ETV Bharat / state

ಮೈಸೂರಲ್ಲಿ ಮಿಂಚಿದ ಹುಬ್ಬಳ್ಳಿ ಹುಡ್ಗಿ: ಮಿಸ್​ ಯುವ ಕರ್ನಾಟಕ ಪ್ರಶಸ್ತಿಗೆ ಮುತ್ತಿಕ್ಕಿದ ಸಾಂಸ್ಕೃತಿಕ ಸುಂದರಿ - mysore dasara programme

ದಸರಾ ಉತ್ಸವದ ಪ್ರಯುಕ್ತ ಮೈಸೂರಿನಲ್ಲಿ ನಡೆದ ಫ್ಯಾಷನ್​ ಶೋನಲ್ಲಿ ಭಾಗವಹಿಸಿದ್ದ ಹುಬ್ಬಳ್ಳಿಯ ಚಂದ್ರಕಾಂತ್​ ನಗರದ ರಾಘವ ಕಾಲೋನಿಯ ನಿವಾಸಿ ಶ್ವೇತಾ ಮಾಲತೇಶ್​ ಬಾರ್ಕಿ ‘ಮಿಸ್ ಯುವ ಕರ್ನಾಟಕ ಅವಾರ್ಡ್’ ಅನ್ನು ಮುಡಿಗೇರಿಸಿಕೊಂಡಿದ್ದು, ಹುಬ್ಬಳ್ಳಿ ಮಂದಿಯ ಪ್ರೀತಿಗೆ ಪಾತ್ರರಾಗಿದ್ದಾರೆ.

ಮಿಸ್​ ಯವ ಕರ್ನಾಟಕ ಪ್ರಶಸ್ತಿ
author img

By

Published : Oct 3, 2019, 8:43 AM IST

Updated : Oct 3, 2019, 11:18 AM IST

ಹುಬ್ಬಳ್ಳಿ: ಮೈಸೂರು ದಸರಾ ಉತ್ಸವದಲ್ಲಿ ನಡೆದ ಫ್ಯಾಷನ್​ ಶೋನಲ್ಲಿ ಹುಬ್ಬಳ್ಳಿಯ ಶ್ವೇತಾ 'ಮಿಸ್​ ಯುವ ಕರ್ನಾಟಕ ಅವಾರ್ಡ್'​​ ಅನ್ನು ಮುಡಿಗೇರಿಸಿಕೊಂಡಿದ್ದಾರೆ.

ಮಿಸ್​ ಯುವ ಕರ್ನಾಟಕ ಪ್ರಶಸ್ತಿ ಮುಡಿಗೇರಿಸಿಕೊಂಡ ಶ್ವೇತಾ

ದಸರಾ ಉತ್ಸವದ ಪ್ರಯುಕ್ತ ಮೈಸೂರಿನಲ್ಲಿ ನಡೆದ ಮಿಸ್ಟರ್​​ ಆಂಡ್ ಮಿಸ್​ ಯುವ ಕರ್ನಾಟಕ ಫ್ಯಾಷನ್​ ಶೋನಲ್ಲಿ ಭಾಗವಹಿಸಿದ್ದ ಚಂದ್ರಕಾಂತ್​ ನಗರದ ನಿವಾಸಿ ಶ್ವೇತಾ ಮಾಲತೇಶ್​ ಬಾರ್ಕಿ ‘ಮಿಸ್ ಯುವ ಕರ್ನಾಟಕ ಅವಾರ್ಡ್’ ಪಡೆದು, ಹುಬ್ಬಳ್ಳಿ ಮಂದಿಯ ಪ್ರೀತಿಗೆ ಪಾತ್ರರಾಗಿದ್ದಾರೆ.

Dharwad district news
ಮಿಸ್​ ಯವ ಕರ್ನಾಟಕ ಪ್ರಶಸ್ತಿ ಮುಡಿಗೇರಿಸಿಕೊಂಡ ಶ್ವೇತಾ

ಈಗಾಗಲೇ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಶ್ವೇತಾ, 2018ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಸ್ಯಾಂಡಲ್​ವುಡ್​ ಈವೆಂಟ್ಸ್ ಮತ್ತು ಈಶ್ ಈವೆಂಟ್ಸ್ ಆಯೋಜಿಸಿದ್ದ 'ಸಾಂಸ್ಕೃತಿಕ ಸುಂದರಿ' ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದರು.

