದು ಸ್ಪರ್ಧೆಯ ಆಯೋಜಕರಾದ ಮಮತಾ ಕಡೆಮನಿ ತಿಳಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಿಸಸ್ ಇಂಡಿಯಾ ಕರ್ನಾಟಕದಲ್ಲಿ 20 ರಿಂದ 40 ಹಾಗೂ 40 ರಿಂದ 60 ವಯಸ್ಸಿನವರು ಎಂಬ ಎರಡು ವಿಭಾಗದಲ್ಲಿ ಸ್ಪರ್ಧೆ ನಡೆಸಲಾಗುತ್ತಿದೆ. ಹಾಗೇ ಈ ಆಡಿಶನ್ ಕೇವಲ ಉತ್ತರ ಕರ್ನಾಟಕದವರಿಗೆ ಮಾತ್ರ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.
ಮಿಸಸ್ ಇಂಡಿಯಾ ಕರ್ನಾಟಕದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಮುಂಚಿತವಾಗಿ ನೋಂದಣಿ ಮಾಡಿಸಬೇಕಿದ್ದು, ಹೆಚ್ಚಿನ ಮಾಹಿತಿಗಾಗಿ 8431225026/8050761859 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಿಸಿದ್ದಾರೆ.