‌ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕುಟುಂಬ ಹಾಗೂ ನಾಡಿಗೆ ಕೀರ್ತಿ ತರುತ್ತಿರುವ ಇವರಿಗೆ ಅವರ ತಂದೆ ಮಾಲತೇಶ್​ ಬಾರ್ಕಿ ಹಾಗೂ ತಾಯಿ ಮೀನಾಕ್ಷಿ ಅವರು ಬೆಂಗಾವಲಾಗಿ ನಿಂತಿದ್ದಾರೆ. ವಿಶೇಷವೆಂದರೆ ಶ್ವೇತಾಳ ತಂದೆ ಮತ್ತು ತಾಯಿ ಇಬ್ಬರೂ ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಮಗಳ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

Intro:ಹುಬ್ಬಳ್ಳಿ -01

ಮೈಸೂರು ದಸರಾ ಉತ್ಸವದಲ್ಲಿ ನಡೆದ ಫ್ಯಾಶನ್ ಶೋನಲ್ಲಿ ಹುಬ್ಬಳ್ಳಿ ಹುಡುಗಿಯೊಬ್ಬಳು‌ ಪಶಸ್ತಿ ಮುಡಿಗೇರಿಸಿಕೊಂಡಿದ್ದಾಳೆ. ಇಲ್ಲಿನ ಚಂದ್ರಕಾಂತ್ ನಗರದ ರಾಘವ ಕಾಲೋನಿ ನಿವಾಸಿ
ಶ್ವೇತಾ ಮಾಲತೇಶ್ ಬಾರ್ಕಿ ಎಂಬ ಪದವಿ ವಿದ್ಯಾರ್ಥಿನಿ. ಸೆ.29 ಭಾನುವಾರದಿಂದ
ಪ್ರಾರಂಭಗೊಂಡ ಮೈಸೂರು ದಸರಾ ಉತ್ಸವದಲ್ಲಿ ನಡೆದ ಫ್ಯಾಶನ್
ಶೋ ಸ್ಪರ್ಧೆಯಲ್ಲಿ ‘ಮಿಸ್ ಯುವ ಕರ್ನಾಟಕ ಅವಾರ್ಡ್’ ಪ್ರಶಸ್ತಿಯನ್ನು
ತನ್ನದಾಗಿಸಿಕೊಂಡಿದ್ದು, ವಾಣಿಜ್ಯ ನಗರು ಹುಬ್ಬಳ್ಳಿಗೆ ಕೋರ್ತಿಗೆ ತಂದಿದ್ದಾಳೆ.

ಶ್ರೇತಾ ಬಾರ್ಕಿಯವರಿಗೆ ಚಿಕ್ಕಂದಿನಿಂದಲೂ ಪಠ್ಯದ ಜೊತೆಗೆ ಪಠ್ಯೇತರ ಎಂದರೆ ಹೆಚ್ಚು
ಆಸಕ್ತಿ. ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಪದವಿಯವರೆಗೆ ಒಂದಲ್ಲ
ಒಂದು ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಬಾಚಿಕೊಲ್ಳುತ್ತಲೇ ಇದ್ದಾರೆ.
ಕಳೆದ ಬಾರಿ 2018ರ ಬೆಂಗಳೂರಿನಲ್ಲಿ ಸ್ಯಾಂಡ್‍ವುಡ್ ಈವೆಂಟ್ಸ್ ಮತ್ತು ಈಶ್
ಈವೆಂಟ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಸುಂದರಿ ಸ್ಪರ್ಧೆಯಲ್ಲಿ
ಪ್ರಥಮ ಸ್ಥಾನ ಪಡೆದುಕೊಂಡು ಹುಬ್ಬಳ್ಳಿಗೆ ಕೀರ್ತಿ ತಂದಿದ್ದಾಳೆ.‌ಸದಾ
ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಕೊಂಡು ಕುಟುಂಬ ಹಾಗೂ ನಾಡಿಗೆ ಕೀರ್ತಿ
ತರುತ್ತಿರುವ ಇವರಿಗೆ ಅವರ ತಂದೆ ಮಾಲತೇಶ ಬಾರ್ಕಿ ಹಾಗೂ
ತಾಯಿ ಮೀನಾಕ್ಷಿ ಮಾಲತೇಶ ಬಾರ್ಕಿ ಬೆಂಗಾವಲಾಗಿ ನಿಂತಿದ್ದಾರೆ. ವಿಶೇಷವೆಂದರೆ ಶ್ವೇತಾಳ ತಂದೆ ಮತ್ತು ತಾಯಿ
ಇಬ್ಬರೂ ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು,ಮಗಳ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.Body:H B GaddadConclusion:Etv hubli
Last Updated : Oct 3, 2019, 11:18 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.